Advertisement

ಪದ್ಮಶ್ರೀಗೆ ಆಯ್ಕೆಯಾದ ಮಹಾಲಿಂಗ ನಾಯ್ಕರ ತೋಟಕ್ಕೆ ಪೇಜಾವರ ಶ್ರೀ ದಿಢೀರ್ ಭೇಟಿ

07:21 PM Jan 29, 2022 | Team Udayavani |

ಬಂಟ್ವಾಳ : ಭಾರತ ಸರ್ಕಾರದಿಂದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಗೆ ಆಯ್ಕೆ ಯಾಗಿರುವ ಸಾಹಸಿ ರೈತ ಅಮೈ ಮಹಾಲಿಂಗ ನಾಯ್ಕರ ತೋಟಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಭೇಟಿ ನೀಡಿದರು.

Advertisement

ಶ್ರೀಗಳವರ ದಿಢೀರ್ ಭೇಟಿಯಿಂದ ಅಚ್ಚರಿಗೊಂಡ ನಾಯ್ಕರು ಅತೀವ ಸಂತಸಪಟ್ಟು ಭಕ್ತಿ ಗೌರವದಿಂದ ಬರಮಾಡಿಕೊಂಡರು .

ತೋಟಕ್ಕೆ ತೆರಳಿದ ಶ್ರೀಗಳು ಭಗೀರಥ ಯತ್ನದಿಂದ ಕೊರೆದ ಸುರಂಗದ ಒಳಹೊಕ್ಕು ವಿಸ್ಮಯಗೊಂಡರು. ಸುರಂಗ ಕೊರೆದು ಗಂಗೆಯನ್ನು ಪಡೆದ ಯಶೋಗಾಥೆಯನ್ನು ನಾಯ್ಕರಿಂದಲೇ ಕೇಳಿ , ತುಂಬಿರುವ ಸಮೃದ್ದ ಜಲಸೆಲೆಯನ್ನು ಕಂಡು ಖುಷಿ ಪಟ್ಟರು.

ತೋಟದಲ್ಲಿ ಸಮೃದ್ಧವಾಗಿ ಬೆಳೆದು ನಿಂತು ನಾಯ್ಕರ ಸಾರ್ಥಕ ಶ್ರಮದ ಫಲಕ್ಕೆ ಸಾಕ್ಷಿ ಹೇಳುತ್ತಿರುವ ತೆಂಗು ಕಂಗು , ಬಾಳೆ ಮಾವು ಹಲಸು ಮೊದಲಾದವುಗಳನ್ನು ವೀಕ್ಷಿಸಿ ಮನೆಗೆ ತೆರಳಿದರು. ಶ್ರೀಗಳಿಗೆ ನಾಯ್ಕರುಕುಟುಂಬ ಸದಸ್ಯರೊಂದಿಗೆ ಗೌರವಾರ್ಪಣೆಗೈದರು.

Advertisement

ನಾಯ್ಕರ ಕೃಷಿಯ ಅವಿರತ ಸಾಧನೆಯನ್ನು ಮನಸಾರೆ ಬಣ್ಣಿಸಿದ ಶ್ರೀಗಳು ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆಯಾಗಿರುವುದು ಅತ್ಯಂತ ಅಭಿನಂದನೀಯ ಎಂದು ಹರಸಿದರು.

ನಾಯ್ಕರಿಗೆ ಶಾಲು , ಶ್ರೀಕೃಷ್ಣನ ವಿಗ್ರಹವಿರುವ ಕಾಷ್ಠ ಮಂಟಪದ ಸ್ಮರಣಿಕೆ ಫಲ ಮಂತ್ರಾಕ್ಷತೆ ಮತ್ತು ನಗದು ನೀಡಿ ಆಶೀರ್ವದಿಸಿದರು. ಈ ವೇಳೆ ಸ್ಥಳೀಯ ರಾದ ಜನಾರ್ದನ ಭಟ್ , ಪಂಚಾಯತ್ ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next