Advertisement

ಜನರಿಗೆ ಅಚ್ಚೇದಿನ್‌ ಬರಲೇ ಇಲ್ಲ

07:04 PM Nov 08, 2017 | Team Udayavani |

ಚಿಕ್ಕಮಗಳೂರು: ಜನ ಸಾಮಾನ್ಯರಿಗೆ ಅಚ್ಚೆದಿನ್‌ ಬರಲೇ ಇಲ್ಲ ಎಂದು ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಹಾಗೂ ಎ.ಐ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ವ್ಯಂಗ್ಯವಾಡಿದರು. ಅವರು ನಗರದಲ್ಲಿ ಮಂಗಳವಾರ ಮತಗಟ್ಟೆ ಅಧ್ಯಕ್ಷರ ಮತ್ತು ಬ್ಲಾಕ್‌ ಮಟ್ಟದ ಪ್ರತಿನಿ ಧಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಪರಿವರ್ತನ ಯಾತ್ರೆ ಮಾಡುತ್ತಿದೆ. ಅಲ್ಲಿ ಅವರು ಏನನ್ನು ಹೇಳುತ್ತಾರೆ ಎಂದು ಪ್ರಶ್ನಿಸಿದರು. 

Advertisement

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಚ್ಚೆ ದಿನ್‌ ತರುವುದಾಗಿ ಮೂರೂವರೆ ವರ್ಷಗಳ ಹಿಂದೆಯೇ ಹೇಳಿತ್ತು. ಆದರೆ ಆ ಸುದಿನ ಯಾರಿಗೆ ಬಂದಿದೆ. ಅಂಬಾನಿಗೆ, ಅದಾನಿಗೆ ಅಚ್ಚೆದಿನ್‌ ಆಗಿರಬಹುದು ಎಂದರು. ಈ ದೇಶದಲ್ಲಿ 2019ರಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ರಾಹುಲ್‌ ಗಾಂಧಿ  ಪ್ರಧಾನ ಮಂತ್ರಿಯಾಗುವುದು ಖಚಿತ. ರಾಹುಲ್‌ ಗಾಂಧಿ  ಬಗ್ಗೆ ಬಿಜೆಪಿಯವರು ನಕಾರಾತ್ಮಕವಾದ ಸಂದೇಶ ಹಾಗೂ ವಾಟ್ಸ್‌ಅಪ್‌ ಬರಹಗಳನ್ನು ಕಳುಹಿಸುತ್ತಾರೆ. ಆದರೆ ರಾಹುಲ್‌ ಗಾಂಧಿ ಭ್ರಷ್ಟಾಚಾರದ ವಿರೋಧಿಯಾಗಿದ್ದಾರೆ ಎಂದು ತಿಳಿಸಿದರು.

ಪ್ರದೇಶ ಕಾಂಗ್ರೆಸ್‌ ಉಪಾಧ್ಯಕ್ಷ ಬಿ.ಎಲ್‌. ಶಂಕರ್‌ ಮಾತನಾಡಿ, ಕಾಂಗ್ರೆಸ್‌ ಪಕ್ಷದ ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮ ಯಶಸ್ವಿಯಾಗಿದೆ. ಕಾಂಗ್ರೆಸ್‌ ಸರ್ಕಾರದ ಸಾಧನೆಗಳನ್ನು ಹೇಳುತ್ತಲೇ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಜನರಿಗೆ ಏನು ಮಾಡಿದೆ ಎಂಬುದನ್ನು ಪ್ರಶ್ನೆ ಮೂಲಕ ಕೇಳಿ ತಿಳಿದಿದ್ದೇವೆ. ಸರ್ಕಾರದ ಕೆಲಸಗಳು ಹಾಗೂ ಯೋಜನೆಗಳು ಮತಗಳಾಗಿ ಪರಿವರ್ತನೆಯಾಗಬೇಕಾಗಿದೆ. 2018ರಲ್ಲಿ ಮತ್ತೆ ಕಾಂಗ್ರೆಸ್‌ ಅ ಧಿಕಾರ ಹಿಡಿಯಬೇಕೆನ್ನುವುದು ಪಕ್ಷದ ಉದ್ದೇಶ ಎಂದು ತಿಳಿಸಿದರು.

ಚಿಕ್ಕಮಗಳೂರು ಜಿಲ್ಲೆಯ ಬಗ್ಗೆ ಕಾಂಗ್ರೆಸ್‌ ಪಕ್ಷದ ವರಿಷ್ಠರಿಗೆ ವಿಶೇಷವಾದ ನಿರೀಕ್ಷೆ ಇದೆ. 2013ರಲ್ಲಿ ಒಬ್ಬ ಶಾಸಕ ಮಾತ್ರ ಇಲ್ಲಿ ಆಯ್ಕೆಯಾಗಿದ್ದು, ಈ ಬಾರಿ 5 ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿ ಸಬೇಕು. ಅಭ್ಯರ್ಥಿಯನ್ನಾಗಿ ಯಾರನ್ನೇ ಮಾಡಲಿ ಅವರನ್ನು ಗೆಲ್ಲಿಸುವ ಕೆಲಸವನ್ನು ನಾವು ಮಾಡಬೇಕಾಗಿದೆ ಎಂದು ಹೇಳಿದರು.

