Advertisement

ಪೆನ್ಸಿಲ್‌ ಬಾಕ್ಸ್‌ : ಮರೆಯಲಾಗದ ಅನುಭವ

05:48 PM Jul 20, 2021 | Team Udayavani |

ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದಷ್ಟು ಮನಸ್ಸಿನ ಸಂತೋಷ ಇನ್ನೂ ದುಪ್ಪಟಾಗುತ್ತದೆ. ಅನೇಕ ಬಾರಿ ಪ್ರತಿಯೊಬ್ಬರಲ್ಲಿ ಒಂದು ಕ್ಷಣ ಮನಸ್ಸಿಗೆ “ಬಾಲ್ಯ ಜೀವನ ಎಷ್ಟು ಚೆನ್ನಾಗಿತ್ತು, ಮಕ್ಕಳಾಟಿಕೆಯ ಜೀವನ ಚಿಂತೆಗಳಿಲ್ಲದ ಕಾರಣ ಇಳಿ ವಯಸ್ಸಿನ ಸವಿ ನೆನಪಿನ ಕ್ಷಣ ಕಣ್ಮುಂದೆ ಬರುತ್ತವೆ.

Advertisement

ಈ ಪರಿಸ್ಥಿತಿಗಳಿಗೆ ತಕ್ಕಂತೆ ಚಿಂತೆ, ಕೆಲಸದ ಒತ್ತಡ,ಅನೇಕ ಜವಾಬ್ದಾರಿಗಳು ನಮ್ಮನ್ನು ಬಾಲ್ಯದ ಕಡೆ ಹಿಂದಿರುಗಿ ನೋಡುವಂತೆ ಮಾಡುತ್ತವೆ.

ನೆನಪು ಮಾಡಿಕೊಳ್ಳಲು ಸಾಧ್ಯವಾದರೂ, ಬಾಲ್ಯ ಜೀವನಕ್ಕೆ ಪುನಃ ಹಿಂದಿರುಗಲು ಅಸಾಧ್ಯವಾಗುತ್ತದೆ. ಆದ ಕಾರಣ ಕೆಲವೊಂದು ಮನೋರಂಜನೆಗಳಾದ ನಾಟಕ, ನೃತ್ಯ, ಚಲನಚಿತ್ರಗಳ ಮೂಲಕ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತದೆ.

ಹಾಗೆಯೇ ಪೆನ್ಸಿಲ್‌ ಬಾಕ್ಸ್‌ ಎಂಬ ಕನ್ನಡ ಸಿನೆಮಾವು ಪ್ರತಿಯೊಬ್ಬರನ್ನೂ ಬಾಲ್ಯದ ಕಡೆ ಮೆಲುಕು ಹಾಕುವಂತೆ ಮಾಡುತ್ತದೆ. ಮಕ್ಕಳ ಮನಸ್ಸಿನ ಮುಗ್ಧಕಥೆಯನ್ನು ವಿವರಿಸುವ ಈ ಚಿತ್ರವು,”ದೃಶ್ಯ ಮೂವೀಸ್‌ ಬ್ಯಾನರ್‌ನ ದಯಾನಂದ ಎಸ್‌. ರೈ ನಿರ್ಮಾಣದ ರಝಾಕ್‌ ಪುತ್ತೂರು ನಿರ್ದೇಶಿಸಿರುವ ಈ ಸಿನೆಮಾದಲ್ಲಿ ದೀಕ್ಷಾ ಡಿ. ರೈ ನಟಿಸಿದ್ದಾರೆ. 2019ರ ವರ್ಷಾಂತ್ಯದಲ್ಲಿ ಈ ಸಿನೆಮಾ ಬಿಡುಗಡೆಯಾಗಿತ್ತು.

ಚಿತ್ರತಂಡ ಒಗ್ಗಟ್ಟು :

Advertisement

ಹಿರಿಯ ಕಲಾವಿದರಿಂದ ಕಿರಿಯ ಕಲಾವಿದರವರೆಗೂ ಅನೇಕ ಪ್ರತಿಭಾನ್ವಿತ ಕಲಾವಿದರು ನಟಿಸಿರುವುದು ಪೆನ್ಸಿಲ್‌ ಬಾಕ್ಸ್‌ ಚಿತ್ರದ ವಿಶೇಷ. ಈ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿಯಾಗಿ ತುಳುನಾಡ ಮಾಣಿಕ್ಯ ಅರವಿಂದ್‌ ಬೋಳಾರ್‌, ನವರಸ ನಾಯಕನ ಭೋಜರಾಜ್‌ ವಾಮಂಜೂರು, ರಮೇಶ್‌ ರೈ ಕುಕ್ಕುವಳ್ಳಿ ಪಾತ್ರಗಳಿಗೆ ಜೀವ ತುಂಬಿದ್ದಾರೆ

