Advertisement

Pendrive Case: ರಾಜಕೀಯವಾಗಿ ಒಂದು ಕುಟುಂಬ ಮುಗಿಸಲು ತಂತ್ರ: ಆರಗ ಜ್ಞಾನೇಂದ್ರ

01:13 PM May 08, 2024 | Team Udayavani |

ಶಿವಮೊಗ್ಗ: ಈ ಕೃತ್ಯವನ್ನು ನಾನು ಖಂಡಿಸುತ್ತೇನೆ. ಅಪರಾಧ ಮಾಡಿದವರನ್ನು ದಂಡಿಸಬೇಕು. ಈ ಪ್ರಕರಣವನ್ನು ಎಸ್ಐಟಿಗೆ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಪೆನ್ ಡ್ರೈವ್ ವಿತರಣೆ ಮಾಡಿದವರು ಕೂಡ ಅಷ್ಟೇ ದೊಡ್ಡ ಅಪರಾಧಿಗಳು ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Advertisement

ಪ್ರಜ್ವಲ್ ರೇವಣ್ಣ ಪ್ರಕರಣ ವಿಚಾರವಾಗಿ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ ಇವರು, ಪೆನ್ ಡ್ರೈವ್ ಹಂಚಿದವರನ್ನು ಸರ್ಕಾರ ಗಮನಿಸುತ್ತಿಲ್ಲ. ಇಂತಹ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಇದು ನಾಚೀಗೇಡು, ಹೇಸಿಗೆಯ ರಾಜಕೀಯ ಇದು ಎಂದರು.

ಡಿಸಿಎಂ ಡಿಕೆಶಿ ಅವರ ಎರಡ್ಮೂರು ಪ್ರಕರಣ ಆಗಿದೆ. ದೇವೇಗೌಡರಿಗೆ ನೋವುಂಟು ಮಾಡಬೇಕು ಎನ್ನುವುದು ಇದರ ಹಿಂದೆ ಇದೆ, ಒಕ್ಕಲಿಗ ನಾಯಕತ್ವದ ಪ್ರಶ್ನೆ ಈ ಪ್ರಕರಣದ ಹಿಂದೆ ಇದೆ ಎಂದು ಹೇಳಿದರು.

ಎಸ್ಐಟಿ ತನಿಖೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ಸಿಎಂ,ಡಿಸಿಎಂ ಮಾರ್ಗದರ್ಶನದಲ್ಲಿ ಈ ತನಿಖೆ ನಡೆಯುತ್ತಿದೆ. ಕೂಡಲೇ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದರು.

ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ. ರಾಜಕೀಯವಾಗಿ ಒಂದು ಕುಟುಂಬ ಮುಗಿಸಲು ತಂತ್ರ ನಡೆಯುತ್ತಿದೆ. ಈ ಪ್ರಕರಣದ ಹಿಂದೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಇದ್ದಾರೆ ಎಂದು ಆರೋಪಿಸಿದರು.

Advertisement

ಇದನ್ನು ಆ ಕಮ್ಯೂನಿಟಿ ಒಪ್ಪಲ್ಲ. ಪೆನ್ ಡ್ರೈವ್ ಹೊರಗಡೆ ಬಿಟ್ಟಿದ್ದು ಸಹ ಅಷ್ಟೇ ದೊಡ್ಡ ತಪ್ಪು. ಎಸ್ಐಟಿ ಒತ್ತಡದಲ್ಲಿ ತನಿಖೆ ಮಾಡುತ್ತಿದೆ. ಪೆನ್ ಡ್ರೈವ್ ಪ್ರಕರಣ ಪಾರದರ್ಶವಾಗಿ ನಡೆಯದೆ ಡಿಕೆಶಿ, ಶಿವರಾಮೇಗೌಡ ಮಾತಾಡಿರುವ ಆಡಿಯೋ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next