Advertisement

ವೈದ್ಯರಿಲ್ಲದೇ ಚಿಕಿತೆಗ್ಸೆ ಪರದಾಡುತ್ತಿರುವ ಕೇರಳ ಗಡಿಭಾಗದ ಜನ

05:44 PM Aug 11, 2021 | Team Udayavani |

ಎಚ್‌.ಡಿ.ಕೋಟೆ: ತಾಲೂಕಿನ ಕೇರಳ ಗಡಿಭಾಗದ ಡಿ.ಬಿ.ಕುಪ್ಪೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ರೋಗಿಗಳು, ಹಾಡಿಯ ಮಂದಿ ಚಿಕಿತ್ಸೆಗಾಗಿ ಪರಿತಪಿಸುವಂತಾಗಿದೆ.

Advertisement

ಎಚ್‌.ಡಿ.ಕೋಟೆ ತಾಲೂಕಿನ ಕೇರಳ ಗಡಿಭಾಗದ ಜತೆಗೆ ಅರಣ್ಯದೊಳಗಿನ ಹಾಡಿಗಳಿಂದ ಆವೃತವಾಗಿರುವ ತಾಲೂಕು. ಇತ್ತೀಚಿನ ದಿನಗಳಲ್ಲಿ ನೆರೆಯ ಕೇರಳ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಪ್ರತಿದಿನವೊಂದಕ್ಕೆ 25ಸಾವಿರಕ್ಕೂ ಅಧಿಕ ಮಂದಿ ಸೋಂಕಿತರಕಂಡು ಬರುತ್ತಿದ್ದಾರೆ.

ಕಟ್ಟು ನಿಟ್ಟಿನ ಕ್ರಮ: ಈ ಹಿನ್ನೆಲೆಯಲ್ಲಿ ತಾಲೂಕಿನ ಕೇರಳ ಗಡಿಭಾಗದ ಬಾವಲಿ ಚೆಕ್‌ಪೋಸ್ಟ್‌ನಲ್ಲಿ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಚೆಕ್‌ ಪೋಸ್ಟ್‌ ಮಾರ್ಗವಾಗಿ ಸಂಚರಿಸುವ ವಾಹನಗಳ ಪ್ರಯಾಣಿಕರು ಕಡ್ಡಾಯವಾಗಿ 72 ತಾಸುಗಳ ಅವಧಿಯ ಕೋವಿಡ್‌ ನೆಗೆಟಿವ್‌ ವರದಿ ಕಡ್ಡಾಯವಾಗಿ ಹೊಂದಿರಬೇಕು, ಕಡ್ಡಾಯವಾಗಿ ಲಸಿಕೆ ಪಡೆದುಕೊಂಡಿರ ಬೇಕು, ಲಸಿಕೆ ಪಡೆಯದ ಮತ್ತು ನೆಗೆಟಿವ್‌ ವರದಿ ಇಲ್ಲದ ವಾಹನಗಳ ಪ್ರಯಾಣಿಕರ ಸಂಚಾರ ನಿರ್ಬಂಧಿಸಿ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ.

ಬೇಜವಾಬ್ದಾರಿತನ: ಗಡಿಭಾಗದ ಅಂಚಿನ ಜನರೂ ಕೇರಳ ಸೋಂಕಿನ ಪ್ರಮಾಣ ಕೇಳಿ ಭಯಭೀತರಾಗಿದ್ದಾರೆ. ಹೀಗಿರುವಾಗ ತಾಲೂಕಿನ ಗಡಿಭಾಗದ ಡಿ.ಬಿ.ಕುಪ್ಪೆ ಗ್ರಾಮದ ವ್ಯಾಪ್ತಿಗೆ ಅರಣ್ಯದೊಳಗಿನ ಹಾಡಿಗಳ ಮಂದಿಯೇ ಹೆಚ್ಚು ಸೇರ್ಪಡೆಗೊಂಡಿದ್ದರೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇಲ್ಲದೇ ಇರುವುದು ಸರ್ಕಾರದ ಬೇಜವಾಬ್ದಾರಿತನವನ್ನು ತೋರುವಂತಿದೆ. ಡಿ.ಬಿ.ಕುಪ್ಪೆ ವ್ಯಾಪ್ತಿಯ ಜನತೆಗೆ ಆರೋಗ್ಯ
ಸಮಸ್ಯೆ ಇದ್ದಾಗ ಡಿ.ಬಿ.ಕುಪ್ಪೆ, ಬಾವಲಿ ಕಡೆಯಿಂದ 25ಕಿ.ಮೀ. ಅಂತರದಲ್ಲಿರುವ ಅಂತರ ಸಂತೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಬೇಕು. ಅದರಲ್ಲೂ ವಿಶೇಷವಾಗಿ ಬಾವಲಿಯಿಂದ ಅಂತರ ಸಂತೆ ತನಕ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಆವರಿಸಿಕೊಂಡಿದ್ದು ಅರಣ್ಯ ಮಾರ್ಗ ಕ್ರಮಿಸಿಯೇ ಬರಬೇಕಾದ ಅನಿವಾರ್ಯತೆ ಇದೆ.

