Advertisement

Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ

08:34 PM May 17, 2024 | Team Udayavani |

ಹಾಸನ: ಧರ್ಮದ ಪರ ಹೋರಾಟ ಮಾಡುವ ನಾಯಕ ನಾನು. ಇದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ ಎಂದು ಬಿಜೆಪಿ ಮುಖಂಡ ದೇವರಾಜೇಗೌಡ ಹೇಳಿದರು.

Advertisement

ಪೊಲೀಸ್‌ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಪೊಲೀಸರು ದೇವರಾಜೇಗೌಡ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ಕಾರಾಗೃಹ ಪ್ರವೇಶಿಸುವ ಸಂದರ್ಭದಲ್ಲಿ ಮಾತನಾಡಿ, ತನಿಖೆ ಪೂರ್ಣಗೊಂಡರೆ ಸತ್ಯಾಸತ್ಯತೆ ಹೊರಬರಲಿವೆ. ಪೊಲೀಸ್‌ ಕಸ್ಟಡಿ ಮುಗಿದಿದೆ.

ಜಾಮೀನಿಗೆ ಈಗ ಅರ್ಜಿ ಹಾಕುತ್ತಿದ್ದೇವೆ. ಮುಂದೆ ಎಲ್ಲಾ ಸತ್ಯ ಹೊರಗೆ ಬರುತ್ತದೆ. ನನ್ನ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿರುವುದರ ಹಿಂದೆ ಷಡ್ಯಂತ್ರ ಇದೆ ಎಂದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next