Advertisement
ಕೇವಲ ಹಿಂದಿ ಭಾಷೆಯಷ್ಟೆ ಇಡೀ ರಾಷ್ಟ್ರದ ಏಕತೆಗೆ ನೆರವಾದೀತು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ಸದ್ಯ ಒತ್ತಟ್ಟಿಗಿಡೋಣ. ಈ ಪ್ರಶ್ನೆಯನ್ನು ಪ್ರತ್ಯೇಕ ನೆಲೆಯಲ್ಲಿ ಬಗೆಹರಿಸಿಕೊಳ್ಳಬೇಕಾ ಗುತ್ತದೆ. ಸದ್ಯ ಸಾರಿಗೆ ನಿಯಮ ಉಲ್ಲಂಘನೆಗಾಗಿ ವಿಧಿಸ ಲಾಗಿರುವ ಭಾರೀ ಮೊತ್ತದ ದಂಡದ ಬಗ್ಗೆ ಗಮನ ಹರಿಸೋಣ. ದಂಡ ಮೊತ್ತದಲ್ಲಿ ಮಾಡಲಾಗಿರುವ ತೀವ್ರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಬಿಜೆಪಿ ಆಡಳಿತದ ರಾಜ್ಯಗಳೂ ತಮ್ಮ ಸರಕಾರದ ವಿರೋಧವನ್ನು ಪ್ರಕಟಿಸುವ ಧೈರ್ಯ ತೋರಿವೆ. ಸಂಚಾರ ನಿಯಮ ಉಲ್ಲಂಘಿಸಿದರೆ ಕಟ್ಟಬೇ ಕಾದ ದಂಡ ಮೊತ್ತವನ್ನು ಹತ್ತು ಪಟ್ಟು ಹೆಚ್ಚಿಸುವ ಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಅಧ್ವರ್ಯುಗಳಿಗೆ ಹಾಗೂ ಅದರ ರಸ್ತೆ ಸಾರಿಗೆ ಖಾತೆ ಹಾಗೂ ಹೆದ್ದಾರಿ ನಿರ್ವಹಣ ಖಾತೆಯ ಸಚಿವ ನಿತಿನ್ ಗಡ್ಕರಿಯವರಿಗೆ ಯಾರೋ ಅಸಡ್ಡಾಳ ಸಲಹೆ ನೀಡಿದ್ದಾರೆಂಬುದು ಸ್ಪಷ್ಟ. ಬೈಕ್ ಅಥವಾ ಮೊಪೆಡ್‌ಗಳ ಮಾತು ಬಿಟ್ಟು ಬಿಡೋಣ. ಈ ದೇಶದಲ್ಲಿ ಕಾರನ್ನು ಹೊಂದಿರುವ ಪ್ರತಿಯೊಬ್ಬರೂ ಅನುಕೂಲವಂತ ಕುಳಗಳೆಂದೇ ಕೇಂದ್ರದಲ್ಲಿರುವ ಉನ್ನತ ಮಟ್ಟದ ಅಧಿಕಾರಿಗಳು ಭಾವಿಸಿಕೊಂಡಿದ್ದಾರೆಂದು ಕಾಣುತ್ತದೆ. ವಾಸ್ತವವೆಂದರೆ, ವಾಹನವನ್ನು ಹೊಂದಿರುವ ವ್ಯಕ್ತಿಗಳ ಪೈಕಿ ಅನೇಕರು ತಮ್ಮ ಕನಸಿನ ವಾಹನಗಳ ಖರೀದಿ ಗಾಗಿ ಬ್ಯಾಂಕುಗಳಿಂದಲೋ ಇತರ ಯಾವುದೋ ಮೂಲ ಗಳಿಂದಲೋ ಸಾಲ ಮಾಡಿರುತ್ತಾರೆ. ಈಗಾಗಲೇ ಕೆಲ ನಾಗರಿಕರು ಪ್ರತಿಕ್ರಿಯಿಸಿರುವಂತೆ, ಈಗ ವಿಧಿಸಲಾ ಗುತ್ತಿ ರುವ ದಂಡ ವಾಹನಗಳ ಮೌಲ್ಯಕ್ಕಿಂತಲೂ ಅಧಿಕವಾಗಿದೆ.
