Advertisement

ಜನರಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸಿದ ಲಿಂ|ಸಿದ್ಧಲಿಂಗ ಶ್ರೀ

04:11 PM Apr 20, 2019 | pallavi |

ಗದಗ: ಮಠಗಳು ಕೇವಲ ಧಾರ್ಮಿಕತೆಗೆ ಸೀಮಿತ ಎನ್ನುವಂಥ ಸಿದ್ಧಸೂತ್ರವನ್ನು ಮುರಿದು, ಮಠವನ್ನು ನಾಡು ನುಡಿಯ ಸಂರಕ್ಷಣೆಯ ಕೇಂದ್ರವನ್ನಾಗಿಸಿ ಜನರಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸಿದ ಲಿಂಣ ಡಾಣ ಸಿದ್ಧಲಿಂಗ ಶ್ರೀಗಳು ಉಪಮಾತೀತರು. ಅವರ ವ್ಯಕ್ತಿತ್ವ ನಾಡಿನ ಎಲ್ಲ ಸ್ವಾಮೀಜಿಗಳಿಗೆ ಆದರ್ಶಪ್ರಾಯವಾಗಿದೆ ಎಂದು ಶಿವಮೊಗ್ಗ ಆನಂದಪುರಂ ಮುರುಘಾಮಠದ ಜಣ ಡಾಣ ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳು ನುಡಿದರು.

Advertisement

ಜಣ ತೋಂಟದಾರ್ಯ ಜಾತ್ರಾ ಮಹೋತ್ಸವದ ಪ್ರಾರಂಭೋತ್ಸವ ಹಾಗೂ ಪುಸ್ತಕೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಅವರು, ತೋಂಟದಾರ್ಯ ಮಠವು ತನ್ನ ವೈಭವವನ್ನು ಕಳೆದುಕೊಂಡು ಬರಡಾದ ಸಂದರ್ಭದಲ್ಲಿ ಪೀಠವನ್ನೇರಿದ್ದ ಲಿಂಣ ತೋಂಟದ ಶ್ರೀಗಳು, ಶ್ರೀಮಠದ ಚಿತ್ರಣವನ್ನೇ ಬದಲಾಯಿಸಿದರು. ಶ್ರೀಮಠವನ್ನು ಮಮತೆಯ, ಸಮತೆಯ ತೊಟ್ಟಿಲನ್ನಾಗಿಸಿದರು ಎಂದರು.

ಸಮ್ಮುಖ ವಹಿಸಿದ್ದ ಸಾರಂಗಮಠ ಶ್ರೀಶೈಲದ ಜಣ ಡಾಣ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ನಾಡಿನಲ್ಲೇ ಬಸವತತ್ವವನ್ನು ಗಟ್ಟಿಯಾಗಿ ಅನುಸರಿಸಿದವರು ಲಿಂಣ ಡಾಣ ತೋಂಟದ ಶ್ರೀಗಳು. ಎಂಥದ್ದೇ ಪರಿಸ್ಥಿತಿ ಎದುರಾದರೂ ವಿಚಲಿತರಾಗದೇ ಆಡಿದ ಮಾತುಗಳಿಗೆ, ನಂಬಿದ ತತ್ವಕ್ಕೆ ಬದ್ಧರಾಗಿ ಬದುಕಿದರು ಎಂದರು.

ಸಾನ್ನಿಧ್ಯ ವಹಿಸಿದ್ದ ಡಾಣ ತೋಂಟದ ಸಿದ್ಧರಾಮ ಶ್ರೀಗಳು ಆಶೀರ್ವಚನ ನೀಡಿ, ಬಸವ ಪರಂಪರೆಯ ಬಳಿವಿಡಿದು ಬಂದು ಶ್ರೀಮಠದ ಪೀಠ ಪರಂಪರೆಗೆ ಮೇರು ಕಳಸವಾಗಿದ್ದ ಲಿಂಗೈಕ್ಯ ಗುರುಗಳು ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ಮಠವನ್ನು ಮುನ್ನಡೆಸಿ, ವೈಚಾರಿಕ ವೈಜ್ಞಾನಿಕ ಪ್ರಜ್ಞೆ ಬೆಳೆಸಿದವರು ಎಂದರು.

