Advertisement

ಉದ್ಘಾಟನೆಗೆ ಪೀಲೆ ಗೈರು?

06:00 AM Jun 12, 2018 | |

ಮಾಸ್ಕೋ: ವಿಶ್ವ ವಿಖ್ಯಾತ ಫ‌ುಟ್‌ಬಾಲ್‌ ತಾರೆ ಪೀಲೆ ಮಾಸ್ಕೊದಲ್ಲಿ ನಡೆಯಲಿರುವ ಫ‌ುಟ್‌ಬಾಲ್‌ ವಿಶ್ವಕಪ್‌ ಉದ್ಘಾಟನಾ ಸಮಾರಂಭದಿಂದ ದೂರಕ್ಕೆ ಉಳಿಯುವ ಸಾಧ್ಯತೆ ಇದೆ. ಬಹಳ ಸಮಯ ದಿಂದ ಪೀಲೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಅವರ ಕಾಲಿನ ನೋವು ಈಗ ಉಲ್ಬಣಿಸಿದೆ. ಇದೇ ಕಾರಣದಿಂದ ಸಮಾರಂಭಕ್ಕೆ ಗೈರಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.  77 ವರ್ಷದ ಪೀಲೆ ಅವರನ್ನು ಹಲವು ರೋಗಗಳು ಕಾಡುತ್ತಿವೆ. ಹೀಗಾಗಿ ಅವರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next