Related Articles
Advertisement
ಈ ಹೊಸ ಕಾಯ್ದೆ ಸಂಚಾರ ನಿಯಮ ಉಲ್ಲಂ ಸುವ ವರಿಗೆ ಭಾರೀ ದಂಡ ವಿಧಿಸುವುದಕ್ಕಷ್ಟೇ ತನ್ನನ್ನು ಸೀಮಿತ ಗೊಳಿಸಿಕೊಂಡಿಲ್ಲ. ಅದಕ್ಕೆ ಕೆಲವು ಸಲಕ್ಷಣಗಳೂ ಇವೆ; ಇವು ಸ್ವಾಗತಾರ್ಹವೇ. ವಾಸ್ತವವಾಗಿ ದಂಡ ಹೆಚ್ಚಳ ಹಾಗೂ ಇತರ ನಿಯಂತ್ರಣ ಕ್ರಮಗಳನ್ನು 2017ರಲ್ಲೇ ಪ್ರಸ್ತಾವಿಸಲಾಗಿತ್ತು. ಗಮನಿಸಬೇಕಾದ ಸಂಗತಿಯೆಂದರೆ, ಹೊಸ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯಡಿ ವಿಧಿಸಲಾಗಿರುವ ದಂಡ ಮೊತ್ತಗಳು ಭಾರತೀಯ ದಂಡ ಸಂಹಿತೆ (ಐಪಿಸಿ)ಯಲ್ಲಿ ಉಲ್ಲೇಖೀತವಾಗಿರುವ ವಿವಿಧ ಅಪರಾಧಗಳಿಗೆ ಸಂಬಂಧಿಸಿದ ದಂಡ ಮೊತ್ತಗಳಿಗಿಂತಲೂ ಅಧಿಕವಾಗಿವೆ. ನಮ್ಮಲ್ಲಿ ಸಾಕಷ್ಟು ಸಂಖ್ಯೆಯ/ಪ್ರಮಾಣದ ತೆರಿಗೆಗಳು ಇಲ್ಲದಿರುವುದರಿಂದ, ಕಂದಾಯ ಪ್ರಮಾಣ ವನ್ನು ಹೆಚ್ಚಿಸಿಕೊಳ್ಳುವ ಉಪಾಯವಾಗಿ ಕೇಂದ್ರ ರಸ್ತೆ ಅಪ ರಾಧ ಸಂಬಂಧಿ ದಂಡ ಹೇರಿಕೆಗೆ ಮುಂದಾಗಿರುವಂತೆ ತೋರಿಬರುತ್ತಿದೆ. ಐಪಿಸಿಯ ಸೆಕ್ಷನ್ 63ನ್ನೇ ನೋಡಿ – ದಂಡ ಮೊತ್ತ ವಿಪರೀತವಾಗಿರಬಾರದು ಎಂದು ಅದು ಹೇಳುತ್ತದೆ. ಇಂತಿಂಥ ಅಪರಾಧಗಳಿಗೆ ಇಂತಿಷ್ಟು ದಂಡ ಎಂಬ ನಿಯಮವಿದ್ದರೂ ಯಾರನ್ನೂ ಅಪರಾಧ ಕೃತ್ಯಗಳಿಗೆ ಮುಂದಾಗದಂತೆ ತಡೆಯಲು ಸಾಧ್ಯವಾಗಿಲ್ಲ. ದೇಶದಲ್ಲಿ ಚಾಲ್ತಿಯಲ್ಲಿರುವ ಕಾಯ್ದೆಗಳ ಸಂಖ್ಯೆ ವಿಪರೀತ ಎಂಬಷ್ಟಿದೆ; ಆದರೆ ಇವುಗಳ ಅನುಷ್ಠಾನ ಸಾಧ್ಯತೆ ಹೇಳಿಕೊ ಳ್ಳುವಷ್ಟೇನೂ ಇಲ್ಲ. ಸಾರ್ವಜನಿಕ ಸ್ಥಳಗಳಲ್ಲಿ; ವಿಶೇಷವಾಗಿ ಶಾಲೆ – ಕಾಲೇಜುಗಳ ಸಮೀಪ ಸಿಗರೇಟು ಬೀಡಿ ಸೇದುವವರ ಪೈಕಿ ಎಷ್ಟು ಜನರಿಗೆ ದಂಡ ಹಾಕಲಾಗುತ್ತಿದೆ? ಇಂದಿನ ತನಕವೂ ನಮ್ಮ ಸಂಚಾರಿ ಪೊಲೀಸರು ಸಂಗ್ರ ಹಿಸುವ ದಂಡ ಮೊತ್ತ, ಗೃಹ ಸಚಿವಾಲಯದ ಬಜೆಟ್ ಮೊತ್ತಕ್ಕಿಂತಲೂ ಎಷ್ಟೋ ಪಾಲು ಕಡಿಮೆಯೇ, ಹೆಚ್ಚಿಸ ಲಾಗಿರುವ ದಂಡವನ್ನು ತಪ್ಪಿಸಿಕೊಳ್ಳುವ ಸಲುವಾಗಿ ಎಷ್ಟೋ ವಾಹನ ಸವಾರರು ಸಂಚಾರ ಪೊಲೀಸರ ಕೈಬಿಸಿ ಮಾಡುವ ಅಪಾಯವೂ ಇದೆ. ಸಾರಿಗೆ ಪೊಲೀಸರು ರಸ್ತೆ ಅಪರಾ ಧಿಗಳಿಂದ ಪಡೆಯಬೇಕಾದ ದಂಡ ಮೊತ್ತವನ್ನು ಸಂಗ್ರಹಿ ಸುತ್ತಿಲ್ಲವೆಂಬುದು ಈ ಮಾತಿನ ಅರ್ಥವಲ್ಲ. ದಂಡ ಹೇರಿಕೆ ಕ್ರಮ, ತಪ್ಪು ಮಾಡಿದ ವಾಹನ ಸವಾರರನ್ನು ದಿವಾಳಿ ಯೆಬ್ಬಿಸುವಂತೆ ಮಾಡಕೂಡದು; ಅವರನ್ನು ಸಾಲದ ಶೂಲಕ್ಕೆ ತಗುಲಿಕೊಳ್ಳುವಂತೆ ಮಾಡಬಾರದು; ಅವರ ಬದುಕನ್ನು ಮೂರಾಬಟ್ಟೆ ಮಾಡುವಂತಿರಬಾರದು. ಯಾವುದೇ ಅಪರಾಧ ಕೃತ್ಯ ಹಣ ಸಂಗ್ರಹ ಮಾಡುವುದಕ್ಕೆ ನೆರವಾಗಬಲ್ಲ “ವಸ್ತು’ ಎಂದು ಯಾವ ಸರಕಾರವೂ ಯೋಚಿಸುವ ಹಾಗಾಗಬಾರದು. ಈಗಾಗಲೇ ವಾಹನ ತಪಾಸಣೆಯ ಹೆಸರಿನಲ್ಲಿ, ಕುಡಿದು ವಾಹನ ಚಲಾಯಿಸಿ ದರೆಂಬ ನೆಪದಲ್ಲಿ ಕಾನೂನು ಭೀತಿಯಿರುವ ಅನೇಕ ಸವಾರರಿಗೆ ಕಿರುಕುಳ ನೀಡುತ್ತಿರುವುದೂ ವರದಿಯಾಗಿವೆ.
