Advertisement
“ಪ್ರಜ್ವಲ್ ಎಲ್ಲಿರಬಹುದು ಎನ್ನುವ ವಿಷಯ ನಿಮ್ಮ ಸಿ.ಡಿ. ಶಿವುಗೆ ಚೆನ್ನಾಗಿಯೇ ಗೊತ್ತಿದೆ. ಅವರನ್ನೇ ಕೇಳಿದರೆ ಉತ್ತಮವಲ್ಲವೇ? ಸಖ್ಯ ಮತ್ತು ಸೌಖ್ಯದ ಬಗ್ಗೆ ಅವರಿಗಿಂತ ಬಲ್ಲವರು ಉಂಟೇ’ ಎಂದು ಕೇಳುವ ಮೂಲಕ ಈ “ಟ್ವೀಟ್ ವಾರ್’ಗೆ ಗುರುವಾರ ಮಾಜಿ ಸಿಎಂ ಕುಮಾರಸ್ವಾಮಿ ಮುನ್ನುಡಿ ಬರೆದರು. ಇದು ಅಪ್‌ಲೋಡ್ ಆದ ಕೆಲವೇ ಹೊತ್ತಿನಲ್ಲಿ ಕಾಂಗ್ರೆಸ್, “ಗೆಜ್ಜೆ ಶಬ್ದ ಕಂಡರೆ ಕಳ್ಳ ಹೆಜ್ಜೆ ಇಡುವ ಮಾನಗೇಡಿಗಳು ತಾವು. ತಮ್ಮ ಕುಟುಂಬದ ಸದಸ್ಯನೊಬ್ಬ ಎಲ್ಲಿ ಅಡಗಿದ್ದಾನೆ ಎನ್ನುವ ಮಾಹಿತಿ ಇಲ್ಲದಿರುವಷ್ಟು ಅಮಾಯಕನೂ ಅಲ್ಲ, ಮುಗ್ಧನೂ ಅಲ್ಲ ಬ್ರದರ್ ಸ್ವಾಮಿ’ ಎಂದು ಕಾಲೆಳೆದಿದೆ.
Related Articles
Advertisement
ತಮ್ಮ ಕುಟುಂಬದ ಸದಸ್ಯನೊಬ್ಬ ಎಲ್ಲಿ ಅಡಗಿದ್ದಾನೆ ಎನ್ನುವ ಮಾಹಿತಿ ಇಲ್ಲದಿರುವಷ್ಟು ಅಮಾಯಕನೂ ಅಲ್ಲ, ಮುಗ್ಧನೂ ಅಲ್ಲ ಬ್ರದರ್ ಸ್ವಾಮಿ! ಗೆಜ್ಜೆ ಶಬ್ದ ಕಂಡರೆ ಕಳ್ಳ ಹೆಜ್ಜೆ ಇಡುವ ಮಾನಗೇಡಿಗಳು ತಾವು ಕೊಳಕು ತಿಂದು ಇತರರ ಬಾಯಿಗೆ ಒರೆಸಲು ಬರುತ್ತಿರುವುದು ಮೂರನ್ನೂ ಬಿಟ್ಟಿರುವ ನಿರ್ಲಜ್ಜತನದ ಪರಮಾವಧಿ. ಪೆನ್‌ಡ್ರೈವ್ ಬಿಡುತ್ತೇನೆ, ಬಿಡುತ್ತೇನೆ ಎಂದು ಒಂದು ವರ್ಷದಿಂದ ಬಾಯಿ ಬಡಿದುಕೊಳ್ಳುತ್ತಿದ್ದ ಬಿಜೆಪಿಯ ದೇವರಾಜೇಗೌಡನ ಜತೆ ರಹಸ್ಯ ಒಪ್ಪಂದ ಮಾಡಿಕೊಂಡು ಅಖಿಲ ಕರ್ನಾಟಕಕ್ಕೆ ಹಂಚಿಕೆ ಮಾಡಿದ್ದು ಇದೇ ಬ್ರದರ್ ಸ್ವಾಮಿಯಲ್ಲವೇ? ಪೂರ್ವಾಶ್ರಮದ ಸಿನೆಮಾ ಹಂಚಿಕೆಯ ವೃತ್ತಿ ಇದರಲ್ಲೂ ಸಹಾಯಕ್ಕೆ ಬಂದಿರಬಹುದು ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.