Advertisement

ಈ ಬೆಟ್ಟದಲ್ಲಿ ಪ್ರತಿ ವರ್ಷ ನಡೆಯುತ್ತದೆ ಅಪರಿಚಿತರ ಜೊತೆ ‘ಸೆಕ್ಸ್’ ಜಾತ್ರೆ

12:26 PM Aug 13, 2021 | ಗಣೇಶ್ ಹಿರೇಮಠ |
ಜಾತ್ರೆಯಂದು ದೇವಾಲಯದಲ್ಲಿ ಜನ ಸೇರಿ ಪೂಜೆ ಸಲ್ಲಿಸುತ್ತಾರೆ. ನಂತರ ಅಲ್ಲಿರುವ ಕೆರೆಗಳಲ್ಲಿ ಮಿಂದು ಶುಚಿಯಾಗುತ್ತಾರೆ. ನಂತರ ತಮಗೆ ಬೇಕಾದ ಅಪರಿಚಿತರನ್ನು ಹುಡುಕಿಕೊಂಡು ಅಲ್ಲೇ ಪೊದೆ ಕಲ್ಲುಬಂಡೆ ಮರೆಗಳ ಮರೆಯಲ್ಲಿ ಸಂಭೋಗ ನಡೆಸುತ್ತಾರೆ. ಇಲ್ಲಿನ ಪ್ರಸಿದ್ಧಿ ಹೆಚ್ಚಿ ಜನರು ಬರುವುದು ಹೆಚ್ಚಾಗತೊಡಗಿದಂತೆ ಇಲ್ಲಿ ಲಾಡ್ಜ್‌ಗಳು, ಹೋಟೆಲ್‌ಗಳು ಹೆಚ್ಚಿದವು. ಇದೊಂದು ಉದ್ಯಮವೇ ಆಗಿ ಬದಲಾಯಿತು. ಸ್ಥಳೀಯರಿಗೂ ಇದೊಂದು ಗಳಿಕೆಯ ತಾಣವಾಯಿತು. ಸರಕಾರಕ್ಕೂ ಆದಾಯ ಬರತೊಡಗಿತು. ಆದರೆ ತೀರ್ಥಯಾತ್ರೆ ಮಾತ್ರ ಅಸಹ್ಯವಾಗಿ ಬೆಳೆಯಿತು. ಮೈ ಮಾರಾಟ ದಂಧೆ ಎಗ್ಗಿಲ್ಲದೆ ಬೆಳೆಯಿತು. ಸ್ಥಳೀಯರು ಮತ್ತು ಸಾಂಪ್ರದಾಯಿಕ ಮುಸ್ಲಿಮರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು...
Now pay only for what you want!
This is Premium Content
Click to unlock
Pay with

ಭಾರತದಲ್ಲಿ ತೀರ್ಥಯಾತ್ರೆ ತನ್ನದೆಯಾದ ಮಹತ್ವ ಇದೆ. ಧಾರ್ಮಿಕ ಕ್ಷೇತ್ರಗಳಲ್ಲಿ ಸುತ್ತಿ, ಪೂಜೆ ಪುಣಸ್ಕಾರಗಳಲ್ಲಿ ಪಾಲ್ಗೊಂಡು ಜೀವನ ಸಾರ್ಥಕತೆ ಮಾಡಿಕೊಳ್ಳಲು ನಮ್ಮ ದೇಶದಲ್ಲಿ ತೀರ್ಥಯಾತ್ರೆ ಕೈಗೊಳ್ಳುತ್ತಾರೆ. ಆದರೆ, ಇಂಡೋನೇಷಿಯಾದಲ್ಲಿ ನಡೆಯುವ ಒಂದು ಆಚರಣೆ ಮಾತ್ರ ತದ್ವಿರುದ್ಧವಾಗಿದೆ.ಹೌದು, ಅಲ್ಲಿ ತೀರ್ಥಯಾತ್ರೆಯ ಪ್ರಧಾನ ಅಂಗವೇ ಲೈಂಗಿಕ ಕ್ರಿಯೆ ಆಗಿದೆ. ಅದರಲ್ಲೂ ಅಪರಿಚಿತರ ಜೊತೆಗೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಒಳ್ಳೆಯದು ಆಗುತ್ತದೆಯಂತೆ.

