Advertisement

“ಮತ್ತೂಮ್ಮೆ ಮೋದಿ’ಕೂಗಿಗೆ ಜನಬೆಂಬಲ

09:01 AM Nov 03, 2018 | Harsha Rao |

ಹೊಸದಿಲ್ಲಿ: ದಕ್ಷಿಣ ಭಾರತ ಹೊರತುಪಡಿಸಿ, ಭಾರತದ ಇತರ ಪ್ರಾಂತ್ಯಗಳ ಶೇ. 46ರಷ್ಟು ಜನರು ಪ್ರಧಾನಿ ನರೇಂದ್ರ ಮೋದಿಯವರೇ ಮತ್ತೂಮ್ಮೆ ಪ್ರಧಾನಿಯಾಗಿ ಆರಿಸಿ ಬರಲೆಂದು ಆಶಿಸಿರುವುದಾಗಿ ಸಮೀûಾ ವರದಿಯೊಂದು ತಿಳಿಸಿದೆ. 

Advertisement

ಇಂಡಿಯಾ ಟುಡೇ ಸುದ್ದಿವಾಹಿನಿಯ “ಪೊಲಿಟಿಕಲ್‌ ಸ್ಟಾಕ್‌ ಎಕ್ಸ್‌ಚೇಂಜ್‌’ (ಪಿಎಸ್‌ಇ) ಕಾರ್ಯಕ್ರಮದಲ್ಲಿ ಬಿಂಬಿತವಾದ ಈ ಸಮೀಕ್ಷೆಯಲ್ಲಿ ಶೇ. 32ರಷ್ಟು ಜನ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಧಾನಿ ಸ್ಥಾನಕ್ಕೆ ಸೂಕ್ತ ಎಂದಿದ್ದಾರೆ. ಇನ್ನು, ಶೇ. 22ರಷ್ಟು ಜನರು “ಗೊತ್ತಿಲ್ಲ’ ಎಂದು ಹೇಳಿದ್ದಾರೆ.

ಅಲ್ಲೂ ಮೋದಿಗೇ ಬೆಂಬಲ: ಅಂತರ್ಜಾಲ ಸುದ್ದಿ ಜಾಲತಾಣವಾದ “ಡೈಲಿ ಹಂಟ್‌’ ಹಾಗೂ “ನೀಲ್ಸನ್‌’ ಸಂಸ್ಥೆ ಜಂಟಿಯಾಗಿ ನಡೆಸಿರುವ ಮತ್ತೂಂದು ಸಮೀಕ್ಷೆಯಲ್ಲಿ ಶೇ. 63ರಷ್ಟು ಭಾರತೀಯರು ನರೇಂದ್ರ ಮೋದಿಯವರು ಪುನಃ ಪ್ರಧಾನಿಯಾಗುವ ಬಗ್ಗೆ ಒಲವು ತೋರಿದ್ದಾರೆ. ಸುಮಾರು 54 ಲಕ್ಷ ಜನರು ಆನ್‌ಲೈನ್‌ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ ರಾಹುಲ್‌ ಗಾಂಧಿ ಪ್ರಧಾನಿಯಾಗಲೆಂದು ಶೇ. 17ರಷ್ಟು ಜನರು ಆಶಿಸಿದ್ದರೆ, ಅರವಿಂದ್‌ ಕೇಜ್ರಿವಾಲ್‌ (ಶೇ. 8), ಅಖೀಲೇಶ್‌ ಯಾದವ್‌ (ಶೇ. 3), ಮಾಯಾವತಿ (ಶೇ. 2) ಕೂಡ ಪ್ರಧಾನಿ ಯಾಗಬೇಕೆಂದು ಕೆಲವರು ಆಲೋಚಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next