ಈ ಜಿಲ್ಲೆಯಲ್ಲಿ ಕಾμ ಬೆಳೆಗಾರರ, ಅಡಕೆ ಬೆಳೆಗಾರರ ಸಮಸ್ಯೆಗಳಿವೆ. ಭೂ ಒತ್ತುವರಿ, ಬಗರ್‌ಹಕುಂ ಸಮಸ್ಯೆಗಳು ಹಾಗೆಯೇ ಉಳಿದಿವೆ. ಬಯಲುಸೀಮೆಗೆ ಅಗತ್ಯವಾದ ನೀರಾವರಿ ಸೌಲಭ್ಯ ಒದಗಿಸಬೇಕಾಗಿದೆ. ಹೆಬ್ಬೆ ಮೂಲಕ ಹಾಗೂ ಭದ್ರ ಅಣೆಕಟ್ಟೆ ಮೂಲಕ ನೀರು ಹರಿಸಬೇಕು. ಹಾಗೆಯೇ ಈ ಜಿಲ್ಲೆ ಕೆಲವು ತಪ್ಪು ಕಾರಣಗಳಿಗೆ ಸುದ್ದಿಯಾಗುತ್ತಿದೆ. ಅದು ಆಗದಂತೆ ಸಾಮಾಜಿಕ ನ್ಯಾಯ
ಅಭಿವೃದ್ಧಿಯ ಸದ್ದನ್ನು ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಈ ಜಿಲ್ಲೆಯಲ್ಲಿ ಎಲ್ಲಾ ಕ್ಷೇತ್ರದಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇವೆ ಎಂದು ಪಕ್ಷದ ವರಿಷ್ಠರಿಗೆ ಭರವಸೆ ನೀಡಬೇಕು ಎಂದರು. ಕೇಂದ್ರ ಮಾಜಿ ಸಚಿವೆ ತಾರಾದೇವಿ ಸಿದ್ಧಾರ್ಥ ಮಾತನಾಡಿದರು. ಪ್ರಾಸ್ತಾವಿಕವಾಗಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ| ಡಿ.ಎಲ್‌.ವಿಜಯಕುಮಾರ್‌ ಮಾತನಾಡಿ, ಜಿಲ್ಲಾ ಕೇಂದ್ರವಾದ ಚಿಕ್ಕಮಗಳೂರನ್ನು ಕೇಂದ್ರವಾಗಿರಿಸಿಕೊಂಡು ಉಳಿದ 4 ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆಲುವು ಸಾಧಿ ಸುವ ಪ್ರಯತ್ನಕ್ಕೆ ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮ ಸ್ಪೂರ್ತಿ ನೀಡಿದೆ ಎಂದು ತಿಳಿಸಿದರು. ಪ್ರದೇಶ ಕಾಂಗ್ರೆಸ್‌ ಉಪಾಧ್ಯಕ್ಷ ಡಾ| ಎಲ್‌. ಹನುಮಂತಯ್ಯ, ಜಿ.ಎ. ಬಾವಾ, ಎ.ಐ.ಸಿ.ಸಿ. ಪ್ರಧಾನ ಕಾರ್ಯದರ್ಶಿ ವಿಷ್ಣುನಾಥನ್‌, ಮಾಜಿ ಶಾಸಕ ಗೋಪಾಲಭಂಡಾರಿ, ತಾರಾನಾಥ ಶೆಟ್ಟಿ, ಗಾಯತ್ರಿ ಶಾಂತೇಗೌಡ, ಎ.ಎನ್‌.ಮಹೇಶ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್‌. ಮೂರ್ತಿ, ಅನಿವಾಸಿ ಭಾರತೀಯ ಸಂಘದ ಅಧ್ಯಕ್ಷೆ ಡಾ| ಆರತಿಕೃಷ್ಣ, ಕಿಸಾನ್‌ ಸಭಾ ಅಧ್ಯಕ್ಷ ಸಚಿನ್‌ಮೀಗಾ, ಶಾಸಕ ಜಿ.ಎಚ್‌. ಶ್ರೀನಿವಾಸ್‌, ವಿಧಾನಪರಿಷತ್‌ ಸದಸ್ಯೆ ಮೋಟಮ್ಮ, ಬಿ.ಎಂ. ಸಂದೀಪ್‌ ಇದ್ದರು. ಕಾರ್ಯಕ್ರಮದಲ್ಲಿ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ| ಜಿ.ಪರಮೇಶ್ವರ ಸೇರಿದಂತೆ ಹಾಗೂ ಪಕ್ಷದ ವರಿಷ್ಠರನ್ನು ಬೃಹತ್‌ ಹಾರ ಹಾಗೂ ಮೈಸೂರು ಪೇಟ ಇಟ್ಟು ಗೌರವಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next