Advertisement

ಇಂಡೋನೇಷಿಯಾದ ಜಾವಾ ದ್ವೀಪದಲ್ಲಿ ಕಾಮ ಪ್ರಚೋದನೆಯ ಉತ್ಸವವನ್ನು ಆಚರಿಸಲಾಗುತ್ತದೆ. ಇದು ಇಂಡೋನೇಷಿಯಾದವರ ಒಂದು ಸಾಂಪ್ರದಾಯಿಕ ಆಚರಣೆಯಲ್ಲಿ ಅಥವಾ ಉತ್ಸವದಲ್ಲಿ ಒಂದು. ಇದನ್ನು ಪೊನ್ ಫೆಸ್ಟಿವಲ್ ಎಂದು ಕರೆಯುತ್ತಾರೆ. ಈ ಸಂಭ್ರಮದ ಆಚರಣೆಯು ಗುವಾಂಗ್ ಕೆಮುಕುಸ್ ಎಂಬ ಬೆಟ್ಟದ ತುದಿಯಲ್ಲಿ ಆಚರಿಸಲಾಗುವುದು. ಇದು ಜಾವಾ ದ್ವೀಪದಲ್ಲಿ ಇರುವ ಒಂದು ಬೆಟ್ಟ.

ಉತ್ಸವದಲ್ಲಿ ಭಾಗವಹಿಸುವವರು ಉತ್ಸವದ ದಿನ ಪರ್ವತದ ತುದಿಯಲ್ಲಿ ಆ ರಾತ್ರಿಯನ್ನು ಕಳೆಯಬೇಕು. ಭವಿಷ್ಯದಲ್ಲಿ ಅದೃಷ್ಟವನ್ನು ಪಡೆದುಕೊಳ್ಳಲು ಬಯಸಿದರೆ ಅಪರಿಚಿತರೊಂದಿಗೆ ಲೈಂಗಿಕ ಕ್ರಿಯೆಯನ್ನು ಧಾರ್ಮಿಕ ಸಂಭೋಗ ಎನ್ನುವ ರೀತಿಯಲ್ಲಿ ನಡೆಸಬೇಕು. ಪುರುಷ ಮತ್ತು ಮಹಿಳೆ ಈಗಾಗಲೇ ಬೇರೆ ವ್ಯಕ್ತಿಯೊಂದಿಗೆ ಮದುವೆಯಾಗಿದ್ದರೂ ನಡೆಸಬಹುದು. ಉತ್ಸವದಲ್ಲಿ ಪಡೆದುಕೊಳ್ಳುವ ಅಪರಿಚಿತರೊಂದಿಗೆ ನಡೆಸುವ ಲೈಂಗಿಕ ಕ್ರಿಯೆಗೆ ಮುಕ್ತ ಅವಕಾಶ ದೊರೆಯುವುದು.

ಪ್ರತಿ ವರ್ಷದ 35 ದಿನಗಳಲ್ಲಿ ನಡೆಯುವ ಈ ಉತ್ಸವದಲ್ಲಿ ಕೈಗೊಳ್ಳುವ ಲೈಂಗಿಕ ಕ್ರಿಯೆಯಲ್ಲಿ ಏಳು ಬಾರಿಯೂ ಅದೇ ಅಪರಿಚಿತ ವ್ಯಕ್ತಿ ಸಿಕ್ಕಿದ್ದಾನೆ/ಸಿಕ್ಕಿದ್ದಾಳೆ ಎಂದರೆ ಅದು ಅತ್ಯಂತ ಅದೃಷ್ಟದ ಸಂಗತಿ ಎಂದು ಪರಿಗಣಿಸಲಾಗುವುದು. ಈ ಆಚರಣೆಯಲ್ಲಿ ಪಾಲ್ಗೊಂಡ ಬಳಿಕ ಮಧ್ಯದಲ್ಲಿಯೇ ಕೈಬಿಡುವಂತಿಲ್ಲ. ಆಚರಣೆಯನ್ನು ಸಂಪೂರ್ಣವಾಗಿ ಪರಿಗಣಿಸಬೇಕಾಗುವುದು. ಹೀಗೆ ಮಾಡುವುದರಿಂದ ವರ್ಷ ಪೂರ್ತಿ ಅತ್ಯುತ್ತಮವಾದ ಲೈಂಗಿಕ ಜೀವನ ನಡೆಸುತ್ತಾರೆ ಎನ್ನಲಾಗುವುದು.

