Advertisement

ಅಪರಾಧ ತಡೆಗೆ ಜನರ ಸಹಕಾರ ಅಗತ್ಯ

03:44 PM Jul 19, 2017 | Team Udayavani |

ಗುರುಮಠಕಲ್‌: ಅಪರಾಧ ತಡೆಗಟ್ಟಲು ಪೊಲೀಸರೊಂದಿಗೆ ಜನರು ಮಾಹಿತಿ ನೀಡಿ ಸಹಕಾರಿಸಬೇಕು ಎಂದು ಎಸ್ಪಿ ಯಡಾಮಾರ್ಟಿನ್‌ ಮಾರ್ಬನ್ಯಾಂಗ್‌ ಹೇಳಿದರು. 

Advertisement

ಅವರು ನಗರದ ಪೊಲೀಸ್‌ ಠಾಣೆಯಲ್ಲಿ ಆಯೋಜಿಸಿದ್ದ ಸುಧಾರಿತ ಗಸ್ತು ಸಮಿತಿ ಉದ್ಘಾಟಿಸಿದ ಅವರು ನಂತರ ಸಮಿತಿ ಸದಸ್ಯರ ಸಲಹೆ-ಸೂಚನೆಗಳನ್ನು ಸಮಾಲೋಚಿಸಿ ಮಾತನಾಡಿದರು. ಯಾದಗಿರಿ ಜಿಲ್ಲೆಯಲ್ಲಿ ಮಹಿಳಾ ಪೊಲೀಸ ಠಾಣೆ ಆಗಿದ್ದು, ನಗರದಲ್ಲಿ
ಅದರ ಶಾಖೆ ಆರಂಭಿಸಿಬೇಕು ಎಂದು ಸದಸ್ಯರೊಬ್ಬರು ಕೇಳಿದಾಗ ಪೊಲೀಸ್‌ ಠಾಣೆಯಲ್ಲಿ ಮಹಿಳಯರ ದೂರು ಅಥಾವ ಯಾವುದೇ ದೂರು ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದರೆ ನನ್ನನ್ನು ನೇರವಾಗಿ ಸಂಪರ್ಕಿಸಿ ನ್ಯಾಯ ಒದಗಿಸುತ್ತೇನೆ. ನಿರಾಕರಿಸಿದ ಆ ಠಾಣೆಯ ಪಿಎಸ್‌ಐಗೆ ಶಿಕ್ಷೆ ವಿಧಿಸುತ್ತೇನೆ ಎಂದು ಅವರು ತಿಳಿಸಿದರು.

ತೆಲಂಗಾಣ ಮತ್ತು ಕರ್ನಾಟಕ ಗಡಿ ಭಾಗವಾಗಿರುವ ಪುಟಪಾಕ ಗ್ರಾಮದಲ್ಲಿ ಉಕ್ಕಡ ಠಾಣೆಯನ್ನು ಸ್ಥಾಪಿಸಿ ತೆಲಂಗಾಣ ಅಕ್ರಮ ಚಟುವಟಿಕೆಗಳನ್ನು ತಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ದಲಿತರು ಹಾಗೂ ಹಿಂದುಳಿದ
ವರ್ಗದವರು ಅರ್ಥಿಕವಾಗಿ ಯಾವುದೇ ಪ್ರಕರಣದ ಬಗ್ಗೆ ತಮ್ಮಲ್ಲಿ ಮಾಹಿತಿಗಳಿದ್ದರೆ ಅವುಗಳನ್ನು ಯಾರಿಗೂ ಹೆದರದೆ ಸತ್ಯವಾಗಿ ಮಾಹಿತಿಯನ್ನು ನೀಡಿದಲ್ಲಿ ಅಪರಾಧ ಪ್ರಕರಣಗಳನ್ನು ತಡಗಟ್ಟುವಲ್ಲಿ ಸಹಕಾರಿಯಾಗುತ್ತದೆ ಎಂದರು.

ಸಿಪಿಐ ಶಿವಾನಂದ ವಾಲೀಕಾರ ಸ್ವಾಗತಿಸಿದರು. ಪಿಎಸ್‌ಐ ಎನ್‌. ಗುಂಡುರಾವ್‌ ವಂದಿಸಿದರು. ಗಸ್ತು ಸಮಿತಿ ಸದಸ್ಯರಾದ ಕೆ. ದೇವದಾಸ, ಲಿಂಗಪ್ಪ ತಾಂಡೂರಕರ್‌, ಸಂಜೀವಕುಮಾರ ಚಂದಾಪುರ್‌, ಪ್ರಕಾಶ ನಿರೇಟಿ, ಅನಂತಪ್ಪ ಯದ್ಲಾಪುರ, ಬಸಣ್ಣ ದೇವರಹಳ್ಳಿ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next