ಕುರುಗೋಡು: ಶಾಸಕರೇ ಮೊದಲು ನಮ್ಮ ಗ್ರಾಮಕ್ಕೆ ಶುದ್ಧ ಕುಡಿಯುವ ಕೊಡಿ ನಂತರ ಸಂಘ ಸಂಸ್ಥೆಯ ಸಮಸ್ಯೆಗಳನ್ನು ಬಗೆಹರಿಸಿ ಎಂದು ಶಾಸಕರನ್ನು ಮಹಿಳೆಯರು ಕೆಲ ನಿಮಿಷಗಳ ಕಾಲ ಚರ್ಚೆಗೆ ತೆಗೆದುಕೊಂಡರು.
ಸಮೀಪದ ಶ್ರೀರಾಮ ನಗರ ಕ್ಯಾಂಪ್ ನಲ್ಲಿ ಶಾಸಕ ಗಣೇಶ್ ಸಿಸಿ ರಸ್ತೆ ಮತ್ತು ಚರಂಡಿಗೆ ಭೂಮಿ ಪೂಜೆ ನೆರೆವೇರಿಸಿದ ನಂತರ ಕ್ಯಾಂಪಿನ ಗ್ರಾಮದ ಮಹಿಳೆಯರು ಶಾಸಕರ ಮುಂದೆ ಸಮಸ್ಯೆಗಳನ್ನು ತೋಡಿಕೊಂಡರು.
ತದನಂತರ ಮಹಿಳೆಯರು ಮಾತನಾಡಿ, ಕ್ಯಾಂಪಿನಲ್ಲಿ 200 ಕುಟುಂಬಗಳು ವಾಸಿಸುತ್ತಿದ್ದು, ಸಾರ್ವಜನಿಕರಿಗೆ ಸರಿಯಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಾಗಿದೆ. ಖಾಸಗಿ ಕುಡಿಯುವ ನೀರಿನ ಘಟಕಕ್ಕೆ ತೆರಳಿ 10 ರೂ ಕೊಟ್ಟು ನೀರು ಸಂಗ್ರಹಿಸಬೇಕಿದೆ ಇದರಿಂದ ಜನರಿಗೆ ತುಂಬಾ ತೊಂದ್ರೆ ಆಗುತ್ತಿದೆ. ಇನ್ನೂ ಬೇಸಿಗೆ ಬಂದಿಲ್ಲ ಆದರೂ ಈಗಲೇ ಇತರ ಸಮಸ್ಯೆ ಕಾಡಿದರೇ ಬೇಸಿಗೆ ಬಂದ ಮೇಲೆ ಇನ್ನಷ್ಟು ಸಮಸ್ಯೆ ಉದ್ಭವಗೊಳ್ಳಲಿದೆ ಆದ್ದರಿಂದ ಕೊಡಲೇ ನೀರಿನ ಸಮಸ್ಯೆ ಬಗೆಹರಿಸಿ ಎಂದು ಮಹಿಳೆಯರು ಶಾಸಕರಿಗೆ ತಿಳಿಸಿದರು.
ಕ್ಯಾಂಪಿನಲ್ಲಿ ವಿವಾಹಗಳು ಜರುಗಿದರೆ, ಜನರಿಗೆ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲ ಮತ್ತು ಸಂಘಸಂಸ್ಥೆಗಳು ಕಾರ್ಯಕ್ರಮ ಮಾಡುವುದಕ್ಕೂ ಸೂಕ್ತ ಸ್ಥಳ ವಿಲ್ಲದಾಗಿದೆ ಆದ್ದರಿಂದ ಸಮುದಾಯ ಕೇಂದ್ರ ಕಲ್ಪಿಸಿ ಕೊಡುವಂತೆ ಒತ್ತಾಯ ಮಾಡಿದರು.
ಸರಿಯಾದ ರಸ್ತೆ, ಚರಂಡಿಗಳು ಇಲ್ಲದೆ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ವಿದ್ಯುತ್ ಸಮಸ್ಯೆ ಬಹಳ ಕಾಡುತ್ತಿದೆ ಇದರ ಬಗ್ಗೆ ಗ್ರಾಪಂ ಇಲಾಖೆಗೆ ತಿಳಿಸಿದರು ಪ್ರಯೋಜನೆ ಇಲ್ಲದಾಗಿದೆ ಎಂದರು.
ಕ್ಯಾಂಪಿನಲ್ಲಿ ಇರುವ ಸ್ತ್ರೀ ಶಕ್ತಿ ಸಂಘಗಳು ಸರಕಾರದ ನೇರ ಸಾಲ ಕ್ಕೆ ಅರ್ಜಿ ಹಾಕಲಾಗಿದ್ದು, ಎಲ್ಲರೂ ಕಡು ಬಡವರು, ನಿರ್ಗತಿಕರು ಇದ್ದಾರೆ ಆದ್ದರಿಂದ ಲೋನ್ ಅನುಮೋದನೆಗೆ ಪಟ್ಟು ಹಿಡಿದರು.