ಹಾವೇರಿ: ಒಂದೇ ಸೂರಿನಡಿ ಹಲವು ಸೇವೆ ನೀಡುವ ‘ಕರ್ನಾಟಕ-1’ ಸೇವಾ ಕೇಂದ್ರ ನಗರದ ಗುರುಭವನ ಬಳಿಯ ನಗರಸಭೆ ವಾಣಿಜ್ಯ ಮಳಿಗೆಯಲ್ಲಿ ಕಾರ್ಯಾರಂಭಗೊಂಡಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಗಣರಾಜ್ಯೋತ್ಸವ ದಿನದಂದು ಆರಂಭಗೊಂಡ ಈ ಕೇಂದ್ರದಲ್ಲಿ ಪ್ರಸ್ತುತ 15 ಇಲಾಖೆಗಳ 48 ಸೇವೆ ಒದಗಿಸಲಾಗುತ್ತಿದೆ. ಹಂತ ಹಂತವಾಗಿ ಸೇವಾ ಕ್ಷೇತ್ರ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ. ಸೇವಾ ಕೇಂದ್ರವು ರಾಷ್ಟ್ರೀಯ ಹಬ್ಬಗಳ ರಜಾ ದಿನ ಹೊರತುಪಡಿಸಿ ರವಿವಾರ ಸೇರಿದಂತೆ ಪ್ರತಿದಿನ ಬೆಳಗ್ಗೆ 8ರಿಂದ ಸಂಜೆ 7 ಗಂಟೆಯವರೆಗೆ ಕಾರ್ಯ ನಿರ್ವಹಿಸಲಿದೆ.
ಕರ್ನಾಟಕ ಸರ್ಕಾರ ಹಾಗೂ ನಿರ್ವಾಹಣಾ ಪಾಲುದಾರರು, ಬ್ಯಾಂಕಿಂಗ್ ಪಾಲುದಾರರು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ನಗರಸಭೆ ಸಹಭಾಗಿತ್ವದಲ್ಲಿ ಜನರಿಗೆ ಈ ಸೇವೆ ನೀಡಲಾಗುತ್ತಿದೆ.
ಸಿಗುವ ಸೇವೆಗಳು: ವಿದ್ಯುತ್ ಸರಬರಾಜು ಕಂಪನಿ ವಿದ್ಯುತ್ ಬಿಲ್ಲುಗಳ ಪಾವತಿ, ಹೆಚ್ಚುವರಿ ಭದ್ರತಾ ಠೇವಣಿ ಪಾವತಿ, ಬಿಎಸ್‌ಎನ್‌ಎಲ್ ಲ್ಯಾಂಡ್‌ಲೈನ್ ಬಿಲ್ ಪಾವತಿ, ಸೆಲ್‌ಒನ್ ಮೊಬೈಲ್ ಬಿಲ್ ಪಾವತಿ, ಪೊಲೀಸ್ ಇಲಾಖೆಯ ಪೊಲೀಸ್ ವೆರಿಫಿಕೇಷನ್, ಕ್ಲಿಯರೆನ್ಸ್, ಪ್ರಮಾಣ ಪತ್ರಕ್ಕಾಗಿ ಶುಲ್ಕ ಪಾವತಿ, ಧ್ವನಿವರ್ಧಕ ವ್ಯವಸ್ಥೆ ಅಳವಡಿಸಲು ಶುಲ್ಕ ಪಾವತಿ, ವಾಹನಗಳ ವಿಚರಣಾ ವರದಿಗಾಗಿ ಶುಲ್ಕ ಪಾವತಿ, ಪಿಯುಸಿ ಉತ್ತರ ಪತ್ರಿಕೆ ಫೋಟೋಕಾಪಿಗಾಗಿ ಅರ್ಜಿ, ಮರು ಎಣಿಕೆಗಾಗಿ ಅರ್ಜಿ, ಮರು ಮೌಲ್ಯ ಮಾಪನಕ್ಕಾಗಿ ಅರ್ಜಿ, ಪಿಯುಸಿ ಫಲಿತಾಂಶ, ಬೆಂಗಳೂರು ವಿಶ್ವವಿದ್ಯಾಲಯದ ಕರೆಸ್ಪಾಂಡೆನ್ಸ್ ಕೋರ್ಸ್‌ಗಳಿಗಾಗಿ ಅರ್ಜಿ ಶುಲ್ಕ ಪಾವತಿ, ಕರೆಸ್ಪಾಂಡೆನ್ಸ್ ಕೋರ್ಸ್‌ಗಳಿಗಾಗಿ ಅರ್ಜಿ ವಿತರಣೆ.
