Advertisement

ಜನರ ಪ್ರಶ್ನೆ- ಹಸಿರು ಪಟಾಕಿ ಎಂದರೇನು?

03:47 PM Nov 16, 2020 | Suhan S |

ರಾಮನಗರ: ನಾವು ಮಾರಿ¤ರೋದು ಹಸಿರು ಪಟಾಕಿ……, ನಾಗ್ಪುರದ ನ್ಯಾಷನಲ್‌ ಎನ್ವಿರಾನ್‌ ಮೆಂಟಲ್‌ ಇಂಜಿನಿಯರಿಂಗ್‌ ರಿಸರ್ಚ್‌ ಇನ್ಸ್ಯಿ ಟ್ಯೂಟ್‌ (ಸಿ.ಎಸ್‌.ಐ.ಆರ್‌)ತಮಿಳು ನಾಡು ಶಿವಕಾಶಿಯ ಸ್ಟಾಂಡರ್ಡ್‌ ಪಟಾಕಿಮತ್ತು ವನಿತಾ ಫೈರ್‌ವರ್ಕ್ಸ್ಗೆ ಸಿಎಸ್‌ಐಆರ್‌-ನೀರಿ ಪ್ರಮಾಣಿಕೃತ ಪಟಾಕಿಗಳನ್ನೇ ಮಾರುತ್ತಿದ್ದೇವೆ ಎಂದು ರಾಮನಗರದ ಪ್ರಮುಖ ಪಟಾಕಿ ವ್ಯಾಪಾರಿ ಸಂದೀಪ್‌ ಮತ್ತು ಗೆಳೆಯರ ಹೇಳಿಕೆ.

Advertisement

ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ತಾತ್ಕಾಲಿಕ ಮಳಿಗೆ ಸ್ಥಾಪಿಸಿರುವಇವರು, ಸಿಎಸ್‌ಐಆರ್‌-ನೀರಿ ಸಂಸ್ಥೆಗಳು ಪ್ರಾಮಾಣೀಕರಿಸಿರುವ ಪಟಾಕಿಗಳಲ್ಲಿ ವಿಷಕಾರಕ ಲಿಥಿಯಂ, ಆರ್ಸನಿಕ್‌, ಸೀಸ ಅಂಶಗಳು ಇರುವುದಿಲ್ಲ. ಪರಿಸರಕ್ಕೆ ಹೆಚ್ಚು ಧಕ್ಕೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

ವರ್ಷವೂ ಅದೇ ಪ್ರಶ್ನೆ: ಕಳೆದ ವರ್ಷದೀಪಾವಳಿ ಸಂದರ್ಭದಲ್ಲಿಯೂ ಸರ್ಕಾರ ಹಸಿರು ಪಟಾಕಿಯನ್ನು ಮಾತ್ರ ಮಾರಾಟ ಮಾಡಬೇಕು ಎಂದು ತಿಳಿಸಿತ್ತು. ಆಗಲೂ ಪಟಾಕಿ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಹಸಿರು ಪಟಾಕಿ! ಹಾಗಂದರೇನು ಎಂದು ಪ್ರಶ್ನಿಸಿದ್ದರು. ಕೋವಿಡ್‌ ಸಂದರ್ಭದಲ್ಲಿ ಈ ವರ್ಷ ದೀಪಾವಳಿಗೂ ಸಾರ್ವಜನಿಕರಲ್ಲಿ ಇದೇ ಪ್ರಶ್ನೆ ಎದುರಾಗಿದೆ. ಹಸಿರು ಪಟಾಕಿಗೆ ಕರಾರುವಕ್ಕಾದ ಉತ್ತರ ಅಧಿಕಾರಿಗಳ ಬಳಿಯೂ ಇಲ್ಲ. ಹಸಿರು ಪಟಾಕಿ ಅನ್ನೋದು ಪಟಾಕಿ ತಯಾರಿಕರಿಗೆ ಸಂಬಂಧಿಸಿದ್ದು, ಮಾರಾಟಕ್ಕಲ್ಲ ಎಂದು ಕೆಲವು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ಲಿಥಿಯಂ, ಆರ್ಸನಿಕ್‌, ಲೆಡ್‌, ಮೆರ್ಕ್ಯುರಿ ಬಳಸಿ ತಯಾರಿಸಿರುವ ಸಾಂಪ್ರದಾಯಿಕ ಪಟಾಕಿಗಳನ್ನು ಮಾರದಿರುವಂತೆ ಸುಪ್ರೀಂ ಕೋರ್ಟ್‌ ಆದೇಶ ಇದ್ದರೂ ಸರ್ಕಾರಗಳು ಈ ಆದೇಶವನ್ನು ನಿರ್ಲಕ್ಷಿಸಿವೆ. ಹಸಿರು ಪಟಾಕಿಎಂಬ ಲೇಬಲ್‌ ಇರುವ ಪಟಾಕಿಗಳ ಜೊತೆಗೆ ಈ ರೀತಿಯ ಲೇಬಲ್‌ ಇಲ್ಲದ ಪಟಾಕಿಗಳು ಜಿಲ್ಲಾದ್ಯಂತ ಮಾರಾಟಕ್ಕಿವೆ.