ಡಾಣ ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆಯಿಂದ ಪ್ರಕಟಗೊಂಡ ಜ್ಯೋತಿಬಾ ಫುಲೆ ಪುರಾಣ, ವಿಶ್ವನಾಥ ರೆಡ್ಡಿ ಮುದ್ನಾಳ, ಜಸ್ಟೀಸ್‌ ಶಿವರಾಜ ಪಾಟೀಲ, ಬಿ.ಎಸ್‌ ಪಾಟೀಲ ಸಾಸನೂರು, ಬಿ.ಎಸ್‌. ಪಾಟೀಲ ಮನಗೂಳಿ, ಎಸ್‌.ಆರ್‌. ಕಲ್ಲೂರ, ಎಂ.ನಾಗಪ್ಪ ವಕೀಲರು ರಾಯಚೂರ, ಲಿಂಗಣ್ಣ ಸತ್ಯಂಪೇಟೆ, ಡಾಣ ಬಸವರಾಜ ಮಲಶೆಟ್ಟಿ, ಡಂಬಳ ಮಠದ ಅವಲೋಕನ, ಕೋ. ಚೆನ್ನಬಸಪ್ಪ, ಬಿ. ಮಹಾದೇವಪ್ಪ, ಪಂ. ಚನ್ನಪ್ಪ ಎರೆಶೀಮಿ, ಶಿಗ್ಲಿಯ ನಿರಂಜನರು, ವಿ.ಎ. ಉಮಾರಾಣಿ, ಎಂ.ಎ. ಹಂಚಿನಾಳ, ಬಿ.ಎಲ್. ಪಾಟೀಲ, ನೀವು ಮತ್ತು ನಿಮ್ಮಮಗು ಗ್ರಂಥಗಳನ್ನು ಬಿಡುಗಡೆಗೊಳಿಸಲಾಯಿತು. ಡಾಣ ಬಾಳಣ್ಣ ಶೀಗಿಹಳ್ಳಿ ಮತ್ತು ಪ್ರೊಣ ಶಶಿಧರ ತೋಡಕರ ಅವರು ಗ್ರಂಥ ಸಮೀಕ್ಷೆ ನೆರವೇರಿಸಿದರು.

Advertisement

ಈ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಬಿ.ಸಿ. ರಾಯ್‌ ಪ್ರಶಸ್ತಿ ಪುರಸ್ಕೃತ ಡಾಣ ಜೆ.ಬಿ ಸತ್ತೂರ ಅವರನ್ನು ಸನ್ಮಾನಿಸಲಾಯಿತು.

ಸಮ್ಮುಖವಹಿಸಿದ್ದ ರಾಮದುರ್ಗದ ಶಿವಮೂರ್ತೀಶ್ವರ ಮಠದ ಶ್ರೀ ಶಾಂತವೀರ ಸ್ವಾಮಿಗಳು ಮಾತನಾಡಿದರು. ಸಂಗೀತಗಾರ ಸಿದ್ಧರಾಮ ಎಸ್‌. ಕೇಸಾಪೂರ ಅವರು ಹಾಡಿದ ಲಿಂಣ ಡಾಣ ತೋಂಟದ ಸಿದ್ಧಲಿಂಗ ಶ್ರೀಗಳ ಕುರಿತಾದ ‘ಬಾಳಿನ ಬೆಳಗು’ ಧ್ವನಿಸುರುಳಿಯನ್ನು ಬಿಡುಗಡೆಗೊಳಿಸಲಾಯಿತು. ಜಾತ್ರಾ ಸಮಿತಿ ಅಧ್ಯಕ್ಷ ಡಾಣ ಎಂ.ಬಿ. ನಿಂಬಣ್ಣವರ ಸ್ವಾಗತಿಸಿದರು. ಎಸ್‌.ಎಸ್‌. ಹರ್ಲಾಪುರ, ಕ್ಷಮಾ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next