Advertisement

ಜನರ ದಾರಿ ತಪ್ಪಿಸುತ್ತಿದೆ ಕಾಂಗ್ರೆಸ್‌ ಸರ್ಕಾರ: ಸಾರ್ವಭೌಮ

03:17 PM Jan 22, 2018 | |

ಇಂಡಿ: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಡವರ ದೀನ ದಲಿತರ, ರೈತರ ಹಿತ ಕಾಪಾಡದೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಾಳಿಗೆ ತೂರಿ ಸಾರ್ವಭೌಮ ಆಡಳಿತ ನಡೆಸುತ್ತ ಜನರಿಗೆ ಸುಳ್ಳು ಅಶ್ವಾಸನೆಗಳನ್ನು ನೀಡಿ ರಾಜ್ಯದ ಜನರ ದಾರಿ ತಪ್ಪಿಸುತ್ತಿದೆ ಎಂದು ಮಾಜಿ ಶಾಸಕ ಡಾ| ಸಾರ್ವಭೌಮ ಬಗಲಿ ಆರೋಪಿಸಿದರು.

Advertisement

ತಾಲೂಕಿನ ಮಾರ್ಸನಳ್ಳಿ ಗ್ರಾಮದಲ್ಲಿ ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಇಂದು ದೇಶಾದ್ಯಂತ ಭಾರತೀಯ ಜನತಾ ಪಕ್ಷದ ಅಲೆ ಹೆಚ್ಚಾಗಿದೆ ಎಂದರು. 

ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಅವಧಿಯಲ್ಲಿ ಅವರು ಮಾಡಿದ ಸಾಧನೆಗಳು ವಿಶ್ವವೇ ಬೆರಗಾಗಿದೆ. ಇಂದು ಅನೇಕ ನೆರೆಯ ದೇಶಗಳು ಭಾರತದ ಶಕ್ತಿ ಮತ್ತು ಪ್ರಧಾನಿಯವರ ಕಾರ್ಯತತ್ಪರತೆ ನೋಡಿ ಮೂಕ ವಿಸ್ಮಯವಾಗಿವೆ. 70 ವರ್ಷ ಅಡಳಿತ ಮಾಡಿದ ಕಾಂಗ್ರೆಸ್‌ ಕೇವಲ ಜಾತಿ, ಧರ್ಮದ ಹೆರಿನಲ್ಲಿ ಒಡೆದಾಳುವ ನೀತಿ ಅನುಸರಿಸಿದೆ ವಿನಃ ಅಭಿವೃದ್ಧಿ ಶೂನ್ಯ ಎಂದು ಹೇಳಿದರು.

ಬಿಜೆಪಿಯಲ್ಲಿ ಒಡಕಿದೆ ಎಂದು ಹೇಳುತ್ತ ಕಾಂಗ್ರೆಸ್‌ ಮುಖಂಡರು ಜನರಿಗೆ ದಾರಿ ತಪ್ಪಿಸುತ್ತಿದ್ದಾರೆ. ಇದು
ಸತ್ಯಕ್ಕೆ ದೂರವಾದ ಮಾತು. ತಾಲೂಕಿನಲ್ಲಿ ಬಿಜೆಪಿ ಮುಖಂಡರೆಲ್ಲರೂ ಒಗ್ಗಟ್ಟಾಗಿದ್ದೇವೆ. ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ. ಟಿಕೆಟ್‌ ಬೇಡುವುದು ಬಿಜೆಪಿ ಸಾಮಾನ್ಯ ಕಾರ್ಯಕರ್ತರ ಹಕ್ಕು. ಕೊಡುವುದು ಬಿಡುವುದು ವರಿಷ್ಠರಿಗೆ
ಬಿಟ್ಟ ವಿಚಾರ.

ಈ ಬಾರಿ ಯಾರಿಗೆ ಟಿಕೆಟ್‌ ನೀಡಿದರೂ ಒಟ್ಟಾರೆ ನಮ್ಮ ಉದ್ದೇಶ ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷವನ್ನು ಗೆಲ್ಲಿಸುವುದಾಗಿದೆ. ನಾನು ಸಹಿತ ಈಗ ಸಾಮಾನ್ಯ ಕಾರ್ಯಕರ್ತರಂತೆ ತಾಲೂಕಿನಾದ್ಯಂತ
ಸಂಚರಿಸಿ ಪಕ್ಷವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೇನೆ. ಕರ್ನಾಟಕ ರಾಜ್ಯದಲ್ಲಿ ಈ ಬಾರಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರರಷ್ಟೇ ಸತ್ಯವಾಗಿದೆ.

Advertisement

ಬಿ.ಎಸ್‌. ಯಡಿಯೂರಪ್ಪನವರ ಆಡಳಿತ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ರಾಜ್ಯದಲ್ಲಿ ನಡೆದಿವೆ. ಕಾರ್ಯಕರ್ತರು ಹಿಂದಿನ ಅಧಿಕಾರವಧಿಯಲ್ಲಿ ಮಾಡಿರುವ ಸಾಧನೆಯನ್ನು ಸಾಮಾನ್ಯ ಜನರಿಗೆ ಮನ ಮುಟ್ಟುವಂತೆ ಪ್ರತಿ ಮನೆ ಮನೆ ಸಂಚರಿಸಿ ತಿಳಿಸಬೇಕು. ಈ ಮೂಲಕ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪನವರ ಕೈ ಬಲಪಡಿಸೋಣ ಎಂದು ಹೇಳಿದರು.

ಬಸುಗೌಡ ಬಿರಾದಾರ, ಎಸ್‌.ಟಿ. ಪಾಟೀಲ, ಮಲ್ಲು ಗುಡ್ಲ, ಚಂದ್ರಶೇಖರ ಹಳೆಂಬರ, ವಿಠ್ಠಲ ಯಾಳಗಿ, ಗುರು ಶಿರಶ್ಯಾಡ, ಬಾಪುಗೌಡ ಪಾಟೀಲ, ಜಟ್ಟಿಂಗರಾಯ ಜಮಾದಾರ, ದ್ಯಾಮಗೊಂಡ ಜಮಾದಾರ, ಸಿದ್ದರಾಮ
ಜಮಾದಾರ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next