Advertisement
ಅಲ್ಲಿನ ಜನರದ್ದು ಈಗ ಆಹಾರಕ್ಕಾಗಿಯೇ ಹೋರಾಡುವ ಸ್ಥಿತಿ. ವಿಶ್ವಬ್ಯಾಂಕ್ ಅಂಕಿ ಅಂಶಗಳ ಪ್ರಕಾರ 2010 ರಿಂದ ಇಲ್ಲಿನ ಆರ್ಥಿಕ ಬೆಳವಣಿಗೆಯು ವರ್ಷಕ್ಕೆ 1.8 ಪ್ರತಿಶತದಷ್ಟಿದೆ. ಇದು ಹಿಂದಿನ ವಾರ್ಷಿಕ ಸರಾಸರಿಗಿಂತ ಕಡಿಮೆ. 2007 ಬೆನ್ ಅಲಿ ನೇತೃತ್ವದಲ್ಲಿ ನಿರುದ್ಯೋಗವು ಶೇ. 12 ರಷ್ಟು ತಲುಪಿತ್ತು. 2011 ರ ದಂಗೆಯ ಸಮಯದಲ್ಲಿ ಅದು 18 ಪ್ರತಿಶತಕ್ಕೆ ಏರಿತು. ಈ ವರ್ಷ 15 ಕ್ಕೆ ಕುಸಿದಿದೆ.ಕೋವಿಡ್19 ವೈರಸ್ ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎರಡು ವಾರ ರಾಷ್ಟ್ರವ್ಯಾಪಿ ಲಾಕ್‌ಡೌನ್ ವಿಧಿಸಲು ಸರ್ಕಾರ ಕೈಗೊಂಡ ನಿರ್ಧಾರ ಜನರನ್ನು ಸಂಕಷ್ಟಕ್ಕೀಡು ಮಾಡಿದೆ. ಈಗ ಲಾಕ್‌ಡೌನ್ ನ್ನು ಎಪ್ರಿಲ್ 19 ರ ವರೆಗೆ ವಿಸ್ತರಿಸಲಾಗಿದೆ.
ಅರ್ಥಿಕತೆ ಸ್ಥಗಿತದ ದುಷ್ಪರಿಣಾಮ ತಗ್ಗಿಸಲು ಹಾಗೂ ಸಾಮಾಜಿಕ ಅಶಾಂತಿಯನ್ನು ನಿವಾರಿಸುವ ಪ್ರಯತ್ನದಲ್ಲಿ ಪ್ರಧಾನ ಮಂತ್ರಿ ಎಲೀಸ್ ಫಖ್‌ಫಾಕ್ 2.5 ಬಿಲಿಯನ್ ದಿನಾರ್ ಹಂಚಿಕೆ ಮಾಡುವುದಾಗಿ ಘೋಷಿಸಿದರು. ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳ ಮೇಲಿನ ತೆರಿಗೆ ವಸೂಲಿ ಮುಂದೂಡಿಕೆ ಹಾಗೂ ಕಡಿಮೆ ಆದಾಯದ ಮರುಪಾವತಿಯನ್ನು ವಿಳಂಬಿಸುವುದರ ಜತೆಗೆ ಬಡಕುಟುಂಬಗಳಿಗೆ ಸಹಾಯ ಮಾಡಲು 450 ಮಿಲಿಯನ್ ದಿನಾರ್‌ಗಳನ್ನು ಈ ಪ್ಯಾಕೆಜ್ ಒಳಗೊಂಡಿದೆ. ಆದರೆ ಟುನೇಶಿಯಾದಲ್ಲಿ ಕೂಲಿ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ. ಅವರ ಜೀವನೊಪಾಯಕ್ಕೆ ತೀರಾ ಹೊಡೆತ ಬಿದ್ದಿದೆ.
Related Articles
ಸರಕಾರದ ಕಾನೂನು ಕ್ರಮವನ್ನು ವಿರೋಧಿಸಿ ದೇಶದ ವಿವಿಧ ಭಾಗಗಳಲ್ಲಿ ನೂರಾರು ಜನ ತಮ್ಮ ಸ್ಥಳೀಯ ಸರಕಾರಿ ಕಚೇರಿಗಳ ಎದುರು ಪ್ರತಿಭಟನೆ ಆರಂಭಿಸಿದರು. ಮೂಲ ಆದಾಯವನ್ನು ಕಳೆದುಕೊಂಡ ಜನರು ಸ್ವಯಂ ಪ್ರೇರಿತರಾಗಿ ಹೊರಬಂದು ತಮ್ಮ ಹಸಿವನ್ನು ನೀಗಿಸುವಂತೆ ಪ್ರತಿಭಟಿಸಿದರು ಎಂದು ಅಲ್ಲಿನ ಕಾರ್ಮಿಕ ವರ್ಗದ ಮಾರ್ವನ್ ಜೆಲ್ಲಾಸಿ ಅಂತಾರಾಷ್ಟ್ರೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.
Advertisement