Advertisement

ಬಂದ್.. ಬಂದ್: ಬೆಂಗಳೂರಿನಿಂದ ಹೊರಡುತ್ತಿದ್ದಾರೆ ಸಾವಿರಾರು ಜನ

10:28 AM Apr 27, 2021 | Team Udayavani |

ಬೆಂಗಳೂರು: ಕೋವಿಡ್-19 ಸೋಂಕು ಹರಡುವುದನ್ನು ತಡೆಯುವ ಕಾರಣದಿಂದ ರಾಜ್ಯ ಸರ್ಕಾರ 14 ದಿನಗಳ ಕಾಲ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದೆ. ಇಂದು ರಾತ್ರಿಯಿಂದ ಮುಂದಿನ 14 ದಿನಗಳ ಕಾಲ ಸಂಚಾರ ಸೇರಿದಂತೆ ಎಲ್ಲವೂ ಸ್ಥಗಿತವಾಗಲಿದೆ. ಕೇವಲ ಅಗತ್ಯ ವಸ್ತುಗಳ ಮಾರಾಟ ಮತ್ತು ಖರೀದಿಗೆ ಅವಕಾಶ ನೀಡಲಾಗಿದೆ.

Advertisement

ರಾಜ್ಯದಲ್ಲಿ ಕೆಎಸ್ಆರ್ ಟಿಸಿ ಸೇರಿದಂತೆ ಎಲ್ಲಾ ಬಗೆಯ ಬಸ್ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಇಂದು ರಾತ್ರಿಯ ಬಳಿಕ ಖಾಸಗಿ ವಾಹನಗಳ ಓಡಾಟಕ್ಕೂ ಅವಕಾಶವಿಲ್ಲ. ಹಾಗಾಗಿ ಬೆಂಗಳೂರಿನಲ್ಲಿರುವ ಜನರು ಸಂಪೂರ್ಣ ಬಂದ್‍ ಆಗುವ ಮೊದಲು ತಮ್ಮ ಊರು ಸೇರುವ ತವಕದಲ್ಲಿದ್ದಾರೆ.

ಇದನ್ನೂ ಓದಿ:ದೇಶದಲ್ಲಿ ಕೋವಿಡ್ ಮಹಾಸ್ಪೋಟ : 24 ಗಂಟೆಗಳಲ್ಲಿ 3 ಲಕ್ಷ ದಾಟಿದ ಪ್ರಕರಣಗಳು

ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆ ನಗರದಲ್ಲಿ ಉದ್ಯೋಗದಲ್ಲಿದ್ದುಕೊಂಡು ಬಾಡಿಗೆ ರೂಮ್ ಮಾಡಿಕೊಂಡಿರುವ ಯುವಕರು ಸೇರಿದಂತೆ ಹೆಚ್ಚಿನವರು ಗಂಟು ಮೂಟೆ ಕಟ್ಟಿ ಊರಿಗೆ ಹೊರಡುವ ಬಸ್ ಹತ್ತಿದ್ದಾರೆ. ಇನ್ನೂ ಎರಡು ವಾರಗಳ ಕಾಲ ರೂಮ್ ನಲ್ಲಿದ್ದುಕೊಂಡು ಏನು ಮಾಡುವುದು, ಊಟಕ್ಕೆ ಏನು ಮಾಡುವುದು ಎಂಬ ಆತಂಕದಲ್ಲಿ ತಮ್ಮ ಊರಿನ ಬೋರ್ಡ್ ಇರುವ ಬಸ್ ಹುಡುಕುವ ದೃಶ್ಯಗಳು ಇಂದೂ ಕಂಡು ಬಂತು.

ಮೆಜಸ್ಟಿಕ್ ನಲ್ಲಿ ಬಸ್ ಗೆ ಕಾಯುವವರ ಸಂಖ್ಯೆ ಇಂದು ಹೆಚ್ಚಾಗಿದೆ. ಕರಾವಳಿ, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ನಾನಾ ಕಡೆಯಿಂದ ಬಂದು ರಾಜಧಾನಿಯಲ್ಲಿ ಉದ್ಯೋಗದಲ್ಲಿರುವವರು ಲಾಕ್ ಡೌನ್ ಆರಂಭವಾಗುವ ಮೊದಲು ಊರು ಸೇರಿದರಾಯಿತು ಎಂದು ಬ್ಯಾಗ್ ಹೆಗಲೇರಿಸಿಕೊಂಡು ಹೊರಟಿದ್ದಾರೆ.

Advertisement

ನೆಲಮಂಗಲ- ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆ: ವೀಕೆಂಡ್‌ ಕರ್ಫ್ಯೂ ಹಿನ್ನೆಲೆ ಭಾನುವಾರ ತಮ್ಮ ಊರುಗಳಿಗೆ ತೆರಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಸೋಮವಾರ ಸರ್ಕಾರ ಲಾಕ್‌ಡೌನ್‌ ಘೋಷಿಸಬಹುದು ಎಂಬ ಸೂಚನೆ ಅರಿತವರು, ಭಾನುವಾರವೇ ಬೆಂಗಳೂರಿನಿಂದ ತಮ್ಮ ಊರುಗಳತ್ತ ತೆರಳಲು ಸಿದ್ಧತೆ ಮಾಡಿಕೊಂಡಿದ್ದರು. ಅದರಂತೆ ಬೆಳಗ್ಗೆಯೇ ಜನರು ಬಸ್‌ ನಿಲ್ದಾಣಗಳತ್ತ ಮುಖ ಮಾಡಿದರು. ಹೀಗಾಗಿ, ನಗರದ ಜಾಲಹಳ್ಳಿ ಕ್ರಾಸ್‌, ಯಶವಂತಪುರ, ಗೊರಗುಂಟೆಪಾಳ್ಯ, ಪೀಣ್ಯ ಬಸ್‌ನಿಲ್ದಾಣದಲ್ಲಿ ಜನಜಂಗುಳಿ ಕಂಡುಬಂದಿತು.

Advertisement

Udayavani is now on Telegram. Click here to join our channel and stay updated with the latest news.

Next