ಮಂಡ್ಯ: ವರ್ಷಾರಂಭ ಹಿನ್ನೆಲೆಯಲ್ಲಿ ಜನರು ಹೊಸ ವರ್ಷದ ಮೊದಲ ದಿನದ ಅಂಗವಾಗಿ ಜಿಲ್ಲೆಯ ವಿವಿಧ ಪ್ರಸಿದ್ಧ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಕೋವಿಡ್ ಸೋಂಕು ಹರಡುವ ಹಿನ್ನೆಲೆಯಲ್ಲಿ ವರ್ಷಾಚರಣೆ ಪೊಲೀಸ್ ಇಲಾಖೆ ಕಡಿವಾಣ ಹಾಕಿತ್ತು. ಜಿಲ್ಲೆಯಲ್ಲಿಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಹೊಸವರ್ಷವನ್ನು ಜನರು ಮನೆಯಲ್ಲಿಯೇ ಆಚರಿಸಿದರು.
ದೇಗುಲಗಳಿಗೆ ಭೇಟಿ: ಹೊಸ ವರ್ಷದ ಹಿನ್ನೆಲೆಯಲ್ಲಿ ಶುಭ ಶುಕ್ರವಾರವೇಬಂದಿದ್ದರಿಂದ ಮುಂಜಾನೆಯಿಂದಲೇದೇವಾಲಯಗಳಿಗೆ ತಂಡೋಪತಂಡವಾಗಿ ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದುವರ್ಷವೆಲ್ಲ ಜೀವನ ಸುಖಕರವಾಗಿರಲಿ. ಕೋವಿಡ್ ದಂಥ ಸೋಂಕುಗಳು ನಿವಾರಣೆಯಾಗಿ ನಾಡು ಸುಭಿಕ್ಷವಾಗಲಿ ಎಂದು ಪ್ರಾರ್ಥಿಸಿದರು.
ಭಕ್ತರಿಂದ ತುಂಬಿದ ದೇಗುಲಗಳು: ಮಂಡ್ಯ ನಗರದ ಕಾಳಿಕಾಂಭ, ಕಲ್ಲಹಳ್ಳಿಆಂಜನೇಯಸ್ವಾಮಿ, ಹೊಸಹಳ್ಳಿಯ ಶನೇಶ್ವರಸ್ವಾಮಿ, ಪೇಟೆಬೀದಿಯಲಕ್ಷ್ಮೀಜನಾರ್ಧನ, ಬೋವಿ ಕಾಲೋನಿಯ ಶ್ರೀನಿವಾಸ, ಹೊಸಹಳ್ಳಿಯವೆಂಕಟೇಶ್ವರ ದೇವಾಲಯ, ಶ್ರೀರಂಗಪಟ್ಟಣ ಶ್ರೀರಂಗನಾಥ ಸ್ವಾಮಿ, ನಿಮಿಷಾಂಭ, ಮೇಲುಕೋಟೆಚಲುವನಾರಾಯಣ ಸ್ವಾಮಿ, ಮದ್ದೂರಿನಹೊಳೆ ಆಂಜನೇಯ ಸ್ವಾಮಿ, ವರದರಾಜ ಸ್ವಾಮಿ, ನಾಗಮಂಗಲದ ಚನ್ನಕೇಶವಸ್ವಾಮಿ, ಮಳವಳ್ಳಿ ಲಕ್ಷ್ಮೀನರಸಿಂಹ ಸ್ವಾಮಿ, ಕೆ.ಆರ್.ಪೇಟೆ ಗವಿಗಂಗಾಧರೇಶ್ವರ ಸ್ವಾಮಿ, ವೆಂಕಟೇಶ್ವರ ಹಾಗೂ ಕಿಕ್ಕೇರಿ ಸೇರಿದಂತೆ ಪ್ರಸಿದ್ಧ ದೇವಾಲಯಗಳಿಗೆ ಭಕ್ತರು ಶುಕ್ರವಾರಬೆಳಗ್ಗೆ ಹಾಗೂ ಸಂಜೆ ಭೇಟಿ ನೀಡಿ ದೇವರದರ್ಶನ ಪಡೆದು ಪುನೀತರಾದರು.
ಪೊಲೀಸ್ ಬಿಗಿ ಭದ್ರತೆ: ಮಂಡ್ಯ ನಗರದಲ್ಲಿ ಕೆಲವರು ಡಿ.31ರ ರಾತ್ರಿ ಬೀದಿಗಿಳಿದು ಪಟಾಕಿ ಹೊಡೆದು 2021ಹೊಸ ವರ್ಷವನ್ನು ಬರ ಮಾಡಿಕೊಂಡರು. ಮಂಡ್ಯ ನಗರಸೇರಿದಂತೆ ಮದ್ದೂರು, ಶ್ರೀರಂಗಪಟ್ಟಣ, ಮಳವಳ್ಳಿ, ಪಾಂಡವಪುರ, ನಾಗಮಂಗಲ ಹಾಗೂ ಕೆ.ಆರ್.ಪೇಟೆ ಪಟ್ಟಣಗಳ ಪ್ರಮುಖ ಬೀದಿ, ರಸ್ತೆಗಳಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ರಸ್ತೆಗಳು ಖಾಲಿ ಖಾಲಿ: ರಾತ್ರಿ 10 ಗಂಟೆಯಾಗುತ್ತಿದ್ದಂತೆ ಅಂಗಡಿ- ಮುಂಗಟ್ಟು, ವ್ಯಾಪಾರ, ಮದ್ಯದಂಗಡಿಗಳನ್ನು ಮುಚ್ಚಿಸಿದ ಪೊಲೀಸರು, ಪ್ರಮುಖ ವೃತ್ತ, ಜನ ಸೇರುವ ಕಡೆ ನಿಗಾವಹಿಸಿದರು. ಇದರಿಂದ ನಗರದರಸ್ತೆಗಳೆಲ್ಲ ಖಾಲಿ ಖಾಲಿಯಾಗಿದ್ದವು.
ಬೇಕರಿ ವರ್ತಕರಿಗೆ ತೊಂದರೆ: ಹೊಸ ವರ್ಷ ಹಿನ್ನೆಲೆಯಲ್ಲಿ ನಗರದ ಬೇಕರಿ ಅಂಗಡಿಗಳು ವಿಶೇಷ ಮಾದರಿಯ ಕೇಕ್ ಗಳನ್ನು ತಯಾರಿಸಿ ಮಾರಾಟಕ್ಕಿಟ್ಟಿದ್ದರು.ಆದರೆ, ರಾತ್ರಿ 10 ಗಂಟೆಗೆ ಎಲ್ಲಅಂಗಡಿಗಳನ್ನು ಪೊಲೀಸರು ಬಾಗಿಲುಮುಚ್ಚಿಸಿದ್ದರಿಂದ ವ್ಯಾಪಾರಕ್ಕೆ ತೊಂದರೆಯಾಯಿತು. ಬೆಳಗ್ಗೆಯಿಂದಲೂ ಉತ್ತಮವಾಗಿ ವ್ಯಾಪಾರವಾಗಿತ್ತು. ಆದರೂ,ರಾತ್ರಿಯಾದರೂ ಸಾಕಷ್ಟು ಸಂಖ್ಯೆಯಲ್ಲಿಗ್ರಾಹಕರು ಕೇಕ್‌ಗಳ ಖರೀದಿಗೆ ಮುಗಿ ಬಿದ್ದಿದ್ದ ದೃಶ್ಯಗಳು ಕಂಡು ಬಂದವು.