ಪಾಸ್ ಪೋರ್ಟ್ ಇಲಾಖೆ ಪಾಸ್‌ಪೋರ್ಟ್‌ಗಾಗಿ ಆನ್‌ಲೈನ್ ಅರ್ಜಿ ಸಲ್ಲಿಕೆ(ವಾಕ್‌ಇನ್ ಅರ್ಜಿದಾರರಿಗೆ) ಮಾತ್ರ, ಪೊಲೀಸ್ ಕ್ಲಿಯರೆನ್ಸ್ ಪ್ರಮಾಣ ಪತ್ರಕ್ಕಾಗಿ ಆನ್‌ಲೈನ್ ಅರ್ಜಿ ಸಲ್ಲಿಕೆ, ಸಾರಿಗೆ ಇಲಾಖೆ ಆರ್‌ಸಿ ಎಕ್ಸ್‌ಟ್ರಾಕ್ಟ್ ವಿತರಣೆ, ಡಿಎಲ್ ಎಕ್ಸ್‌ಟ್ರಾಕ್ಟ್ ವಿತರಣೆ, ಆಧಾರ ಕುರಿತು ಇ-ಆಧಾರ್ ಮುದ್ರಿಸುವುದು, ಆಧಾರ್ ನೋಂದಣಿ, ಆಧಾರ್‌ನಲ್ಲಿರುವ ವಿವರಗಳ ಬದಲಾವಣೆಗಾಗಿ ಅರ್ಜಿ ಸಲ್ಲಿಕೆ, ಸರ್ಕಾರದ ವಿವಿಧ ಇಲಾಖೆಗಳ ಅರ್ಜಿ ಮುದ್ರಿಸುವುದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪಡಿತರ ಚೀಟಿಗಾಗಿ ಅರ್ಜಿ, ಪಡಿತರ ಚೀಟಿಯೊಂದಿಗೆ ಆಧಾರ್ ಮತ್ತು ಮತದಾರರ ಚೀಟಿ ವಿವರ ಜೋಡಿಸಲು ಅರ್ಜಿ, ಪಡಿತರ ಚೀಟಿಯಲ್ಲಿ ಕುಟುಂಬದ ಸದಸ್ಯರ ವಿವರ ಸೇರಿಸಲು ಅರ್ಜಿ, ಪಡಿತರ ಆದ್ಯತೆ ಪಟ್ಟಿಯಿಂದ ಕೈವಿಡಲು ನೋಂದಣಿ, ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆ ನಕಲು ಪ್ರತಿಗಾಗಿ ಅರ್ಜಿ, ಮರು ಎಣಿಕೆಗಾಗಿ ಅರ್ಜಿ, ಮರುಮೌಲ್ಯಪಾನಕ್ಕಾಗಿ ಅರ್ಜಿ.
