Advertisement

ಬರಬೇಕಿದೆ 977 ಜನರ ವರದಿ

01:04 PM Jun 25, 2020 | Team Udayavani |

ಬಾಗಲಕೋಟೆ: ಜಿಲ್ಲೆಯಿಂದ ಕಳುಹಿಸಲಾದ ಬಾಕಿ 728 ಹಾಗೂ ಹೊಸದಾಗಿ ಕಳುಹಿಸಲಾದ 249 ಸ್ಯಾಂಪಲ್‌ ಸೇರಿ ಒಟ್ಟು 977 ಸ್ಯಾಂಪಲ್‌ ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದ ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ| ಕೆ.ರಾಜೇಂದ್ರ ತಿಳಿಸಿದ್ದಾರೆ.

Advertisement

ಹೊಸದಾಗಿ ಕಳುಹಿಸಲಾದ 249 ಸ್ಯಾಂಪಲ್‌ಗ‌ಳ ಪೈಕಿ ಜಿಲ್ಲಾ ಆಸ್ಪತ್ರೆಯಿಂದ 37, ಮುಧೋಳದಿಂದ 62, ಜಮಖಂಡಿಯಿಂದ 3, ಕಲಾದಗಿ 87, ಬೀಳಗಿ 13, ಬಾದಾಮಿ 35, ಹುನಗುಂದ 5 ಹಾಗೂ ಇಳಕಲ್ಲದಿಂದ 7 ಸ್ಯಾಂಪಲ್‌ ಕಳುಹಿಸಲಾಗಿದೆ. ಜಿಲ್ಲಾ ಕೋವಿಡ್‌ ಲ್ಯಾಬ್‌ನಲ್ಲಿ 23 ಸ್ಯಾಂಪಲ್‌ ಗಳನ್ನು ಪರೀಕ್ಷಿಸಲಾಗಿದ್ದು, 23 ಸ್ಯಾಂಪಲ್‌ಗ‌ಳ ವರದಿ ನೆಗೆಟಿವ್‌ ಬಂದಿವೆ. ಪ್ರತ್ಯೇಕವಾಗಿ 545 ಜನರ ಮೇಲೆ ನಿಗಾ ವಹಿಸಲಾಗುತ್ತಿದೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 11350 ಸ್ಯಾಂಪಲ್‌ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 10178 ನೆಗಟಿವ್‌ ಬಂದಿದ್ದು, 137 ಪಾಸಿಟಿವ್‌ ಬಂದಿವೆ.

ಕೋವಿಡ್‌-19 ದಿಂದ ಒಟ್ಟು 100 ಜನ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. 36 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿವರೆಗೆ ಒಟ್ಟು 17 ಸ್ಯಾಂಪಲ್‌ಗ‌ಳು ಮಾತ್ರ ರಿಜೆಕ್ಟ್ ಆಗಿರುತ್ತವೆ. ಕಂಟೇನ್ಮೆಂಟ್‌ ಝೋನ್‌ 8 ಇದ್ದು, ಇನ್‌ಸ್ಟಿಟ್ಯೂಶನ್‌ ಕ್ವಾರಂಟೈನ್‌ನಲ್ಲಿದ್ದ 3502 ಜನರನ್ನು ಬಿಡುಗಡೆ ಮಾಡಲಾಗಿದೆ. ಹೊರರಾಜ್ಯಗಳಿಂದ ಜೂನ್‌ 23 ರಂದು ಒಟ್ಟು 12 ಜನ ಜಿಲ್ಲೆಗೆ ಆಗಮಿಸಿದ್ದಾರೆ. ಅದರಲ್ಲಿ ಗುಜರಾತದಿಂದ 5, ರಾಜ್ಯಸ್ಥಾನ, ಉತ್ತರ ಪ್ರದೇಶ, ಹರಿಯಾಣದಿಂದ ತಲಾ ಒಬ್ಬರು, ಕೇರಳದಿಂದ4 ಜನ ಆಗಮಿಸಿದ್ದಾರೆ. 12 ಜನರನ್ನು ಹೋಮ್‌ ಕ್ವಾರಂಟೈನ್‌ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next