Advertisement

ಮಡಗಾಸ್ಕರ್ : ನಿಯಮ ಉಲ್ಲಂಘಿಸಿದರೆ ಕಸ ಸೇವೆ !

04:38 PM Apr 30, 2020 | sudhir |

ಮಡಗಾಸ್ಕರ್‌: ಎಲ್ಲರಿಗೂ ತಿಳಿದಿರುವಂತೆ ಸದ್ಯ ಕೋವಿಡ್‌-19 ನಿಯಂತ್ರಣಕ್ಕಾಗಿ ಜಾರಿ ಮಾಡಿರುವ ಲಾಕ್‌ಡೌನ್‌ ನಿಯಮವನ್ನು ಉಲ್ಲಂಘಿಸುವವರಿಗೆ ಒಂದೆರೆಡು ಲಾಠಿ ಏಟಿನ ಜತೆ ಸಾವಿರಾರು ರೂ. ದಂಡ ಬೀಳುತ್ತಿದೆ. ಆದರೆ ಇದಕ್ಕೂ ಬಗ್ಗದ ಜನರಿಗೆ ಬುದ್ಧಿ ಕಲಿಸಲು ಇಂಡೋನೇಷ್ಯಾ ಭೂತ ಬಂಗಲೆಯಲ್ಲಿ ಕೂಡಿ ಹಾಕಿತ್ತು. ಆದರೆ ಇದೀಗ ಮಡಗಾಸ್ಕರ್‌ ದೇಶ, ಮಾಸ್ಕ್ ಧರಿಸದೇ ಮನೆಯಿಂದ ಹೊರಕ್ಕೆ ಕಾಲಿಡುವವರಿಗೆ ರಸ್ತೆಯನ್ನು ಗುಡಿಸುವ ಶಿಕ್ಷೆ ನೀಡುತ್ತಿದೆ. ವಿಶೇಷವೆಂದರೆ ಇದು ಕೇವಲ ಒಂದು ಮಾರ್ಗವೋ ಅಥವಾ ರಸ್ತೆಯನ್ನೋ ಒಳಗೊಳ್ಳದೇ ಪೊಲೀಸ್‌ ಅಧಿಕಾರಿಗಳ ಮುಂದಿನ ಆದೇಶದವರೆಗೆ ಈ ಶಿಕ್ಷೆ ಮುಂದುವರಿಯಲಿದೆ.

Advertisement

ಸೋಂಕು ಹರಡುವುದನ್ನು ತಡೆಯಲು ಅಧ್ಯಕ್ಷ ಆಂಡ್ರಿ ರಾಜೋಲಿನಾ ಅವರು ರಾಜಧಾನಿ ಅಂಟಾನನರಿವೊ ಸೇರಿದಂತೆ ಕೆಲವು ನಗರಗಳಲ್ಲಿ ಲಾಕ್‌ಡೌನ್‌ ನಿಯಮ ಸಡಿಲಗೊಳಿಸಿದ್ದರು. ಈ ಸಲುವಾಗಿ ಮಾಸ್ಕ್ ಕಡ್ಡಾಯಗೊಳಿಸಿದ್ದು, ಒಂದು ವೇಳೆ ನಿಯಮ ಉಲ್ಲಂಘಿಸಿದ್ದರೆ ನಗರಗಳ ರಸ್ತೆ ಸ್ವತ್ಛ ಮಾಡುವುದಲ್ಲದೇ, ಕಸವನ್ನು ಸಂಗ್ರಹಿಸಬೇಕು ಎಂದು ಹೊಸ ಶಿಕ್ಷೆ ಪ್ರಕಟಿಸಿದರು. ಎರಡು ದಿನಗಳಲ್ಲೇ ಸುಮಾರು 500 ಮಂದಿಗೆ ಶಿಕ್ಷೆ ವಿಧಿಸಿದ್ದು, ಹಲವು ರಸ್ತೆಗಳು ಸ್ವತ್ಛಗೊಂಡಿವೆಯಂತೆ.

Advertisement

Udayavani is now on Telegram. Click here to join our channel and stay updated with the latest news.

Next