Advertisement
ಬಿಜೆಪಿಯ ಆಪರೇಶನ್ ಕಮಲದ ಕುರಿತು ಪ್ರಶ್ನಿಸಿದಾಗ, ಆಪರೇಶನ್ ಕಮಲ ಸರಿಯಲ್ಲ. ಬಹುಮತವಿಲ್ಲದೆ ಡೋಲಾಯಮಾನ ಸ್ಥಿತಿ ಇದ್ದಾಗ ಅಥವಾ ಗೊಂದಲ ಏರ್ಪಟ್ಟಾಗ ರಾಷ್ಟ್ರಪತಿಗಳ ಆಡಳಿತ ಹೇರಿಕೆ ಅಥವಾ ವಿಧಾನಸಭೆಯನ್ನು ವಿಸರ್ಜಿಸಿ ಹೊಸ ಚುನಾವಣೆ ನಡೆಸಬೇಕಾಗುತ್ತದೆ. ಇದು ವೆಚ್ಚ ದಾಯಕ. ರಾಜ್ಯದ ಹಿತದೃಷ್ಟಿಯಿಂದ ಸರ್ವ ಪಕ್ಷಗಳ ಸರಕಾರ ಸಮಯೋಚಿತ ಎಂದರು.
ಲಿಂಗಾಯತ ಧರ್ಮ ಹಿಂದೂ ಧರ್ಮದ ಅಂಗವಾಗಿದ್ದರೆ ನೀವು ಲಿಂಗಾಯತ ಸಂಪ್ರ ದಾಯವನ್ನು ಆಚರಿಸುತ್ತೀರಾ ಎಂದು ಕೆಲವರು ಪ್ರಶ್ನಿಸಿದ್ದಾರೆ. ಅದ್ವೆ„ತ, ದ್ವೆ„ತ ಸಂಪ್ರ ದಾಯಗಳು ಹಿಂದೂ ಧರ್ಮದ ಅಂಗವಾ ಗಿದ್ದರೂ ಒಬ್ಬರು ಇನ್ನೊಂದನ್ನು ಆಚರಿಸ ಬೇಕೆಂದಿಲ್ಲ. ತಮ್ಮ ಸಂಪ್ರದಾಯಗಳನ್ನು ಆಚರಿಸಿಕೊಂಡು ಸ್ನೇಹ ಸೌಹಾರ್ದದಿಂದ ಸಮಾನ ಅಂಶಗಳಲ್ಲಿ ಸಹಕರಿಸಿಕೊಂಡು ಹೋಗಬೇಕು. ಇಷ್ಟಲಿಂಗ ಪೂಜೆ, ಶಿವಾರಾಧನೆಯನ್ನು ಒಪ್ಪಿದ ಮೇಲೆ ಲಿಂಗಾಯತ ಧರ್ಮವು ಹಿಂದೂ ಧರ್ಮದಿಂದ ಬೇರೆಯಾಗುವುದು ಹೇಗೆ? ಶಿವನ ಸ್ವರೂಪದ ಬಗ್ಗೆ ಶೈವರಲ್ಲಿ ಭಿನ್ನಾಭಿ ಪ್ರಾಯವಿರಬಹುದು. ಪರಬ್ರಹ್ಮನನ್ನು ದ್ವೆ„ತಿ ಗಳು, ವಿಶಿಷ್ಟಾದ್ವೆ„ತಿಗಳು ಸಗುಣ, ಸಾಕಾರ ಎಂದೂ, ಅದ್ವೆ„ತಿಗಳು ನಿರ್ಗುಣ, ನಿರಾಕಾರ ಎಂದೂ ಹೇಳುತ್ತಾರೆ. ಆದರೂ ತ್ರಿಮತಸ್ಥರು ಹಿಂದೂಗಳಲ್ಲವೆ? ಶಿವನ ಸ್ವರೂಪದಲ್ಲಿ ಭಿನ್ನ ಅಭಿಪ್ರಾಯಗಳಿದ್ದರೂ ಎಲ್ಲ ಶೈವರು ಹಿಂದೂಗಳೇ ಆಗಿದ್ದಾರೆ ಎಂದರು.