ಪಟಾಕಿ ಮಾರಾಟ ಮಾಡುವವರ ಸಂಖ್ಯೆ ಈ ವರ್ಷ ಕ್ಷೀಣಿಸಿದೆ. ಜಿಲ್ಲೆಯಲ್ಲಿ 10 ರಿಂದ 12 ಮಳಿಗೆಗಳು ಮಾತ್ರ ಸ್ಥಾಪನೆಯಾಗಿವೆ. ಜಿಲ್ಲಾ ಕೇಂದ್ರ ರಾಮನಗರದಲ್ಲಿ ಪ್ರತಿ ವರ್ಷ 5-6ಮಳಿಗೆಗಳು ಸ್ಥಾಪನೆಯಾಗುತ್ತಿದ್ದವು. ಆದರೆ, ಈ ವರ್ಷ ಕೇವಲ 2 ಮಳಿಗೆಗಳು ಮಾತ್ರ ಸ್ಥಾಪನೆಯಾಗಿವೆ. ಪಟಾಕಿಗಳಿಗೆ ಬೇಡಿಕೆ ಅಷ್ಟೇನು ಇಲ್ಲ ಎಂಬುದು ಈ ವ್ಯಾಪಾರಿಗಳ ವಾದ. ಕೋವಿಡ್‌ -19 ಸೋಂಕು ನೇರ ಶ್ವಾಸಕೋಶದ ಮೇಲೆ ಪ್ರಭಾವ ಬೀರುವುದರಿಂದ ನಾಗರಿಕರು ಪಟಾಕಿ ಸುಡುವುದರ ಬಗ್ಗೆ ಇನ್ನು ಗೊಂದಲದಲ್ಲಿದ್ದಾರೆ ಎಂಬುದು ವ್ಯಾಪಾರಿಗಳ ಹೇಳಿಕೆ.

Advertisement

ಜಾಗೃತಿ ಮೂಡಿಸುವಲ್ಲಿ ವಿಫ‌ಲ: ಜಿಲ್ಲಾಡಳಿತ, ತಾಲೂಕು ಆಡಳಿತ, ನಗರಸಭೆ, ಪುರಸಭೆ, ಗ್ರಾಪಂ, ಮಾಲಿನ್ಯ ನಿಯಂತ್ರಣ ಇಲಾಖೆಗಳು ಹಸಿರು ಪಟಾಕಿಯ ಬಗ್ಗೆ ಜನಸಾಮಾನ್ಯರಲ್ಲಿಜಾಗೃತಿ ಮೂಡಿಸುವಲ್ಲಿ ಸಂಪೂರ್ಣ ವಿಫ‌ಲವಾಗಿವೆ. ಜಿಲ್ಲೆಯಲ್ಲಿ ಯಾವ ಸಂಘ-ಸಂಸ್ಥೆ, ಪರಿಸರ ಕಾಳಿಜಿ ಉಳ್ಳ ವ್ಯಕ್ತಿಗಳು ಈ ಕುರಿತು ಜಾಗೃತಿ ಮೂಡಿಸಿಲ್ಲ ಎಂಬುದು ವಿಷಾದನೀಯ.