ಆದರೂ ಈ ತಿದ್ದುಪಡಿ ಕಾಯ್ದೆಯ ಕೆಲವೊಂದು ನಿಯಮಗಳನ್ನು ಸ್ವಾಗತಿಸಲೇಬೇಕು. ಯಾಕೆಂದರೆ ಅವು ನಮ್ಮ ರಸ್ತೆಗಳ ಸುರಕ್ಷೆಯನ್ನು ಕಾಪಿಡುವ ಉದ್ದೇಶ ಹೊಂದಿವೆ. ಈ ಕಾಯ್ದೆಯ ಮುಖ್ಯ ಲಕ್ಷಣಗಳಲ್ಲೊಂ ದೆಂದರೆ, ರಸ್ತೆ ನಿರ್ಮಾಣ ಹಾಗೂ ಇತರ ಕಾಮಗಾರಿ ಗಳಂಥ ಮೂಲ ಸೌಲಭ್ಯಗಳಿಗೆ ಸಂಬಂಧಿಸಿದ ಕೆಲಸಗಳಲ್ಲಿ ಕಳಪೆ ನಿರ್ವಹಣೆ ಸಾಬೀತಾದರೆ, ಅಂಥಹ ಗುತ್ತಿಗೆದಾ ರನನ್ನು ಉತ್ತದರಾಯಿಯಾಗಿಸಬೇಕೆಂಬದು ಕಾಯ್ದೆಯ ಲ್ಲಿದೆ. ಇದೇ ರೀತಿ, ಮಕ್ಕಳು ವಾಹನ ಚಲಾಯಿಸಲು ಅವಕಾಶ ನೀಡುವ ಹೆತ್ತವರನ್ನು ಅಪರಾಧಿಗಳೆಂದು ಪರಿ ಗಣಿಸಲಾಗುವುದು. ವಾಹನ ಚಾಲನೆಯ ಪ್ರಮಾದದಿಂದ ಸಾವು ಸಂಭವಿಸಿದರೆ, ಮೃತ ವ್ಯಕ್ತಿಯ ಸಂಬಂಧಿಕರು ಮೋಟಾರು ವಾಹನ ಪರಿಹಾರ ಮಂಡಳಿಗೆ ದೂರು ನೀಡಲು ಹೋಗದಿದ್ದರೆ ಅವರಿಗೆ ವಾಹನ ಮಾಲಿಕರಿಗೆ ತತ್‌ಕ್ಷಣ ಪರಿಹಾರ ನೀಡಬೇಕು. (5 ಲಕ್ಷ ರೂ.) ಇದೇ ರೀತಿ, ಯಾರಾದರೂ ಗಂಭೀರವಾಗಿ ಗಾಯಗೊಂಡರೆ, ಆತನ ಬಂಧುಗಳು ಪರಿಹಾರ ಮಂಡಳಿಯತ್ತ ಮುಖ ಮಾಡದಿದ್ದರೆ ವಾಹನದ ಮಾಲೀಕರು ಆತನಿಗೆ 2.5 ಲಕ್ಷ ರೂ.ಗಳಷ್ಟು ಮೊತ್ತವನ್ನು ತುರ್ತಾಗಿ ಪಾವತಿ ಮಾಡಬೇಕು ಎನ್ನುತ್ತದೆ ಈ ಹೊಸ ಕಾಯ್ದೆ. ಹಿಟ್ ಆ್ಯಂಡ್ ರನ್‌ಪ್ರಕರಣ ಗಳಲ್ಲಿ ಮೃತ ವ್ಯಕ್ತಿಯ ಬಂಧುಗಳಿಗೆ ನೀಡುತ್ತಿದ್ದ ಪರಿಹಾರ ಮೊತ್ತವನ್ನು 2 ಲಕ್ಷ ರೂ.ಗಳಿಗೆ ಏರಿಸಲಾಗಿದೆ. ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಚಾಲಕರ ಪರೀಕ್ಷಣಾ ಪ್ರಕ್ರಿಯೆಗಳಲ್ಲಿ, ಆನ್‌ಲೈನ್ ಮೂಲಕ ಚಾಲನೆ ಕಲಿಕೆ ಪರವಾನಿಗೆಗಾಗಿ ಸಲ್ಲಿ ಸುವ ಅರ್ಜಿ ಪ್ರಕ್ರಿಯೆಯಲ್ಲಿ – ಹೀಗೆ ರಸ್ತೆ ಸಾರಿಗೆ ಸಂಬಂಧಿ ಕ್ರಮಗಳನ್ನು ಸಡಿಲಗೊಳಿಸಿ ಒಟ್ಟು ವ್ಯವಸ್ಥೆ ಯನ್ನು ಸರಳೀತಗೊಳಿಸಬೇಕೆಂಬುದು ಈ ಕಾಯ್ದೆ ಯ ಹಿಂದಿನ ಕಾಳಜಿಯಾಗಿದೆ. ಅವಘಡಗಳ ಪ್ರಮಾಣವನ್ನು ಶೇ. 50ರಷ್ಟು ತಗ್ಗಿಸಬೇಕೆಂದು ವಿಶ್ವಸಂಸ್ಥೆ ಭಾರತಕ್ಕೆ ಸಲಹೆ ಮಾಡಿದೆ. ದಂಡ ಹೆಚ್ಚಳ ಕ್ರಮವೆಂಬುದು ನಮ್ಮ ರಸ್ತೆಗಳ ಸುರಕ್ಷಿತೆಗಾಗಿ ರೂಪು ತಳೆದಿದೆ ಅಷ್ಟೇ.