Advertisement

ಜನರಿಗೆ ಪರಿಸರ, ಜಲ ಜಾಗೃತಿ ಅಗತ್ಯ

01:03 PM Mar 28, 2023 | Team Udayavani |

ಮಂಡ್ಯ: ಪರಿಸರ ಹಾಗೂ ಜಲ ಜಾಗೃತಿ ಬಗ್ಗೆ ನಾಗರಿಕರಿಗೆ ಅರಿವು ಅಗತ್ಯ ಎಂದು ಕಾವೇರಿ ನೀರಾವರಿ ನಿಗಮ ವಿ.ಸಿ.ನಾಲಾ ವಿಭಾಗದ ಕಾರ್ಯಪಾಲಕ ಅಭಿಯಂತರ ಎಚ್‌.ಎಸ್‌.ನಾಗರಾಜು ಹೇಳಿದರು.

Advertisement

ನಗರದ ಕುವೆಂಪುನಗರ ಉದ್ಯಾನ ದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಕೋಶ, ಪರಿಸರ ರೂರಲ್‌ ಡೆವಲೆಪ್‌ ಮೆಂಟ್‌ ಸೊಸೈಟಿ, ಯುವ ಮುನ್ನಡೆ, ಮಧುರ ಮಂಡ್ಯ ಲಯನ್ಸ್ ಸಂಸ್ಥೆ, ಎನ್‌ ಎಸ್‌ಎಸ್‌ ಘಟಕ (ಸ್ನಾತಕೋತ್ತರ) ಮಹಿಳಾ ಸರ್ಕಾರಿ ಕಾಲೇಜು ವತಿಯಿಂದ ವಿಶ್ವ ಅರಣ್ಯ ದಿನ-ವಿಶ್ವ ಜಲ ದಿನ 2023 ಅಂಗವಾಗಿ ಪರಿಸರ ನಡಿಗೆ, ಮಂಡ್ಯ ನಗರದಲ್ಲಿನ ಕಾವೇರಿ ಶಾಖಾ ನಾಲೆಯ 8ನೇ ವಿತರಣಾ ನಾಲೆಯಲ್ಲಿನ ಸ್ವಚ್ಛತೆ ಬಗ್ಗೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬರು ಪ್ಲಾಸ್ಟಿಕ್‌ ತ್ಯಜಿಸಬೇಕು. ಬಟ್ಟೆ ಬ್ಯಾಗ್‌ ಬಳಸಬೇಕು ಎಂದು ನಾಗರಿಕರಿಗೆ ಬಟ್ಟೆ ಬ್ಯಾಗ್‌ ವಿತರಿಸಿ, ಮುಂದಿನ ಪೀಳಿಗೆಗೆ ಪರಿಸರ ಉಳಿಸಿದರೆ ಅನುಕೂಲ ಆಗು ತ್ತದೆ ಎಂದು ಅರಿವು ಮೂಡಿಸಿದರು. ‌

ಪರಿಸರ ಅಸಮತೋಲನ ಗಂಭೀರ ಸಮಸ್ಯೆ: ಪರಿಸರ ರೂರಲ್‌ ಡೆವಲಪ್‌ ಮೆಂಟ್‌ ಸೊಸೈಟಿ ಅಧ್ಯಕ್ಷ ಮಂಗಲ ಎಂ. ಯೋಗೀಶ್‌ ಮಾತನಾಡಿ, ಪರಿಸರ ಅಸಮತೋಲನವು ವಿಶ್ವದ ಗಂಭೀರ ಸಮಸ್ಯೆಯಾಗಿದೆ. ಪರಿಸರ ಸಂರಕ್ಷಣೆ ಹಾಗೂ ನೀರು, ಅರಣ್ಯ, ವಾಯು ಸಂರಕ್ಷಣೆಗೆ ಸಮುದಾಯವೇ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಅರಣ್ಯಗಳು ಮಣ್ಣಿನ ಸವೆತ ತಡೆಗಟ್ಟಲು ಮಣ್ಣನ್ನು ಸಮೃದ್ಧಗೊಳಿಸಲು ಮತ್ತು ಸಂರಕ್ಷಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ಪ್ಲಾಸ್ಟಿಕ್‌ ತಡೆಗೆ ಗಮನಹರಿಸಿ: ಮಧುರ ಮಂಡ್ಯ ಲಯನ್ಸ್ ಸಂಸ್ಥೆ ಅಧ್ಯಕ್ಷ ಸಿ. ತ್ಯಾಗರಾಜು ಮಾತನಾಡಿ, ಪ್ಲಾಸ್ಟಿಕ್‌ ಲೋಟದಲ್ಲಿ ಕಾಫಿ ಕುಡಿಯುವುದರಿಂದ ಕ್ಯಾನ್ಸರ್‌ ಬರುತ್ತದೆ ಎಂದು ತಂತ್ರಜ್ಞಾನ ದಿಂದ ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ನಾಗರಿಕರು ಪ್ಲಾಸ್ಟಿಕ್‌ ಹೋಗಲಾಡಿಸಲು ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು.

ನಾಗರಿಕರು ಮಾರುಕಟ್ಟೆ ಹಾಗೂ ಅಂಗಡಿಗಳಿಗೆ ಹೋಗುವಾಗ ಬಟ್ಟೆ ಬಾಸ್‌ ತೆಗೆದುಕೊಂಡು ಹೋಗ ಬೇಕು ಪ್ಲಾಸ್ಟಿಕ್‌ ಬಳಸಬೇಡಿ ಎಂದು ಕುವೆಂಪು ನಗರ ಹಾಗೂ ಚಾಮುಂಡೇ ಶ್ವರಿ ನಗರದ ನಿವಾಸಿಗಳಿಗೆ ಪರಿಸರದ ಬಗ್ಗೆ ಜನಜಾಗೃತಿ ಮೂಡಿಸಿದರು.

Advertisement

ಸಂತೆ ಕಸಲಗೆರೆ ಬಸವರಾಜು ಮತ್ತು ತಂಡದಿಂದ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಗೀತೆಗಳನ್ನು ಹಾಡಿದರು. ಸಾರ್ವ ಜನಿಕರಿಗೆ ಬಟ್ಟೆ ಬ್ಯಾಗ್‌ ವಿತರಿಸಲಾಯಿತು. ಕಾವೇರಿ ನೀರಾವರಿ ನಿಗಮ ಸಹಾ ಯಕ ಕಾರ್ಯಪಾಲಕ ಅಭಿಯಂತರ ದೊಡ್ಡ ವೀರಯ್ಯ, ಕಿರಿಯ ಎಂಜಿನಿಯರ್‌ ಜಿ.ಎನ್‌.ಕೆಂಪರಾಜು, ಎನ್‌ಎಸ್‌ಎಸ್‌ ಜಿಲ್ಲಾ ಸಂಯೋಜನಾಧಿಕಾರಿ ಪ್ರೊ.ವೈ. ಕೆ.ಭಾಗ್ಯ, ಪರಿಸರ ರೂರಲ್‌ ಡೆವಲೆಪ್‌ ಮೆಂಟ್‌ ಸೊಸೈಟಿ ಕಾರ್ಯದರ್ಶಿ ಕೆ.ಪಿ.ಅರುಣಕುಮಾರಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next