ವಿವಾದವನ್ನು ರಾಜಕಾರಣಿಗಳು ಹುಟ್ಟು ಹಾಕಿದ್ದಲ್ಲವೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಅನೇಕ ಮಠಾಧಿಪತಿಗಳು ಪರ ವಿರೋಧ ನಿರ್ಣಯವನ್ನು ತಾಳಿದ್ದಾರಲ್ಲ ಎಂದರು.
Related Articles
ಶೀರೂರು ಮಠದ ಉತ್ತರಾಧಿಕಾರಿ ನೇಮಕದ ಕುರಿತು ಪ್ರಶ್ನಿಸಿದಾಗ ಮಠಕ್ಕೆ ದೊಡ್ಡ ಮೊತ್ತದ ಸಾಲವಿದೆ. ಇದನ್ನು ಸರಿಪಡಿಸಿ ಉತ್ತರಾಧಿಕಾರಿ ನೇಮಕ ನಡೆಸಬೇಕಾಗುತ್ತದೆ. ಇದನ್ನು ಸರಿಪಡಿಸದೆ ವಟುಗಳೂ ದೊರಕುವುದಿಲ್ಲ ಎಂದರು. ವೃಂದಾವನವನ್ನು ನಿರ್ಮಿಸಿಲ್ಲವಂತೆ ಎಂದಾಗ ಆರಾಧನೆ ಸಮಯದ ಬಳಿಕ ನಿರ್ಮಿಸುತ್ತಾರೆ ಎಂದು ತಿಳಿಸಿದರು.
Advertisement
ವೀರಶೈವ-ಲಿಂಗಾಯತ: ಸಂವಾದಕ್ಕೆ ಸಿದ್ಧವೀರಶೈವ ಲಿಂಗಾಯತ ಧರ್ಮವು ಹಿಂದೂ ಧರ್ಮದಿಂದ ಪ್ರತ್ಯೇಕವಲ್ಲವೆಂದು ನಾನು ಹೇಳಿರುವುದಕ್ಕೆ ವಿವಿಧ ಪ್ರತಿಕ್ರಿಯೆಗಳು ಬಂದವು. ಹಿಂದೂ ಧರ್ಮ ದುರ್ಬಲವಾಗ ಬಾರದು. ವೀರಶೈವರು, ಲಿಂಗಾಯತರು ಒಟ್ಟಾಗಿದ್ದರೆ ಲಿಂಗಾಯತ ಧರ್ಮವೂ ಬಲಿಷ್ಠವಾಗಿರುತ್ತದೆ. ನಾವೆಲ್ಲ ಒಟ್ಟಾಗಿರಬೇಕು ಎಂಬ ಉದ್ದೇಶದಿಂದ ಹೇಳಿಕೆ ನೀಡಿದ್ದೇನೆ. ಇದಕ್ಕಾಗಿ ಸಂವಾದಕ್ಕೂ ಸಿದ್ಧ ಎಂದು ಶ್ರೀಗಳು ತಿಳಿಸಿದರು. ಆದರೆ ಸಂವಾದವು ಶಾಂತ ವಾತಾವರಣದಲ್ಲಿ ಸೌಹಾರ್ದ ದಿಂದ ನಡೆಯಬೇಕು. ಬೆಂಗಳೂರಿನಲ್ಲಿ ಜು. 28ರೊಳಗೆ ಇಬ್ಬರಿಗೂ ಅನುಕೂಲವಾದ ದಿನ ಅಥವಾ ಅನಂತರ ಮೈಸೂರಿನಲ್ಲಿ ಚಾತುರ್ಮಾಸ್ಯವ್ರತ ಕೈಗೊಳ್ಳುವುದರಿಂದ ಮೈಸೂರಿನಲ್ಲಿ ಸಂವಾದದ ಏರ್ಪಾಡು ಮಾಡಬಹುದು ಎಂದರು.