Advertisement
ಬನ್ನೇರುಘಟ್ಟ ಕಗ್ಗಲಿಪುರ ರಸ್ತೆಯಲ್ಲಿನ ಜನರು ವಾಕಿಂಗ್ ಮಾಡಲು ಬಾಲಾಜಿ ಕಲ್ಯಾಣ ಮಂಟಪದ ಬಡಾವಣೆಯ ರಸ್ತೆಯಲ್ಲಿ ಹೋಗುತ್ತಿದ್ದಂತೆ 8 ಆನೆಗಳ ತಂಡ ಕಂಡು ಕೆಲವರು ದಿಕ್ಕಾಪಾಲಗಿ ಓಡಿದ್ದರು. ಸುದ್ದಿ ತಿಳಿದು ಸ್ಥಳೀಯರು ಗುಂಪು ಸೇರಿ ಆನೆಗಳ ಕಾಲಿಗೆ ಕಬ್ಬಣದ ಸರಪಳಿ ಇರುವುದನ್ನು ಕಂಡು ಪಾರ್ಕಿನ ಆನೆಗಳು ಎಂದು ಸಮಾಧಾನ ದಿಂದ ಹತ್ತಿರ ಬಂದು ಮೊಬೈಲ್‌ಗಳಲ್ಲಿ ಪೋಟೋ ತೆಗೆದುಕೊಂಡರು ಇನ್ನು ಕೆಲವರು ಸಮೀಪಕ್ಕೆ ಹೋಗಿ ಸೆಲ್ಪಿ ತೆಗೆದು ಕೊಂಡು ಖುಷಿಪಟ್ಟರೆ, ಕೆಲವರು ಫೇಸ್‌ಬುಕ್ ಲೈವ್ ಸಹ ಬಿಟ್ಟು ಎಲ್ಲರೂ ನೋಡಲು ಅವಕಾಶ ಕಲ್ಪಿಸಿದರು.
ಸದ್ಯ ಹೊಲ ತೋಟಗಳು ಮಾಯವಾಗಿ ಮನೆಗಳು ತಲೆ ಎತ್ತಿವೆ. ಅಂಗಡಿಗಳು, ಅಷ್ಟೇ ಅಲ್ಲದೆ ಬಾರ್ ಸಹ ಆರಂಭವಾಗಿದೆ ಇಂತಹ ಜಾಗದಲ್ಲಿ ಆನೆಗಳು ಬಂದಿದ್ದು , ಇಳಿಜಾರಿನ ಬೆಟ್ಟ ಇಳಿದು ಬಂದಿದ್ದು ಮಾತ್ರ ತೀವ್ರ ಕುತೂಹಲ ಕೆರಳಿಸಿತ್ತು.
Related Articles
Advertisement
ಆಗ್ರಹ: ಉದ್ಯಾನವನದ ಸಾಕಾನೆಗಳು ದೇವಾಲಯದ ಪೈಪ್ ಗಳನ್ನು ಹಾಳುಮಾಡಿದೆ, ಗುರುವಾರ ಸಹ ಒಣಹುಲ್ಲಿನ ಮೆದೆ, ಬಾಳೆ ಗಿಡಗಳನ್ನು ತಿಂದು , ತುಳಿದು ಹಾಕಿದೆ. ಹೀಗೆ 8 ಆನೆಗಳು ಒಮ್ಮೆ ಬಂದರೆ ಎಷ್ಟು ಫಜೀತಿ ಮಾಡಿ ಹೋಗುತ್ತವೆ. ಪಾರ್ಕಿನ ಅಧಿಕಾರಿಗಳು ಆನೆಗಳನ್ನು ತಮ್ಮ ವ್ಯಾಪ್ತಿಯಲ್ಲಿ ಇರುವಂತೆ ವ್ಯವಸ್ಥೆ ಮಾಡಬೇಕು ಇಲ್ಲವಾದರೆ ಪಾರ್ಕ್ ಮುಂದೆ ತೀವ್ರ ಪತ್ರಿಭಟನೆ ಮಾಡ ಬೇಕಾಗುತ್ತದೆ ಎಂದು ಬನ್ನೇರುಘಟ್ಟದ ಶ್ರೀ ಚಂಪಕಧಾಮಸ್ವಾಮಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎ.ಸಂಪಂಗಿರಾಮಯ್ಯ ಎಚ್ಚರಿಕೆ ನೀಡಿದರು.
ಆನೆ ಬಂದಿದ್ದು ಹೇಗೆ?: ಬನ್ನೇರುಘಟ್ಟ ಸುತ್ತ ಮುತ್ತಲ ಕೆಲ ಹಳ್ಳಿಗಳಲ್ಲಿ ಕಾಡಾನೆಗಳು ಬಂದು ಹೋಗುವುದು ಸಾಮಾನ್ಯ ಸಂಗತಿ ಆದರೆ ಸಾಕಾನೆಗಳು ಬಂದು ಫಜಿತಿ ಮಾಡುವುದು ಇದೇ ಮೊದಲು. ಸಹಜವಾಗಿ ಉದ್ಯಾನದಲ್ಲಿನ ಸಾಕಾನೆಗಳನ್ನು ರಾತ್ರಿ ವೇಳೆ ಕಾಡಿಗೆ ಬಿಡುವುದು ಮುಂಜಾನೆ ಆನೆ ಶಿಬಿರಕ್ಕೆ ತರೆದು ತರುವುದು ವಾಡಿಕೆ. ರಾತ್ರಿ ವೇಳೆ ಕಾಡಿನಲ್ಲಿ ಸುತ್ತಾಡುವ ಆನೆಗಳು ಹೀಗೆ ಒಂದೊಂದು ಸಾರಿ ಹಳ್ಳಿಗಳತ್ತ ಬಂದು ರದ್ಧಾಂತ ಸೃಷ್ಟಿಸುತ್ತವೆ.