ಲಕ್ಷ್ಮೇಶ್ವರ: ಮೇ 10ರಿಂದ ಕರ್ಫ್ಯೂ ಸಂಪೂರ್ಣ ಕಠಿಣವಾಗಲಿದೆ ಎಂಬ ಕಾರಣದಿಂದ ರವಿವಾರ ಪಟ್ಟಣದಲ್ಲಿ ವ್ಯಾಪಾರ-ವಹಿವಾಟು ಜೋರಾಗಿ ನಡೆಯಿತು. ಜನಸಂದಣಿ ತಡೆಯಲು ಮತ್ತು ಮಾರ್ಗಸೂಚಿ ಪಾಲನೆಗಾಗಿ ಪೊಲೀಸ್, ಪುರಸಭೆ ಮತ್ತು ಕಂದಾಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಪರದಾಡಿದರು.
ಪಟ್ಟಣ ಸೇರಿ ಗ್ರಾಮೀಣ ಪ್ರದೇಶಗಳ ಜನರು ಅಗತ್ಯ ವಸ್ತುಗಳ ಖರೀದಿಗೆ ಮಾರ್ಕೆಟ್‌ನಲ್ಲಿ ಜಮಾಯಿಸಿದ್ದರು. ಅನೇಕರು ಮಾಸ್ಕ್ ಧರಿಸಿರಲಿಲ್ಲ, ಸಾಮಾಜಿಕ ಅಂತರವಂತೂ ಮಾಯವಾಗಿತ್ತು. ರವಿವಾರ ಮಾರ್ಕೆಟ್ ಗದ್ದಲವಾಗಲಿದೆ ಎಂಬ ಮಾಹಿತಿ ಹಿನ್ನೆಲೆ ಬೆಳ್ಳಂ ಬೆಳಗ್ಗೆಯೇ ಪೊಲೀಸ್, ಪುರಸಭೆ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಆಗಮಿಸಿ ಜನಸಂದಣಿ ತಡೆಯಲು ಮುಂದಾದರು.
ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ನೇತೃತ್ವದಲ್ಲಿ ಸಿಬ್ಬಂದಿ ನಿಯಮ ಮೀರಿ ವ್ಯಾಪಾರಕ್ಕೆ ಮುಂದಾದ ವ್ಯಾಪಾರಸ್ಥರಿಗೆ ದಂಡ ವಿಧಿ ಸಿದರು. ಇದುವರೆಗೂ ಪುರಸಭೆಯವರು ಅಂದಾಜು 1 ಲಕ್ಷ ರೂ. ದಂಡ ವಿಧಿಸಿದ್ದು ಮೇ 10ರಿಂದ ಕೊರೊನಾ ತಡೆಗಾಗಿ ಪುರಸಭೆ ಸಿಬ್ಬಂದಿ ಹೆಚ್ಚು ಕ್ರಿಯಾಶೀಲತೆಯಿಂದ ಕೆಲಸ ಮಾಡುವಂತೆ ಪೂರ್ವ ಯೋಜನೆ ಕೈಗೊಳ್ಳಲಾಗಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು.
ದಿನಸಿ ಅಂಗಡಿ ಮುಂದೆ ಸಾಲುಗಟ್ಟಿ ವ್ಯಾಪಾರ ಮಾಡುವಂತೆ ಪಿಎಸ್‌ಐ ನೇತೃತ್ವದಲ್ಲಿ ಪೊಲೀಸರು ಕಾರ್ಯ ನಿರ್ವಹಿಸಿದರು. ರವಿವಾರದಿಂದಲೇ 12 ಗಂಟೆ ಬಳಿಕ ಜನ ಸಂಚಾರ ನಿಯಂತ್ರಣಕ್ಕೆ ಪೊಲೀಸರು ಮುಂದಾಗಿ ಬೆತ್ತದ ರುಚಿ ತೋರಿಸಿದರು.
ಸೋಮವಾರದಿಂದ ಪೊಲೀಸ್ ಠಾಣೆ ರಸ್ತೆ, ಅಡರಕಟ್ಟಿ ಕ್ರಾಸ್, ಗದಗ ರಸ್ತೆ, ಗೋವನಾಳ ಮತ್ತು ರಾಮಗಿರಿ ಚೆಕ್‌ಪೋಸ್ಟ್, ಮುಕ್ತಿಮಂದಿರ ರಸ್ತೆ, ಯತ್ನಳ್ಳಿ ರಸ್ತೆಗಳಲ್ಲಿ ರಚಿಸಿರುವ ನಾಕಾಬಂ ಧಿಗಳಲ್ಲಿ ವಾಹನ ಒಳ ಬರದಂತೆ ತಡೆಯುವ ವ್ಯವಸ್ಥೆ ಪೊಲೀಸ್ ಇಲಾಖೆ ಮಾಡಿದೆ. ಮೇ 10ರಿಂದ 24ರವರೆಗೆ ಬೆಳಗ್ಗೆ 6ರಿಂದ 10ರವರೆಗೆ ಮಾತ್ರ ದಿನಸಿ ಮತ್ತು ಅಗತ್ಯ ವಸ್ತುಗಳ ಅಂಗಡಿ ತೆರೆದಿರಲಿವೆ. ಹಣ್ಣು, ತರಕಾರಿ, ಹೂವುಗಳನ್ನು ತಳ್ಳುವ ಗಾಡಿಯಲ್ಲಿಟ್ಟುಕೊಂಡು ಮಾರಾಟ ಮಾಡಬೇಕು.
ಪೊಲೀಸ್, ಪುರಸಭೆ ಅಧಿಕಾರಿ, ಕರ್ಫ್ಯೂ,