ಶೇ.30 ಮಾಲಿನ್ಯ ತಡೆಯುವುದೇ ಹಸಿರು ಪಟಾಕಿ! :  2018ರಲ್ಲಿ ಸುಪ್ರೀಂ ಕೋರ್ಟ್‌ ವಾಯು, ಜಲ, ಶಬ್ದ, ಭೂ ಮಾಲಿನ್ಯ ಮಾಡುವ ಪಟಾಕಿಗಳತಯಾರಿಕೆ, ಮಾರಾಟಕ್ಕೆ ನಿಷೇಧ ಹೇರಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರ ಕೇಂದ್ರ ಸರ್ಕಾರದ ಸ್ವಾಮ್ಯದ ಸಿ.ಎಸ್‌.ಆರ್‌.ಐ – ನೀರಿ ಸಂಸ್ಥೆಯ ವಿಜ್ಞಾನಿಗಳು ಸತತ ಸಂಶೋಧನೆ ನಡೆಸಿ ಕಡಿಮೆಮಾಲಿನ್ಯಮಾಡುವ ಪಟಾಕಿಗಳ ಬಗ್ಗೆ ವರದಿ ನೀಡಿದೆ. ಬೇರಿಂನೈಟ್ರೇಟ್‌ ಇಲ್ಲದೆ ಅಥವಾ ಈ ರಾಸಾಯನಿಕ ಅಂಶ ತೀರಾ ಕಡಿಮೆ ಬಳಸಿ ಪಟಾಕಿ ತಯಾರಿಸುವುದನ್ನು ತೋರಿಸಿಕೊಟ್ಟಿದೆ. ಈ ಪಟಾಕಿಗಳು ಶೇ.30 ಮಾಲಿನ್ಯ ತಡೆಯುವ ಈ ಪಟಾಕಿಗಳನ್ನು ಹಸಿರು ಪಟಾಕಿ ಎಂದು ನಾಮಕರಣ ಮಾಡಲಾಗಿದೆ. ಸಿ.ಎಸ್‌.ಆರ್‌.ಐ – ನೀರಿ ಸಂಸ್ಥೆಯ ಮಾರ್ಗದರ್ಶನದಲ್ಲಿ ತಯಾರಾಗುವ ಪಟಾಕಿಗಳ ಪ್ಯಾಕುಗಳ ಮೇಲೆ ಹಸಿರು ಬಣ್ಣದ ಲೋಗೋ ಮತ್ತು ಕ್ಯೂಆರ್‌ ಕೋಡ್‌ ನಮೂದಾಗಿರುತ್ತದೆ. ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿದರೆ ಹಸಿರು ಪಟಾಕಿಯ ಬಗ್ಗೆ ಮಾಹಿತಿ ದೊರೆಯುತ್ತದೆ.

ಇದುಕೋವಿಡ್‌ ಸಂದರ್ಭ. ಪಟಾಕಿಹಚ್ಚದಿರುವುದೇಒಳ್ಳೆಯದು.ಆದರೂ, ಪಟಾಕಿ ಅನಾಹುತದಿಂದ ಜಿಲ್ಲಾಸ್ಪತ್ರೆಯಲ್ಲಿ ಸುಟ್ಟ ಗಾಯಗಳ ಪ್ರಕರಣಗಳಿಗೆ ತಕ್ಷಣಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬ್ಯಾಂಡೇಜ್‌ಗಳು, ಇಂಜಕ್ಷನ್‌ಗಳು, ಆಯಿಂಟ್‌ಮೆಂಟ್‌, ನೇತ್ರಚಿಕಿತ್ಸೆಗೆ ಅಗತ್ಯವಿರುವ ಎಲ್ಲಾಪರಿಕರಗಳು, ಔಷಧಗಳು, ಇತ್ಯಾದಿಗಳ ಸಿದ್ಧವಿದೆ.ಇವುಗಳ ದಾಸ್ತಾನು ಸಾಕಷ್ಟಿದೆ. ನೇತ್ರ ತಜ್ಞರು ಜೊತೆಗೆ ಇನ್ನು ಇಬ್ಬರು ತಜ್ಞವೈದ್ಯರುಜಿಲ್ಲಾಕೇಂದ್ರದಲ್ಲೇ ಲಭ್ಯವಿದ್ದು,ಚಿಕಿತ್ಸೆಗೆ ಸಹಕರಿಸಲಿದ್ದಾರೆ.  –ಡಾ.ಎಸ್‌.ಶಶಿಧರ್‌, ಜಿಲ್ಲಾಶಸ್ತ್ರಚಿಕಿತ್ಸಕ

Advertisement

Udayavani is now on Telegram. Click here to join our channel and stay updated with the latest news.

Next