Advertisement

ಸ್ವಾಬ್ ನೀಡಿ 15 ದಿನವಾದರೂ ವರದಿಯಿಲ್ಲ: ಚಿಕ್ಕಮಗಳೂರು ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ

12:11 PM Jul 23, 2020 | keerthan |

ಚಿಕ್ಕಮಗಳೂರು: ಕೋವಿಡ್ ಪರೀಕ್ಷೆಗಾಗಿ ಗಂಟಲು ದ್ರವ ಮಾದರಿ ನೀಡಿ 15 ದಿನವಾದರೂ ವರದಿ ನೀಡಿದ ಜಿಲ್ಲಾಡಳಿತದ ವಿರುದ್ಧ ಜನರು ಅಸಮಧಾನಗೊಂಡಿದ್ದು, ಅಸಹಕಾರ ಚಳವಳಿ ನಡೆಸಲು ಕಳಸದ ಜನರು ನಿರ್ಧರಿಸಿದ್ದಾರೆ.

Advertisement

ಸ್ವಾಬ್ ಮಾದರಿ ನೀಡಿ ಎರಡು ವಾರಗಳು ಕಳೆದರೂ ಪರೀಕ್ಷಾ ಫಲಿತಾಂಶವನ್ನು ಜಿಲ್ಲಾಡಳಿತ ನೀಡುತ್ತಿಲ್ಲ. ಹೀಗಾಗಿ ನಾವು ಕೋವಿಡ್ ಪರೀಕ್ಷೆ ನಡೆಸುವುದಿಲ್ಲ ಎಂದು ಅಭಿಯಾನ ಆರಂಭಿಸಲಾಗಿದೆ.

ಆಕ್ರೋಶಗೊಂಡ ಜನರು ಸಾಮಾಜಿಕ ಜಾಲತಾಣದ ಮೂಲಕ ಅಭಿಯಾನ ಆರಂಭಿಸಿದ್ದು, ಕಳಸದಲ್ಲಿ ಯಾರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಡಿ, ಎರಡು  ದಿನದಲ್ಲಿ ವರದಿ ನೀಡುವ ಭರವಸೆ ನೀಡಿದರೆ ಮಾತ್ರ ಟೆಸ್ಟ್ ಮಾಡಿಸಿ, ಇಲ್ಲವಾದಲ್ಲಿ ಟೆಸ್ಟ್ ಮಾಡಿಸಿಕೊಳ್ಳುವುದು ಬೇಡ ಎನ್ನುವ ಅಭಿಯಾನ ಆರಂಭಿಸಿದ್ದಾರೆ.

ರಿಪೋರ್ಟ್ ಬರುವುದು ವಿಳಂಬವಾದಲ್ಲಿ ಸೋಂಕು ಖಚಿತ ಎಂಬಂಥ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಗಂಟಲು ದ್ರವ ಮಾದರಿ ಸಂಗ್ರಹಿಸಿದ ಎರಡು ದಿನದಲ್ಲಿ ವರದಿ ನೀಡಬೇಕು ಎಂದು ಒತ್ತಾಯಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next