Advertisement

ರಫೇಲ್‌ ಹೆಸರಿಂದ ಬೇಸತ್ತ ಜನ!

11:01 PM Apr 15, 2019 | Team Udayavani |

ಹೊಸದಿಲ್ಲಿ: ರಫೇಲ್‌ ಯುದ್ಧ ವಿಮಾನ ಖರೀದಿ ವಿವಾದದ ತೀವ್ರಗೊಂಡ ಬಳಿಕ ಛತ್ತೀಸ್‌ಗಡ‌ದ ಹಳ್ಳಿಯ ಜನರಿಗೆ ತಮ್ಮೂರಿನ ಹೆಸರನ್ನೂ ಹೇಳಲು ಮುಜುಗರವಾಗುವಂಥ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ, ಆ ಹಳ್ಳಿಯ ಹೆಸರೂ “ರಫೇಲ್‌’!

Advertisement

ಛತ್ತೀಸ್‌ಗಡ‌ದ ಮಹಾಸಮುಂದ್‌ ಲೋಕಸಭಾ ಕ್ಷೇತ್ರದ ಈ ಪುಟ್ಟ ಹಳ್ಳಿಯಲ್ಲಿ 200 ಮನೆಗಳಿವೆಯಷ್ಟೆ. ಆದರೆ, ಇತ್ತೀಚೆಗೆ ತಮ್ಮ ಹಳ್ಳಿಯ ಹೆಸರಿನಿಂದಾಗಿ ಸಾರ್ವಜನಿಕ ಜೀವನದಲ್ಲಿ ತಲೆ ತಗ್ಗಿಸುವಂತಾಗುತ್ತದೆ ಎಂಬುದು ಈ ಹಳ್ಳಿ ಜನರ ಕೂಗು. “ನಮ್ಮ ಹಳ್ಳಿಯಲ್ಲಿ ಈವೆರೆಗೆ ಒಂದೇ ಒಂದು ಪೊಲೀಸ್‌ ಕೇಸು ದಾಖಲಾಗಿಲ್ಲ. ಆದರೆ, ರಫೇಲ್‌ ಕೆಸರೆರಚಾಟದ ನಡುವೆ ಈ ಹಳ್ಳಿಯ ಮರ್ಯಾದೆಗೆ ಕುಂದುಂಟಾಗುತ್ತಿದೆ’ ಎನ್ನುತ್ತಾರೆ ಈ ಹಳ್ಳಿಗರು.

ಧರಮ್‌ ಸಿಂಗ್‌ (83) ಎಂಬ ವಯೋವೃದ್ಧರು ಹೇಳುವ ಪ್ರಕಾರ, “ಈ ಹಳ್ಳಿಯ ಜನರನ್ನು ಅಕ್ಕಪಕ್ಕದ ಹಳ್ಳಿಗರು ಯಾವತ್ತೂ ಕಿಚಾಯಿಸುತ್ತಾರೆ. ಇತ್ತೀಚೆಗೆ ಮುಖ್ಯಮಂತ್ರಿ ಕಚೇರಿಗೂ ನಾವು ಹೋಗಿ ಹಳ್ಳಿಯ ಹೆಸರನ್ನು ಕೂಡಲೇ ಬದಲಾಯಿಸಬೇಕೆಂದು ಅವರ ಬಳಿ ಮನವಿಯನ್ನೂ ಮಾಡಿದ್ದೇವೆ ಮಾಡಿದ್ದೇವೆ” ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next