ಇದನ್ನೂ ಓದಿ:ಗೋವಾ : ಚುನಾವಣೆ ಯಾವಾಗ ನಡೆದರೂ ಕೂಡ ಪಕ್ಷ ಸಿದ್ಧ : ಸಿಎಂ ಪ್ರಮೋದ್ ಸಾವಂತ್

Advertisement

ವೈದ್ಯರೇ ಇಲ್ಲದ ಆಸ್ಪತ್ರೆಯಲ್ಲಿ ದಾದಿಯರೇ ಹೇಗೋ ಪ್ರಥಮ ಚಿಕಿತ್ಸೆ ನೀಡಿದರೂ ವೈದ್ಯರೇ ನೀಡಬೇಕಾದ ಚಿಕಿತ್ಸೆಗೆ ಅಂತರ ಸಂತೆ ಇಲ್ಲವೇ
ತಾಲೂಕು ಕೇಂದ್ರ ಸ್ಥಾನದ ಆಸ್ಪತ್ರೆಗೆ ಆಗಮಿಸ ಬೇಕಾದ ಅನಿವಾರ್ಯತೆ ಇದೆ. ಸರ್ಕಾರ ಕೂಡಲೇ ಇತ್ತ ಗಮನಹರಿಸಿ ಕೋವಿಡ್‌ ಸೋಂಕಿನಿಂದ ಭಯ ಭೀತರಾಗಿರುವ ಗಡಿಭಾಗದ ಡಿ.ಬಿ.ಕಪ್ಪೆ ವ್ಯಾಪ್ತಿಯ ಜನರ ಹಿತದೃಷ್ಟಿಯಿಂದ ವೈದ್ಯರನ್ನು ನಿಯೋಜಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

3 ಬಾರಿ ನೋಟಿಸ್‌ ನೀಡಲಾಗಿದೆ: ಡಾ.ರವಿಕುಮಾರ್‌
ರಕ್ಷಣಾ ಟ್ರಸ್ಟ್‌ ವತಿಯಿಂದ ಡಿ.ಬಿ.ಕುಪ್ಪೆ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನಿಯೋಜಿಸಲಾಗಿತ್ತು. ಈಗ ಅವರ ಅವಧಿ ಪೂರ್ಣಗೊಂಡಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳ ಆದೇಶದಂತೆ ಅವಧಿ ಮುಗಿದ ವೈದ್ಯರಿಂದ ಅಧಿಕಾರ ಹಸ್ತಾಂತರಕ್ಕೆ ಬಯಸಿದಾಗೆಲ್ಲಾ 3 ತಿಂಗಳ ಕಾಲಾವಕಾಶ ಇದೆ. ನಂತರ ಹಸ್ತಾಂತರಿಸುವ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈಗಾಗಲೇ ಅವರಿಗೆ3ನೋಟಿಸ್‌ ಜಾರಿ ಮಾಡಲಾಗಿದೆ. ಹಿರಿಯ ಅಧಿಕಾರಿಗಳ
ಮಾರ್ಗದರ್ಶನದಲ್ಲಿ 15 ದಿನಗಳಲ್ಲಿ ಸಮಸ್ಯೆ ಪರಿಹಾರಕ್ಕೆಕ್ರಮ ವಹಿಸಲಾಗುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್‌ ತಿಳಿಸಿದ್ದಾರೆ.

ಈಗಾಗಲೇ ಕೇರಳದಲ್ಲಿನ ಸೋಂಕಿನಿಂದ ಜನ ಭಯಭೀತರಾಗಿದ್ದಾರೆ.ಹೀಗಿರುವಾಗ ಗಡಿಭಾಗದ ಆಸ್ಪತ್ರೆಗೆ ವೈದ್ಯರೇ ಇಲ್ಲದೆ 2 ತಿಂಗಳು ಕಳೆಯುತ್ತಿದೆ. ಅರಣ್ಯದೊಳಗಿರುವ ಡಿ.ಬಿ.ಕಪ್ಪೆ ವ್ಯಾಪ್ತಿಯ ಜನರ ಪ್ರಾಣಹಾನಿಗೆ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು.
-ತಿರುಪತಿ, ಡಿ.ಬಿ.ಕುಪ್ಪೆ
ಗ್ರಾಪಂ ಮಾಜಿ ಅಧ್ಯಕ್ಷಕರು

-ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next