ಅಭಿಷೇಕ್‌ ರಾವ್‌ , ವೈಷ್ಣವಿ ರವಿ, ಕ್ಷಿತಿ ರೈ ಧರ್ಮಸ್ಥಳ, ಅಪೇಕ್ಷಾ ಪೈ ಹಾಗೂ ಜನ್ಯ ಪ್ರಸಾದ್‌ ಅವರು ಪೆನ್ಸಿಲ್‌ ಬಾಕ್ಸ್‌ ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಜಯಕಾರ್ತಿ ಇಂಪಾದ ಸಂಗೀತ ಸಂಯೋಜಕರಾಗಿ ಡಿಪಿನ್‌ ದಿವಾಕರ್‌ ಸಂಕಲನದ ಮೋಹನ್‌ ಪಡ್ರೆಯವರ ಕೆಮರಾ ಕೈ ಚಳಕದಿಂದ ಚಿತ್ರವನ್ನು ರಂಗೇರಿಸಿದ್ದಾರೆ. ಯೋಗೀಶ್‌ ಕಡಂದೇಲು ಮತ್ತು ಪ್ರದೀಪ್‌ ಪಾಣಾಜೆ ಇವರ ಕಾಲ ನೈಪುಣ್ಯ ಹಾಗೂ ಸಹ ನಿರ್ದೇಶಕರಾಗಿ ಮಣಿ ಸೆಲ್ವಂ, ಸುಜಿತ್‌ ಎಸ್‌ , ಪಾಟಲಿ, ಅಕ್ಷತ್‌ ವಿಟ್ಲ ಕಾರ್ಯನಿರ್ವಹಿಸಿದ್ದಾರೆ ಒಗಟ್ಟಿ ನಲ್ಲಿ ಬಲವಿದೆ ಎಂಬ ಗಾದೆ ಮಾತಿನಂತೆ ಇವರೆಲ್ಲರ ಪರಿಶ್ರಮ, ತಾಳ್ಮೆ, ಸ್ನೇಹವು ಪೆನ್ಸಿಲ್‌ ಬಾಕ್ಸ್‌ ಚಿತ್ರವನ್ನು ಜನರ ಮನಸ್ಸಿಗೆ ನಾಟುವಂತೆ ಮಾಡಿದೆ.

ಪೆನ್ಸಿಲ್‌ ಬಾಕ್ಸ್‌  ಚಿತ್ರದ ಅನುಭವ:

ಈ ಚಿತ್ರವು ನನಗೆ ಅನೇಕ ಅನುಭವದ ಜತೆಗೆ ಅವಕಾಶವನ್ನು ದೊರಕಿಸಿ ಕೊಟ್ಟಿದೆ. ಸಹ ನಿರ್ದೇಶಕ ಅಕ್ಷತ್‌ ವಿಟ್ಲ ಇವರ ಮೂಲಕ ಚಿತ್ರದಲ್ಲಿ ಪರದೆಯ ಮೇಲೆ ನಟಿಸಲು ಅವಕಾಶವಿದ್ದರೂ ಅನಿವಾರ್ಯ ಕಾರಣಗಳಿಂದ ನಟಿಸಲು ಸಾಧ್ಯವಾಗಲಿಲ್ಲ ಆದರೆ ಪರೋಕ್ಷವಾಗಿ ಚಿತ್ರದ ಒಂದು ಪಾತ್ರಕ್ಕೆ ಧ್ವನಿಯನ್ನು ಕೊಡುವ ಮೂಲಕ ಹಾಗೂ ಚಿತ್ರತಂಡದ ಜತೆಗೆ ಪ್ರಚಾರದ ವೇಳೆ ಕಳೆದಂತಹ ಸಮಯದ ನೆನಪುಗಳು ಎಂದಿಗೂ ಎಂದೆಂದಿಗೂ ನನ್ನಲ್ಲಿ ಶಾಶ್ವತವಾಗಿರುತ್ತವೆ.

ಸಂದೇಶಭರಿತ ಚಿತ್ರ :

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸಾಧನೆ ಮಾಡಬೇಕೆಂಬ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ, ಅವರ ಕನಸುಗಳನ್ನು ನನಸು ಮಾಡುವಲ್ಲಿ ಯುವಜನತೆ ಸಹಕಾರಿಯಾಗಬೇಕು ಎಂಬ ಅದ್ಭುತ ಸಂದೇಶದೊಂದಿಗೆ ಈ ಚಿತ್ರವು ಮೂಡಿಬಂದಿದೆ. ಹಾಗೇನೆ ಬಾಲ್ಯದ ನೆನಪುಗಳೊಂದಿಗೆ ಶಾಲಾ ಜೀವನದ ಆಟ ಪಾಠದ ಜತೆಗೆ ತುಂಟಾಟ ಪ್ರತಿಯೊಂದು ಸಂದೇಶಗಳನ್ನು ಮರುಕಳಿಸುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಅಸು ಪಾಸಿನಲ್ಲಿ ಚಿತ್ರಿಸಲಾಗಿದೆ.

 

ಸುಕನ್ಯಾ ಎನ್‌. ಆರ್‌.

ವಿವೇಕಾನಂದ ಕಾಲೇಜು ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next