Advertisement

ಬರಗಾಲ ಪೀಡಿತ ಜಿಲ್ಲೆ ಜನರು ಗುಳೆ ಹೋಗ್ತಿದ್ದಾರೆ..ಸರ್ಕಾರ ನಿಷ್ಕ್ರಿಯವಾಗಿದೆ; ಕರಂದ್ಲಾಜೆ

09:07 AM May 17, 2019 | Team Udayavani |

ಹುಬ್ಬಳ್ಳಿ: ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ರೈತ ವಿರೋಧಿ, ಜನ ವಿರೋಧಿ ನಿಲುವು ಹೊಂದಿದೆ. ರಾಜ್ಯದ 160 ತಾಲೂಕು ಬರಗಾಲ ಪೀಡಿತ ಅಂತ ಘೋಷಣೆ ಮಾಡಿದರೂ ಯಾವುದೇ ಪರಿಹಾರ ಕಾರ್ಯ ಆರಂಭ ಮಾಡಿಲ್ಲ. ಬಹಳಷ್ಟು ಜಿಲ್ಲೆಗಳ ಜನ ಪುಣೆ, ಮುಂಬಯಿ, ಬೆಂಗಳೂರಿಗೆ ಗುಳೆ ಹೋಗ್ತಾ ಇದ್ದಾರೆ. ಇಂತಹ ಸ್ಥಿತಿ ‌ಇದ್ದಾಗ ರಾಜ್ಯ ಕಾಪಾಡಬೇಕಾದ ದೊರೆ 18 ದಿನಗಳ ಕಾಲ ರೇಸಾರ್ಟ್ ನಲ್ಲಿ ವಿಶ್ರಾಂತಿ ಪಡೆದರು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಅವರು ಗುರುವಾರ ಸುದ್ದಿಗಾರರ ಜೊತೆ ಮಾತನಾಡುತ್ತ, ಮಂತ್ರಿಗಳು ರಾಜ್ಯ ಪ್ರವಾಸ ಮಾಡುತ್ತಿಲ್ಲ. ಇದರ ಪರಿಣಾಮ ಅಧಿಕಾರಿಗಳೂ ಪ್ರವಾಸ ಮಾಡುತ್ತಿಲ್ಲ. ಹಣ ಇದ್ದರು ಕೂಡ ಡಿಸಿಗಳು ಕೈ ಚೆಲ್ಲಿ ಕುಳಿತಿದ್ದಾರೆ. ರೆಸಾರ್ಟ್‌ನಲ್ಲಿರುವ ಸರ್ಕಾರವನ್ನು ಬಡಿದೆಬ್ಬಿಸಲು ಕುಂದಗೋಳ, ಚಿಂಚೋಳಿ ಜನ ಬಿಜೆಪಿ ಗೆಲ್ಲುವ ಉತ್ಸಾಹ ತೋರುತ್ತಿದ್ದಾರೆ ಎಂದರು. ಅಲ್ಲದೇ ಕುಂದಗೋಳ ಮತ್ತು ಚಿಂಚೋಳಿಯಲ್ಲಿ ಬಿಜೆಪಿ ಪರ ಅಲೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಅವರ ನಾಯಕರ ಹೇಳಿಕೆಗಳಿಂದಲೇ ಅರ್ಥ ಆಗ್ತಾ ಇದೆ. ತಾವು ಕೂಡ ಯಾಕೆ ಸಿಎಂ ಆಗಬಾರದು ಅಂತಾ ಅನೇಕರು ಚಿಂತನೆ ಮಾಡ್ತಾ ಇದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ 7 ಕಡೆ ಮಾತ್ರ ಸ್ಪರ್ಧಿಸಿದೆ. ಮೂರು ಕ್ಷೇತ್ರದಲ್ಲಿ ಅವರ ಕುಟುಂಬದವರೇ ಇದ್ದಾರೆ ಎಂದು ವ್ಯಂಗ್ಯವಾಡಿದರು.

‌ನಿಜಕ್ಕೂ ಖರ್ಗೆ ಸಿಎಂ ಆಗಬೇಕೆಂಬ ಮನಸ್ಸು ಕುಮಾರಸ್ವಾಮಿಗೆ ಇದ್ದರೆ ತಕ್ಷಣ ರಾಜೀನಾಮೆ ಕೊಟ್ಟು ಅವರೇ ಸಿಎಂ ಎಂದು ಘೋಷಿಸಲಿ ಎಂದರು. ಚುನಾವಣೆ ಬಂದಾಗ ಮಾತ್ರ ಖರ್ಗೆ ಸಿಎಂ ಆಗಬೇಕು ಅಂತಾರೆ. ಆ ಬಳಿಕ‌ ಮರೆತು ಬಿಡ್ತಾರೆ ಅಂತಾ ಖರ್ಗೆನೇ ಹೇಳಿದ್ದಾರೆ.

ಸಿದ್ದರಾಮಯ್ಯ, ಪರಮೇಶ್ವರ ಎಲ್ಲರೂ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ಶಾಸಕರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟಿ ಸರ್ಕಾರದಲ್ಲಿ ಗೊಂದಲ‌ ಸೃಷ್ಟಿಸುವ ಷಡ್ಯಂತ್ರ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ತಾವೇ ಷಡ್ಯಂತ್ರ ಮಾಡಿ ಅದೆಲ್ಲವನ್ನೂ ಯಡಿಯೂರಪ್ಪನವರ ಮೇಲೆ ಆರೋಪ ಮಾಡುತ್ತಿದ್ದಾರೆ. ಅಧಿಕಾರ ಕಳೆದುಕೊಂಡ ಮೇಲೆ ಸಿದ್ದರಾಮಯ್ಯ ಭಯಭೀತರಾಗಿದ್ದಾರೆ. ಮುಂದಿನ ಸಲ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎನ್ನುತ್ತ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ಅನ್ನು ಬ್ಲ್ಯಾಕ್ ಮೇಲೆ ಮಾಡುತ್ತಿದ್ದಾರೆ ಎಂದರು.

Advertisement

ಸಿದ್ದರಾಮಯ್ಯ ಅರಸು ಜೊತೆ ಹೋಲಿಕೆ ಮಾಡಿಕೊಳ್ಳಲು ನಾಚಿಕೆ ಆಗೋಲ್ವಾ?. ದೇವರಾಜ ಅರಸು ಎಲ್ಲಿ, ಸಿದ್ದರಾಮಯ್ಯ ಎಲ್ಲಿ. ಅರಸು ಜೊತೆ ಹೋಲಿಕೆ ಮಾಡಿಕೊಳ್ಳುವ ಹುಲ್ಲು ಕಡ್ಡಿಯಷ್ಟು ನೈತಿಕತೆ ಸಿದ್ದರಾಮಯ್ಯಗೆ ಇಲ್ಲ. ಅವರು ಬೆಂಗಳೂರಿನಲ್ಲಿ‌ ರಿಯಲ್ ಎಸ್ಟೇಟ್‌ಗೆ ಬೆಂಬಲವಾಗಿ ನಿಂತಿದ್ದಾರೆ. ಅರಸು ಹೆಸರು ಹೇಳುವುದಕ್ಕೂ ಕೂಡ ಸಿದ್ದರಾಮಯ್ಯ ನಾಲಾಯಕ್ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next