Advertisement

ಲಾಕ್‌ಡೌನ್‌ಗೆ ಜನರ ಡೋಂಟ್‌ ಕೇರ್‌

01:25 PM Jul 20, 2020 | Suhan S |

ಚಿತ್ರದುರ್ಗ: ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ನಿಗದಿ ಮಾಡಿರುವ ಸಂಡೇ ಲಾಕ್‌ಡೌನ್‌ಗೆ ಆಷಾಢದ ಕೊನೆಯ ಭಾನುವಾರ ತುಸು ಅಡ್ಡಿಯಾಯಿತು.

Advertisement

ಸತತ 3ನೇ ವಾರದ ಲಾಕ್‌ಡೌನ್‌ಗೆ ಕೋಟೆನಾಡು ಚಿತ್ರದುರ್ಗದ ಜನತೆ ಕಳೆದ 2 ವಾರಗಳಿಗೆ ಸ್ಪಂದಿಸಿದಂತೆ ಈ ವಾರ ಸ್ಪಂದಿಸಲಿಲ್ಲ. ರಸ್ತೆಯಲ್ಲಿ ಜನರ ಸಂಚಾರ ಕಾಣಿಸುತ್ತಿತ್ತು. ವಾಹನಗಳಂತೂ ವಿಪರೀತ ಎನ್ನಿಸುವಷ್ಟರ ಮಟ್ಟಿಗೆ ಸಂಚರಿಸಿದವು. ಪೊಲೀಸರು ವಿವಿಧೆಡೆ ಚೆಕ್‌ಪೋಸ್ಟ್‌ ಮಾಡಿ ಕೊಂಡು ವಾಹನ ಸವಾರರನ್ನು ತಡೆದು ಬೈದು ಬುದ್ದಿ ಹೇಳುವ ದೃಶ್ಯ ಸಾಮಾನ್ಯವಾಗಿತ್ತು. ಮಾಸ್ಕ್ ಇಲ್ಲದೆ ಅನಗತ್ಯವಾಗಿ ಬೀದಿಗೆ ಬಂದವರಿಗೆ ದಂಡ ಹಾಕುವ ಪ್ರಕ್ರಿಯೆಯೂ ನಡೆಯಿತು.

ಮಾರುಕಟ್ಟೆ, ಬಸ್‌ ನಿಲ್ದಾಣ, ಅಂಗಡಿ, ಮಾರುಕಟ್ಟೆ ಮಳಿಗೆಗಳು ಬಂದ್‌ ಆಗಿದ್ದವು. ಮಾಂಸದ ಅಂಗಡಿ ಮುಂದೆ ಕ್ಯೂ: ಇನ್ನೊಂದು ದಿನದಲ್ಲಿ ಶ್ರಾವಣ ಮಾಸ ಬರುವುದರಿಂದ ಮಾಂಸ ಪ್ರಿಯರು ಭಾನುವಾರವೇ ಮಾಂಸದೂಟ ಮಾಡಲು ನಗರದ ವಿವಿಧಡೆ ಇರುವ ಮಾಂಸದ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದರು. ಚಿಕನ್‌, ಮಟನ್‌, ಮೀನು ಖರೀದಿ  ಭರಾಟೆ ಜೋರಾಗಿತ್ತು. ಕೆಲವು ಮಾಂಸದ ಅಂಗಡಿಗಳಲ್ಲಿ ಮಧ್ಯಾಹ್ನದ ವೇಳೆಗೆ ಮಾಂಸವೇ ಖಾಲಿಯಾಗಿತ್ತು. ಸೋಮವಾರ ಅಮವಾಸ್ಯೆ ಇದ್ದು, ಮಂಗಳವಾರದಿಂದ ಶ್ರಾವಣ ಮಾಸ ಆರಂಭವಾಗಲಿದೆ. ಸಂಪ್ರದಾಯ ಪಾಲಿಸುವ ಬಹುತೇಕ ಮಾಂಸಪ್ರಿಯರು ಈ ಮಾಸದಲ್ಲಿ ಮಾಂಸಾಹಾರ ಸೇವಿಸದ ಕಾರಣ ಒಂದು ತಿಂಗಳ ಕಾಲದ ಮಾಂಸದ ಉಪವಾಸಕ್ಕಾಗಿ ಭಾನುವಾರವೇ ಭರ್ಜರಿ ಬಾಡೂಟ ಮಾಡಿ ತಯಾರಾಗುತ್ತಿದ್ದ ದೃಶ್ಯಗಳು ಕಂಡು ಬಂದವು. ಈ ಕಾರಣಕ್ಕಾಗಿ ಭಾನುವಾರದ ಲಾಕ್‌ಡೌನ್‌ ಕೂಡ ಕಟ್ಟುನಿಟ್ಟಾಗಿ ಜಾರಿಯಾಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next