ಸಾಮಾನ್ಯವಾಗಿ ರೇಷ್ಮೆ ಬಟ್ಟೆಯನ್ನು ಮಡಿ ಪಟ್ಟೆ ಎಂದು ಪರಿಗಣಿಸುತ್ತಾರೆ. ಪೇಜಾವರ ಶ್ರೀಗಳೂ ಸಂಪ್ರದಾಯ
ದಂತೆ ರೇಷ್ಮೆ ಬಟ್ಟೆ ಧರಿಸುತ್ತಿದ್ದರು. ಕ್ರಮೇಣ ಇದನ್ನು ಹೇಗೆ ತಯಾರಿಸು
ತ್ತಾರೆಂಬುದನ್ನು ಅರಿತುಕೊಂಡರು. ರೇಷ್ಮೆ ವಸ್ತ್ರ ತಯಾರಿಸುವಾಗ ರೇಷ್ಮೆ
ಹುಳಗಳು ಸಾಯುತ್ತವೆ. ಇದನ್ನು ಹಿಂಸೆ ಎಂದು ಪರಿಗಣಿಸಿದ ಶ್ರೀಗಳು ಐದನೇ ಪರ್ಯಾಯದಿಂದ ನಾರು
ಮಡಿ ಬಟ್ಟೆಯನ್ನು ಧರಿಸುತ್ತಿದ್ದರು. ಇದನ್ನು ಬೆಂಗಳೂರಿನಿಂದ ಖರೀದಿಸಿ ಅದಕ್ಕೆ ಖಾವಿ ಬಣ್ಣ ಕೊಡಿಸಿ ಧರಿಸುತ್ತಿ
ದ್ದರು.
ಸನ್ಯಾಸಿಗಳು ಹುಲಿ ಚರ್ಮ/ ಕೃಷ್ಣಾಜಿನ ಚರ್ಮದ ಮೇಲೆ ಕುಳಿತುಕೊಳ್ಳುತ್ತಾರೆ. ಈ ಚರ್ಮದ ಮೇಲೆ ಕುಳಿತರೆ ಹಿಂಸಾಸಂಪರ್ಕ ವಾದಂತಾಗುತ್ತದೆ ಎಂದು ತಿಳಿದು ಈ ಪದ್ಧತಿ ತ್ಯಜಿಸಿ ಹತ್ತಿ ಬಟ್ಟೆಯ ಆಸನದ ಮೇಲೆ ಕುಳಿತುಕೊಳ್ಳುತ್ತಿದ್ದರು.
Advertisement