Advertisement

ಈ ಸ್ಥಳಕ್ಕೆ ಸೆಕ್ಸ್ ಮೌಂಟೇನ್ ಅಂತನೂ ಕರೆಯುತ್ತಾರೆ. ಇದರ ಬಗ್ಗೆ ಒಂದು ದಂತಕತೆಯಿದೆ. 16ನೇ ಶತಮಾನದಲ್ಲಿ ಪಂಗೇರನ್ ಸಮ್ದೊರೊ ಎಂಬ ಒಬ್ಬ ರಾಜಕುಮಾರನಿದ್ದ. ಅವನಿಗೂ ಅವನ ಸುಂದರಿ ಮಲತಾಯಿ ನ್ಯಾಯಿ ಒಂಟ್ರೊವುಲಾನ್‌ಗೂ ಅನೈತಿಕ ಸಂಬಂಧ ಇತ್ತು. ಆದರೆ ಅರಮನೆಯಲ್ಲಿ ಈ ಸಂಬಂಧ ಮುಂದುವರಿಸಲು ಸಾಧ್ಯವಾಗದೆ ಅವರಿಬ್ಬರೂ ಈ ಕೆಮುಕುಸ್‌ಗೆ ಓಡಿಬಂದರು. ಅಲ್ಲಿ ತಮ್ಮ ದೇಹಸಂಬಂಧ ಮುಂದುವರಿಸಿದರು. ಆದರೆ ಅವರನ್ನು ಸೈನಿಕರೂ ಊರಜನರೂ ಹಿಡಿದುಹಾಕಿದರು. ಅಲ್ಲೇ ಅವರನ್ನು ಕೊಂದುಹಾಕಿ, ಅಲ್ಲೇ ಹೂತುಹಾಕಿದರು.

ಆದರೆ ನಂತರ ಜನರಿಗೆ ತೊಂದರೆಗಳು ಕಂಡುಬಂದುದರಿಂದ, ಇಲ್ಲಿ ಹೂಳಲಾಗಿದ್ದ ರಾಜಕುಮಾರನಿಗೆ ಪುಟ್ಟ ಗುಡಿಯೊಂದನ್ನು ಕಟ್ಟಲಾಯಿತು. ಆತನ ಗೌರವಾರ್ಥ ವರ್ಷಕ್ಕೊಮ್ಮೆ ಪೂಜೆ, ಜಾತ್ರೆ ಏರ್ಪಡಿಸಲಾಯಿತು. ಈ ಸಂದರ್ಭದಲ್ಲಿಯೇ ಹುಟ್ಟಿಕೊಂಡ ವಿಚಿತ್ರ ಪದ್ಧತಿ ಎಂದರೆ, ಅಪರಿಚಿತರು ಇಲ್ಲಿ ಕೂಡಿಕೊಳ್ಳುವುದು. ಇದರಿಂದ ರಾಜಕುಮಾರ ಹಾಗೂ ನ್ಯಾಯಿ ಸಂಪ್ರೀತರಾಗುತ್ತಾರೆ ಎಂಬ ನಂಬಿಕೆ. ತಾವು ಮಾಡಲಾಗದುದನ್ನು ಮಾಡುತ್ತಿರುವ ಅವರ ಮೇಲೆ ಪ್ರೀತಿಯಿಂದ ಆಶೀರ್ವದಿಸಿ ಕಳಿಸುತ್ತಾರಂತೆ. ಜೀವನದಲ್ಲಿ ಅದೃಷ್ಟವನ್ನು ನೀಡುತ್ತಾರಂತೆ. ಹಾಗೆಂದು ನಂಬಿಕೆ ಬೆಳೆಯಿತು. ಆಚರಣೆ ಹೆಚ್ಚಿತು. ಜೀವನದಲ್ಲಿ ಭಾಗ್ಯ ಮತ್ತು ಆ ಕ್ಷಣದ ಮಜಾ ಪಡೆಯಲು ಜನ ಆಗಮಿಸತೊಡಗಿದರು. ಈ ಜಾತ್ರೆಯನ್ನು ಪೋನ್ ಫೆಸ್ಟಿವಲ್ ಎಂದು ಕರೆಯಲಾಗುತ್ತೆ.

