ಮೈಸೂರು: ಕಳೆದ ಎರಡು ದಿನಗಳಿಂದ ಬಿಡುವು ನೀಡಿದ್ದ ಮಳೆ, ಮಂಗಳವಾರ ಸಂಜೆ ಮೈಸೂರು ನಗರ ಸೇರಿದಂತೆ ತಾಲೂಕಿನ ವಿವಿಧೆಡೆ ಧಾರಾಕಾರವಾಗಿ ಸುರಿಯಿತು. ಪರಿಣಾಮ ನಗರದ ರಸ್ತೆಗಳಲ್ಲೆಲ್ಲ ಕಾಲುವೆಗಳಂತೆ ಮಂಡಿಯುದ್ದ ನೀರು ಹರಿಯಿತು. ಸಂಜೆ 5.30ರ ಸುಮಾರಿಗೆ ಆರಂಭವಾದ ಮಳೆ ರಾತ್ರಿ 8ಗಂಟೆವರೆಗೂ ಬಿಟ್ಟು ಬಿಟ್ಟು ಸುರಿಯಿತು.
ಮೈಸೂರು ತಾಲೂಕಿನ ರಮ್ಮನಹಳ್ಳಿಯಲ್ಲಿ 65.50 ಮಿ.ಮೀ ಮಳೆ ದಾಖಲಾಗಿದೆ. ಸಂಜೆ ವೇಳೆ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ಗೌರಿ-ಗಣೇಶ ಹಬ್ಬದ ಸಲುವಾಗಿ ಅಗತ್ಯ ವಸ್ತುಗಳ ಖರೀದಿಗೆ ಮಾರುಕಟ್ಟೆಗೆ ಬಂದಿದ್ದವರು, ಕಚೇರಿ ಕೆಲಸ ಮುಗಿಸಿ ಮನೆಗೆ ಹೊರಟಿದ್ದವರು, ಅದರಲ್ಲೂ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಯಿತು.
ಮಳೆಯಲ್ಲೇ ಕೆಲವರು ಛತ್ರಿ ಹಿಡಿದು ಮನೆ ಸೇರಿದರು. ಮತ್ತೆ ಕೆಲವರು ಮರ, ಕಟ್ಟಡ ಸೇರಿದಂತೆ ಸಿಕ್ಕ ಸಿಕ್ಕಕಡೆಗಳಲ್ಲಿ ಮಳೆಯಿಂದ ಆಶ್ರಯಪಡೆದರು.ಮೈಸೂರು ನಗರ ಸೇರಿದಂತೆ ಜಿಲ್ಲೆಯ ಎಚ್.ಡಿ.ಕೋಟೆ, ಹುಣಸೂರು, ಕೆ.ಆರ್.ನಗರ ತಾಲೂಕಿನ ವಿವಿಧೆಡೆಗಳಲ್ಲಿ ಸಾಧಾರಣ ಮಳೆಯಾಗಿದೆ.
ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿ 14 ಮಿ.ಮೀ, ಹಂಚೀಪುರ 16 ಮಿ.ಮೀ, ಬಿದರಹಳ್ಳಿ 22 ಮಿ.ಮೀ, ಡಿ.ಬಿ.ಕುಪ್ಪೆ$ 14 ಮಿ.ಮೀ, ನೇರಳಕುಪ್ಪೆ ಹಾಗೂ ಎನ್.ಬೆಳೂ¤ರು ಗ್ರಾಮಗಳಲ್ಲಿ 10 ಮಿ.ಮೀ ಮಳೆಯಾಗಿದೆ. ಹುಣಸೂರು ತಾಲೂಕಿನ ನೇರಳಕುಪ್ಪೆಯಲ್ಲಿ 17 ಮಿ.ಮೀ, ದೊಡ್ಡಹೆಜೂjರಿನಲ್ಲಿ 15 ಮಿ.ಮೀ, ಬೋಳನಹಳ್ಳಿ, ಉಯಿಗೌಡನಹಳ್ಳಿ ಗ್ರಾಮಗಳಲ್ಲಿ ತಲಾ 8 ಮಿ.ಮೀ, ಹಳೇಬೀಡು 6 ಮಿ.ಮೀ, ಹನಗೋಡು 5 ಮಿ.ಮೀ, ಧರ್ಮಾಪುರ ಗ್ರಾಮದಲ್ಲಿ 3 ಮಿ.ಮೀ ಮಳೆಯಾಗಿದೆ.
ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ, ಚನ್ನಂಗೆರೆ, ಮಾಯಗೌಡನಹಳ್ಳಿ, ಅಡಗೂರು ಹಾಗೂ ಲಕ್ಷ್ಮೀಪುರ ಗ್ರಾಮಗಳಲ್ಲಿ ತಲಾ 5 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.