Advertisement

ಜನರು ಪೊಲೀಸರಿಗೆ ಸಹಕರಿಸಬೇಕು

03:49 PM Dec 25, 2019 | Team Udayavani |

ನಾಗಮಂಗಲ: ಪೊಲೀಸರೆಂದರೆ ಸಾರ್ವಜನಿಕರಲ್ಲಿ ಒಂದು ರೀತಿಯ ಭಯದ ವಾತಾವರಣವಿದ್ದು ಠಾಣೆಯ ಮೆಟ್ಟಿಲೇರಲು ಹೆದರುತ್ತಾರೆ. ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬಿ ಇಂತಹ ವಾತಾವರಣದಿಂದ ಹೊರಗೆ ತರಬೇಕಾದ ಕೆಲಸವಾಗಬೇಕು ಎಂದು ನಾಗಮಂಗಲ ಉಪವಿಭಾಗದ ಡಿವೈಎಸ್ಪಿ ವಿಶ್ವನಾಥ್‌ ಹೇಳಿದರು.

Advertisement

ಪಟ್ಟಣದ ಟಿ.ಬಿ.ಬಡಾವಣೆಯ ಅಂಬೇಡ್ಕರ್‌ ಭವನದಲ್ಲಿ ಏರ್ಪಡಿಸಿದ್ದ ಪೊಲೀಸ್‌ ಜನಸ್ನೇಹಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಪೊಲೀಸರು ಮತ್ತು ನಾಗರಿಕರಲ್ಲಿ ಒಂದು ರೀತಿಯ ಸಂಬಂಧವಿದೆ. ಅನೇಕ ಪ್ರಕರಣಗಳಲ್ಲಿ ಸಾಕಷ್ಟು ಸುಳಿವುಗಳು ಅಪರಾಧಿಗಳನ್ನು ಹಿಡಿಯಲು ಸಹಕಾರಿಯಾಗುತ್ತದೆ. ಆದರೂ ಸಾರ್ವಜನಿಕರು ಭಯಭೀತರಾಗಿಯೇ ಠಾಣೆ ಮೆಟ್ಟಿಲು ಏರುವುದರ ಜತೆಗೆ ಪೊಲೀಸರೆಂದರೆ ಹೆದರುತ್ತಾರೆ. ನಾವು ಸಹ ಅವರಿಗೆ ಸ್ನೇಹಿತರು ಎಂಬ ವಾತಾವರಣವನ್ನು ಸೃಷ್ಟಿಮಾಡಬೇಕು ಎಂದರು.

ವೃತ್ತ ನಿರೀಕ್ಷಕ ರಾಜೇಂದ್ರ ಮಾತನಾಡಿ, ಸಾರ್ವಜನಿಕರು ಅಪರಾಧ ಪ್ರಕರಣದ ಬಗ್ಗೆ ದೂರು ನೀಡಲು ಬಂದರೆ ದಾಖಲು ಮಾಡಲು ತಡ ಮತ್ತು ಹಿಂಜರಿಯುತ್ತಿರುವುದರಿಂದ ಅಪರಾಧಿಗಳು ತಪ್ಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಅಪರಾಧಿಗಳನ್ನು ಪೊಲೀಸರೇ ರಕ್ಷಿಸುತ್ತಾರೆಂಬ ಅಪವಾದದಿಂದ ನಾವು ಹೊರಬರಬೇಕಾಗಿದೆ. ಒಂದೊಂದು ಬಾರಿ ನಿರಪರಾಧಿಗಳನ್ನು ಅಪರಾಧಿಗಳನ್ನಾಗಿ ಮಾಡುವ ಸಂದರ್ಭಗಳು ಉಂಟಾಗುತ್ತವೆ.

ಅಂಥ ಪ್ರಕರಣಗಳನ್ನು ಸೂಕ್ಷ್ಮವಾಗಿ ಅವಲೋಕಿಸಬೇಕಾದ ಕರ್ತವ್ಯ ಪೊಲೀಸರದೆಂದು ತಿಳಿಸಿದರು. ಜನಸ್ನೇಹಿ ಪೊಲೀಸ್‌ ಕಾರ್ಯಾಗಾರ 2017ರಲ್ಲಿ ಪ್ರಾರಂಭವಾಗಿ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಈ ವರ್ಷವೂ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಮುಂದುವರೆದು ಮತ್ತೂಮ್ಮೆ ಯಶಸ್ವಿಗೊಳಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.  ಪಿಎಸ್‌ಐಗಳಾದ ರವಿಕಿರಣ್‌, ಬಸವರಾಜ್‌, ರಾಮಚಂದ್ರು, ಲಕ್ಷ್ಮಣ್‌, ಶಿವಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next