Advertisement

ಉಗ್ರ ಸಂಘಟನೆ ಸೇರುವ ಪ್ರಮಾಣದಲ್ಲಿ ಇಳಿಕೆ

10:04 AM Feb 22, 2020 | Team Udayavani |

ಶ್ರೀನಗರ: ಭಯೋತ್ಪಾದನೆ ಪೀಡಿತ ಜಮ್ಮು-ಕಾಶ್ಮೀರದಲ್ಲಿ ಸ್ಥಳೀಯ ಯುವಕರು ಉಗ್ರ ಸಂಘಟನೆಗಳಿಗೆ ಸೇರುವ ಪ್ರಮಾಣ ತೀವ್ರವಾಗಿ ಕಡಿಮೆಯಾಗಿದೆ. ಇದಕ್ಕೆ ಕಾರಣ ಸೇನೆಯ ಜನಸ್ನೇಹಿ “ಮಾ’ ಕಾರ್ಯಾಚರಣೆ ಎಂದು ಲೆಫ್ಟಿನೆಂಟ್‌ ಜನರಲ್‌ ಕನ್ವಲ್‌ಜೀತ್‌ ಸಿಂಗ್‌ ಧಿಲ್ಲೋನ್‌ ಹೇಳಿದ್ದಾರೆ. ಈ ಕಾರ್ಯಾಚರಣೆ ನಡೆಸುವ ಸೇನಾತಂಡವನ್ನು ಧಿಲ್ಲೋನ್‌ ಮುನ್ನಡೆಸುತ್ತಿದ್ದಾರೆ.

Advertisement

ಎನ್‌ಕೌಂಟರ್‌ ವೇಳೆ ಸಿಕ್ಕಿಬೀಳುವ ಸ್ಥಳೀಯ ಉಗ್ರರನ್ನು, ಅವರ ತಾಯಂದಿರೊಂದಿಗೆ ಮುಖಾಮುಖೀ ಮಾಡಿಸುವುದು ಮಾ ಕಾರ್ಯಾಚರಣೆಯ ಉದ್ದೇಶ. ಅದು ಹಲವು ಯುವಕರನ್ನು ಸಹಜ ಜೀವನಕ್ಕೆ ಹಿಂತಿರುಗುವಂತೆ ಮಾಡಿದೆ.

ನಮ್ಮೆಲ್ಲ ಕಾರ್ಯಾಚರಣೆಗಳಲ್ಲಿ, ಸ್ಥಳೀಯ ಭಯೋತ್ಪಾದಕರನ್ನು ಮುಖ್ಯವಾಹಿನಿಗೆ ಹಿಂತಿರುಗಲು ಗರಿಷ್ಠ ಅವಕಾಶ ನೀಡಿದ್ದೇವೆ. ಕೆಲವೊಮ್ಮೆ ಅರ್ಧಕ್ಕೆ ಎನ್‌ಕೌಂಟರ್‌ ನಿಲ್ಲಿಸಿ, ಹಿರಿಯರನ್ನು ಭಯೋತ್ಪಾದನೆ ಜಾಲಕ್ಕೆ ಸಿಕ್ಕಿಬಿದ್ದ ಯುವಕರ ಮನವೊಲಿಸಲು ಬಳಸುತ್ತಿದ್ದೇವೆ. ಇದರಿಂದ ಸಾಕಷ್ಟು ಯಶಸ್ಸು ಸೇನೆಗೆ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.

ಜಮ್ಮುಕಾಶ್ಮೀರವು ಎರಡು ಕೇಂದ್ರಾಡಳಿತ ಪ್ರದೇಶಗಳಾದ ನಂತರ ಉಗ್ರ ಜಾಲ ಸೇರಿಕೊಳ್ಳುವವರ ಸಂಖ್ಯೆ ಬಹಳ ಕಡಿಮೆಯಾಗಿದೆ. ಸರಾಸರಿ ಐವರು ಮಾತ್ರ ಭಯೋತ್ಪಾದಕ ತಂಡ ಸೇರುತ್ತಿದ್ದಾರೆ. ಇದಕ್ಕೂ ಮುನ್ನ ತಿಂಗಳಿಗೆ 14 ಮಂದಿ ಸೇರುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next