ಹೊಸಬೆಳಕು ಯೋಜನೆಯಡಿ ಎಲ್‌ಇಡಿ ಬಲ್ಬ್ಗಳ ಮಾರಾಟ, ಕಂದಾಯ ಇಲಾಖೆಯ ಜನಸಂಖ್ಯೆ ಪ್ರಮಾಣಪತ್ರ, ಜಾತಿ ಹಾಗೂ ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣಪತ್ರ(ಪ್ರವರ್ಗ-ಎ), ಜಾತಿ ಪ್ರಮಾಣಪತ್ರ(ಎಸ್ಸಿ/ಎಸ್ಟಿ), ಓಬಿಸಿ ಪ್ರಮಾಣಪತ್ರ(ಕೇಂದ್ರದ), ವಸತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಗೇಣಿರಹಿತ ಪ್ರಮಾಣಪತ್ರ, ವಿಧವಾ ಪ್ರಮಾಣಪತ್ರ, ಜೀವಂತ ಪ್ರಮಾಣಪತ್ರ, ಕೃಷಿ ಕುಟುಂಬ ಸದಸ್ಯ ಪ್ರಮಾಣಪತ್ರ, ಮರುವಿವಾಹ ರಾಹಿತ್ಯ ಪ್ರಮಾಣಪತ್ರ, ಭೂಮಿ ರಾಹಿತ್ಯ ಪ್ರಮಾಣಪತ್ರ, ಬದುಕಿರುವ ಕುಟುಂಬ ಸದಸ್ಯ ಪ್ರಮಾಣಪತ್ರ, ನಿರುದ್ಯೋಗ ಪ್ರಮಾಣಪತ್ರ, ಸರಕಾರಿ ಹುದ್ದೆಯಲ್ಲಿರದ್ದಕ್ಕೆ ಪ್ರಮಾಣಪತ್ರ, ಸಣ್ಣ, ಅತಿಸಣ್ಣ ಕೃಷಿಕರ ಪ್ರಮಾಣಪತ್ರ, ಕೃಷಿ ಕಾರ್ಮಿಕ ಪ್ರಮಾಣಪತ್ರ ಸೇರಿದಂತೆ ವಿವಿಧ 15 ಇಲಾಖೆ 48 ಸೇವೆಗಳು ಈ ಕರ್ನಾಟಕ್ ಓನ್ ಸೇವಾ ಕೇಂದ್ರದಿಂದ ಪಡೆಯಬಹುದಾಗಿದೆ.
ಒಟ್ಟಾರೆ ‘ಕರ್ನಾಟಕ-1’ ಸೇವಾ ಕೇಂದ್ರ ಸ್ಥಾಪನೆಯಿಂದ ವಿವಿಧ ಸೇವೆಗಳನ್ನು ಒಂದೇ ಕಡೆ ಪಡೆಯಲು ಸಾರ್ವಜನಿಕರಿಗೆ ಅನುಕೂಲವಾಗಿದ್ದು ರವಿವಾರವೂ ಕಾರ್ಯನಿರ್ವಹಿಸುತ್ತಿರುವುದರಿಂದ ಹೆಚ್ಚು ಜನರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ಒಂದೇ ಸೂರಿನಡಿ ವಿವಿಧ ಇಲಾಖೆಗಳ ಸೇವೆ ಕಲ್ಪಿಸಲಾಗಿದ್ದು, ನಗರದ ಸಾರ್ವಜನಿಕರಿಗೆ ಇದು ಹೆಚ್ಚು ಸಹಕಾರಿಯಾಗಿದೆ. ಸಾರ್ವಜನಿಕರು ಈ ಕೇಂದ್ರ ಉಪಯೋಗ ಪಡೆದುಕೊಳ್ಳಬೇಕು.
•ಡಾ.ಎಂ.ವಿ. ವೆಂಕಟೇಶ, ಜಿಲ್ಲಾಧಿಕಾರಿ
ಸರ್ಕಾರಿ ಇಲಾಖೆಗಳ ಸೇವೆ ಪಡೆಯಲು ನಗರದ ವಿವಿಧ ಇಲಾಖೆಗಳ ಕಚೇರಿಗೆ ಅಲೆದಾಡಬೇಕಾಗಿತ್ತು. ‘ಕರ್ನಾಟಕ-1’ ಸೇವಾ ಕೇಂದ್ರ ನಗರದಲ್ಲಿ ಸ್ಥಾಪಿಸಿರುವುದರಿಂದ ಸಮಯ ಉಳಿತಾಯವಾಗಿ ಸೇವೆ ಸುಲಭವಾಗಿ ದೊರೆಯಲು ಅನುಕೂಲವಾಗಿದೆ.
•ಮಂಜಪ್ಪ ಮಠದ, ನಾಗರಿಕ