ಜಾತ್ರೆಯಂದು ದೇವಾಲಯದಲ್ಲಿ ಜನ ಸೇರಿ ಪೂಜೆ ಸಲ್ಲಿಸುತ್ತಾರೆ. ನಂತರ ಅಲ್ಲಿರುವ ಕೆರೆಗಳಲ್ಲಿ ಮಿಂದು ಶುಚಿಯಾಗುತ್ತಾರೆ. ನಂತರ ತಮಗೆ ಬೇಕಾದ ಅಪರಿಚಿತರನ್ನು ಹುಡುಕಿಕೊಂಡು ಅಲ್ಲೇ ಪೊದೆ ಕಲ್ಲುಬಂಡೆ ಮರೆಗಳ ಮರೆಯಲ್ಲಿ ಸಂಭೋಗ ನಡೆಸುತ್ತಾರೆ. ಇಲ್ಲಿನ ಪ್ರಸಿದ್ಧಿ ಹೆಚ್ಚಿ ಜನರು ಬರುವುದು ಹೆಚ್ಚಾಗತೊಡಗಿದಂತೆ ಇಲ್ಲಿ ಲಾಡ್ಜ್‌ಗಳು, ಹೋಟೆಲ್‌ಗಳು ಹೆಚ್ಚಿದವು. ಇದೊಂದು ಉದ್ಯಮವೇ ಆಗಿ ಬದಲಾಯಿತು. ಸ್ಥಳೀಯರಿಗೂ ಇದೊಂದು ಗಳಿಕೆಯ ತಾಣವಾಯಿತು. ಸರಕಾರಕ್ಕೂ ಆದಾಯ ಬರತೊಡಗಿತು. ಆದರೆ ತೀರ್ಥಯಾತ್ರೆ ಮಾತ್ರ ಅಸಹ್ಯವಾಗಿ ಬೆಳೆಯಿತು. ಮೈ ಮಾರಾಟ ದಂಧೆ ಎಗ್ಗಿಲ್ಲದೆ ಬೆಳೆಯಿತು. ಸ್ಥಳೀಯರು ಮತ್ತು ಸಾಂಪ್ರದಾಯಿಕ ಮುಸ್ಲಿಮರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು.

ಎಚ್‌ಐವಿ ಏಡ್ಸ್ ಹಾಗೂ ಲೈಂಗಿಕ ಕಾಯಿಲೆಗಳೂ ಈ ಪರಿಸರದಲ್ಲಿ ಹರಡತೊಡಗಿದವು. ಇದರಿಂದಾಗಿ ಸರಕಾರ ಮಧ್ಯ ಪ್ರವೇಶಿಸಿ ಇಲ್ಲಿದ್ದ ಹೋಟೆಲ್ ಲಾಡ್ಜ್ ಇತ್ಯಾದಿಗಳನ್ನು ಮುಚ್ಚಿಸಿಬಿಟ್ಟಿತು. ಸೆಕ್ಸ್ ದಂಧೆಯಲ್ಲಿ ಇಲ್ಲದ ಕುಟುಂಬಗಳೆಲ್ಲ ಇಲ್ಲಿಂದ ವಲಸೆ ಹೋದವು. ಆದರೂ ಇಂದಿಗೂ ಇಲ್ಲಿನ ದಂತಕತೆ ಹಾಗೂ ಪಾವಿತ್ರ್ಯದಲ್ಲಿ ನಂಬಿಕೆ ಇಟ್ಟವರು ಇಲ್ಲಿನ ಪದ್ಧತಿಯನ್ನು ಆಚರಿಸುತ್ತಾರೆ. ಈಗಲೂ ದೇವಾಲಯಕ್ಕೆ ಬಂದು ಅಪರಿಚಿತರನ್ನು ಸೆಕ್ಸ್‌ಗಾಗಿ ಹುಡುಕುವವರು ಇದ್ದಾರೆ. ಅಂಥವರು ತಮ್ಮ ಜೀವನದಲ್ಲಿ ಇದರಿಂದಾಗಿ ಸಮಸ್ಯೆಗಳು ಕಡಿಮೆಯಾಗಿರುವುದನ್ನು, ಸುಖ ನೆಮ್ಮದಿ ಹೆಚ್ಚಾಗಿರುವುದನ್ನು ಕಂಡುಕೊಂಡಿದ್ದಾರಂತೆ. ಆದರೆ ಇಲ್ಲಿಗೆ ಬರುವವರಲ್ಲಿ ಪುರುಷರನ್ನು ಹೆಚ್ಚಾಗಿ ಕಾಣಬಹುದು. ಸೆಕ್ಸ್ ದಂಧೆ ಕೂಡ ಒಳಗಿಂದೊಳಗೇ ಸಾಕಷ್ಟು ನಡೆಯುತ್ತದೆ ಅನ್ನುವವರು ಇದ್ದಾರೆ. ಇಂಥ ಪದ್ಧತಿಗಳು ಮನುಷ್ಯನ ಲೈಂಗಿಕಾಂಕ್ಷೆಗಳನ್ನು ಪ್ರಚೋದಿಸುವಂತೆ ಇರುವುದರಿಂದ, ಆ ದಂಧೆಯೂ ಹೆಚ್ಚಾಗಿ ಇದ್ದರೆ ಆಶ್ಚರ್ಯವೇನೂ ಅಲ್ಲ.

*ಗಣೇಶ ಹೀರೆಮಠ

Advertisement

Udayavani is now on Telegram. Click here to join our channel and stay updated with the latest news.