Advertisement
ಇದು ಇಲ್ಲಿನ ವಿಜಯ ಬ್ಯಾಂಕ್ (ಬ್ಯಾಂಕ್ ಆಫ್ ಬರೋಡಾ) ಶಾಖಾ ಕಚೇರಿಯಲ್ಲಿ ದಿನನಿತ್ಯ ಗ್ರಾಹಕರು, ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಸಾಮಾಜಿಕ ಅಂತರವಿಲ್ಲದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ವಿಜಯ ಬ್ಯಾಂಕ್ 1977ರಲ್ಲಿ ಭಾರತೀನಗರದಲ್ಲಿ ಪ್ರಾರಂಭವಾದಿದ್ದು, ಇಲ್ಲಿಯವರೆಗೆ 48 ಸಾವಿರ ಖಾತೆದಾರರನ್ನು ಹೊಂದಿದೆ. ಸರ್ಕಾರಿ ಸೌಲಭ್ಯ ಪಡೆಯುವ 9 ಸಾವಿರ ಖಾತೆದಾರರಿದ್ದಾರೆ. ಆದರೆ, ಬ್ಯಾಂಕ್ ಆಫ್ ಬರೋಡಾ ಆದ ನಂತರ ಸಮಸ್ಯೆಗಳು ಗ್ರಾಹಕರಿಗೆ ಪ್ರಾರಂಭವಾಗಿದೆ.
Related Articles
Advertisement
ಸಾಮಾಜಿಕ ಅಂತರವಿಲ್ಲ : ಈ ಬಗ್ಗೆ ವಿಚಾರಿಸಲು ಬ್ಯಾಂಕ್ ತೆರಳಿದ ಖಾತೆದಾರರಿಗೆ ಮತ್ತೂಮ್ಮೆ ಆಧಾರ್, ಪಾನ್ ಕಾರ್ಡ್ ನೀಡಿ ಖಾತೆಯನ್ನು ಚಾಲನೆ ಮಾಡಿಸಿಕೊಳ್ಳುವಂತೆ ತಿಳಿಸಿದ್ದರಿಂದ ದಿನ ನಿತ್ಯ ಬ್ಯಾಂಕ್ ಮುಂದೆ ಜನವೋ ಜನ ಯಾವುದೇ ಸಾಮಾಜಿಕ ಅಂತರವಿಲ್ಲದೆ ಮುಗಿ ಬಿಳುತಿದ್ದರು. ವಿವಿಧ ಯೋಜನೆಯ ಹಣ ಪಡೆಯಲು ಖಾತೆದಾರರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಬ್ಯಾಂಕ್ ಸಮೀಪದ ಅಂಗಡಿಗಳಿಗೂ ತೊಂದರೆಯಾಗುತಿದ್ದರೂ, ಬ್ಯಾಂಕ್ ಅಧಿಕಾರಿಗಳು ಇದಕ್ಕೂ ನಮಗೂ ಸಂಬಂಧವಿಲ್ಲ ಎನ್ನುವಂತಿದೆ.
ವಿಜಯ ಬ್ಯಾಂಕ್- ಬ್ಯಾಂಕ್ ಆಫ್ ಬರೋಡಾಗೆ ವಿಲೀನವಾದ ಮೇಲೆ ಗ್ರಾಹಕರಿಗೆ ಸಮಸ್ಯೆಯಾಗಿದೆ. ನಮ್ಮ ಸಿಬ್ಬಂದಿ ವೇಗವಾಗಿ ಎಲ್ಲಾ ಗ್ರಾಹಕರಿಗೂ ಖಾತೆ ಬದಲಾವಣೆ ಬಗ್ಗೆ ಮಾಹಿತಿ ನೀಡಿ, ಸಮಸ್ಯೆ ಪರಿಹರಿಸುತ್ತಿದ್ದಾರೆ. ಗ್ರಾಹಕರು ಬ್ಯಾಂಕ್ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಇಲ್ಲಿ ಯಾವುದೇ ಸಮಸ್ಯೆ ಇಲ್ಲ. ಸರ್ಕಾರಿ ಯೋಜನೆ ಪಡೆಯುವ ಖಾತೆದಾರರ ಮನೆ ಬಳಿಯೇ ಹಣ ನೀಡುವ ವ್ಯವಸ್ಥೆ ಮಾಡಿದ್ದೇವೆ. ಆದರು ಸಹ ಹಣ ಬಂದಿದೆಯೇ ಎಂದು ಪಾಸ್‌ಬುಕ್ ಹಿಡಿದು ಬರುತ್ತಾರೆ. –ಡಿ.ಎನ್.ಗಿರೀಶ್, ಬ್ಯಾಂಕ್ ಶಾಖೆಯ ಹಿರಿಯ ಪ್ರಬಂಧಕ, ವಿಜಯ ಬ್ಯಾಂಕ್ (ಬ್ಯಾಂಕ್ ಆಫ್ ಬರೋಡಾ)
ಕಳೆದ 15 ದಿನದಿಂದ ನೂರಾರು ಮಂದಿ ಗ್ರಾಹಕರು ಬ್ಯಾಂಕ್ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಪ್ರತಿಯೊಬ್ಬರಿಗೂ ಹಣ ಅಗತ್ಯವಿದೆ. ಆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಇತರರಿಗೂ ಆತಂಕ ಉಂಟುಮಾಡಿದೆ. ಪ್ರಸ್ತುತ ದೇಶದಲ್ಲಿ ಕೊರೊನಾ ಹೆಚ್ಚಾಗುತ್ತಿದೆ. ಇದನ್ನು ಎಲ್ಲರೂ ತಿಳಿದುಕೊಳ್ಳಬೇಕು. –ವಿನಯ್, ಮೆಳ್ಳಹಳ್ಳಿ ಗ್ರಾಹಕ
–ಅಣ್ಣೂರು ಸತೀಶ್