ಆಳಂದ: ಸರ್ಕಾರ ಪ್ಯಾಸ್ಟಿಕ್ ಬಳಕ ನಿಷೇಧಿಸಿದ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳಲ್ಲಿ ಪ್ಯಾಸ್ಟಿಕ್ ಮಾರಾಟ ಮುಂದುವರಿಸಿದರೆ ದಂಡ ವಿಧಿಸಲಾಗುವುದು ಎಂದು ಪುರಸಭೆ ಪರಿಸರ ಅಭಿಯಂತರ ರವಿಕಾಂತ ಮಿಸ್ಕಿನ್ ಹೇಳಿದರು.
ಪುರಸಭೆ ವತಿಯಿಂದ ಪಟ್ಟಣದ ವಿವಿಧೆಡೆ ಸಿಂಗಲ್ ಲೈನ್ ಪ್ಯಾಸ್ಟಿಕ್ ಬ್ಯಾನ್ ಹಿನ್ನೆಲೆಯಲ್ಲಿ ಅಂಗಡಿಗಳ ಮೇಲೆ ದಾಳಿ ಕೈಗೊಂಡು ಅವರು ಮಾತನಾಡಿದರು.
ಪಟ್ಟಣದ ಹಳೆ ತಹಶೀಲ್ದಾರ್ ಕಚೇರಿ, ಮುಖ್ಯರಸ್ತೆ, ಶ್ರೀರಾಮ ಮಾರುಕಟ್ಟೆ ಬಸ್ ನಿಲ್ದಾಣ ರಸ್ತೆ ಸೇರಿದಂತೆ ವಿವಿಧ ಅಂಗಡಿಗಳಿಗೆ ತೆರಳಿ 18ಕೆ.ಜಿ ಪ್ಯಾಸ್ಟಿಕ್ ಚೀಲ, ಸಾಮಗ್ರಿ ಜಪ್ತಿ ಮಾಡಿ ಮಾರಾಟ ನಡೆಸದಂತೆ ಎಚ್ಚರಿಸಿದರು.
ಮುಂದಿನ ದಿನಗಳಲ್ಲಿ ಪ್ಯಾಸ್ಟಿಕ್ ಮಾರಾಟ ಬಳಕೆ ಕಂಡುಬಂದಲ್ಲಿ ದಂಡ ವಿಧಿಸಲಾಗುವುದು ಎಂದು ಅವರು, ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದರು.
ಪಟ್ಟಣದ ಅಂಗಡಿಗಳ ಮೇಲೆ ಕನ್ನಡ ನಾಮ ಫಲಕ ಕಡ್ಡಾಯವಾಗಿರಲಿ. ಆಂಗ್ಲಫಲಕಗಳನ್ನು ನೀವಾಗಿಯೇ ತೆಗೆದುಹಾಕಬೇಕು. ಈ ಕುರಿತು ಸಾಕಷ್ಟು ಬಾರಿ ಕರಪತ್ರ ಹಾಗೂ ಧ್ವನಿವರ್ಧಕ ಮೂಲಕ ಹೇಳಿದರೂ ಸ್ಪಂದಿಸುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ದಂಡ ವಿಧಿಸಿ, ಫಲಕ ತೆಗೆದು ಹಾಕಲಾಗುವುದು ಎಂದು ಎಚ್ಚರಿಸಿದರು. ಎಸ್‌ಐ ರಾಘವೇಂದ್ರ ಮಡಿವಾಳ ಹಾಗೂ ಸಿಬ್ಬಂದಿ ತಂಡದಲ್ಲಿದ್ದರು.