Advertisement

ಪೆಗಾಸಸ್‌ ಗೂಢಚಾರಿಕೆ ಮಾಡಿಲ್ಲ!

10:57 AM Aug 26, 2022 | Team Udayavani |

ಹೊಸದಿಲ್ಲಿ: ದೇಶದ ಗಣ್ಯಾತಿಗಣ್ಯರ ಮೇಲೆ ಪೆಗಾಸಿಸ್‌ ಬಳಸಿ ಗೂಢಚಾರಿಕೆ ನಡೆಸ ಲಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. 29 ಫೋನ್‌ಗಳನ್ನು ಪರೀಕ್ಷಿಸಲಾಗಿದ್ದು, ಇವು ಗಳಲ್ಲಿ 5 ಫೋನ್‌ಗಳಲ್ಲಿ ಮಾತ್ರ ಮಾಲ್‌ವೇರ್‌ ಪತ್ತೆ ಯಾಗಿದೆ ಎಂದು ಸುಪ್ರೀಂ ಕೋರ್ಟ್‌ ನೇಮಿಸಿದ್ದ ತಾಂತ್ರಿಕ ಸಮಿತಿ ವರದಿ ನೀಡಿದೆ.

Advertisement

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾ.ಎನ್‌.ವಿ. ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌, ಹಿಮಾ ಕೊಹ್ಲಿ ಅವರಿದ್ದ ಪೀಠಕ್ಕೆ ವರದಿ ಸಲ್ಲಿಸಲಾಗಿದೆ.

ಕೇಂದ್ರದ ಇಬ್ಬರು ಸಚಿವರು, ಪತ್ರಕರ್ತರು, ವಿಪಕ್ಷಗಳ ನಾಯಕರು, ನ್ಯಾಯಮೂರ್ತಿಗಳು, ಉದ್ಯಮಿಗಳು ಸೇರಿ 300 ಮಂದಿ  ಮೇಲೆ ಇಸ್ರೇಲ್‌ ಮೂಲದ ಪೆಗಾಸಿಸ್‌ ಎಂಬ ಸ್ಪೈವೇರ್‌ ಅನ್ನು ಬಿಟ್ಟು ಗೂಢಚಾರಿಕೆ ಮಾಡಿಸಲಾಗಿತ್ತು ಎಂಬ ಆರೋಪ ಸಂಬಂಧ ಯಾವುದೇ ಸಾಕ್ಷ್ಯ ಗಳು ಸಿಕ್ಕಿಲ್ಲ ಎಂದು ಸಮಿತಿ ವರದಿಯಲ್ಲಿ ತಿಳಿಸಿದೆ.

ಕೇಂದ್ರದ ಅಸಹಕಾರ:

ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ನಡೆಸಿದ ನಿವೃತ್ತ ನ್ಯಾ| ಆರ್‌.ವಿ. ರವೀಂದ್ರನ್‌ ನೇತೃತ್ವದ ಸಮಿತಿ ಕೇಂದ‌ದ ವಿರುದ್ಧವೂ ಅತೃಪ್ತಿ ವ್ಯಕ್ತ ಪಡಿ ಸಿದೆ. ಒಟ್ಟಾರೆ 3 ಭಾಗಗಳಾಗಿ ಈ ವರದಿ ಸಲ್ಲಿ ಸಿದ್ದು, ಒಂದರಲ್ಲಿ ವ್ಯಕ್ತಿಗಳ ಖಾಸಗಿತನಕ್ಕೆ ಭದ್ರತೆ ನೀಡು  ವಂಥ ಕಾನೂನು ತರಬೇಕು ಎಂದು ಹೇಳಿದೆ. ಅಲ್ಲದೆ, ದೇಶಕ್ಕೆ ಸೈಬರ್‌ ಭದ್ರತೆ ನೀಡ ಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದೆ.

Advertisement

ನಾಲ್ಕು ವಾರಗಳ ಬಳಿಕ ವಿಚಾರಣೆ:

ನಾಲ್ಕು ವಾರಗಳ ಬಳಿಕ ವಿಚಾರಣೆ ನಡೆ ಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ. ಜತೆಗೆ ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಪ್ರತೀ ವಿಷಯ ದಲ್ಲೂ ಸರಕಾರಗಳಿಗೆ ವಿನಾಯಿತಿ ಸಿಗದು. ಈ ವಿಚಾರದಲ್ಲಿ ನ್ಯಾಯಾಲಯವೂ ಮೂಕನಂತೆ ಕುಳಿತುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಕಾಂಗ್ರೆಸ್‌ಗೆ ಬಿಜೆಪಿ ತಿರುಗೇಟು :

ಪೆಗಾಸಸ್‌ ಬಳಸಿ ಗೂಢಚಾರಿಕೆ ನಡೆಸಲಾಗಿಲ್ಲ  ಎಂದು ಸುಪ್ರೀಂ ಸಮಿತಿ ವರದಿ ನೀಡಿದ ಬೆನ್ನಲ್ಲೇ ಬಿಜೆಪಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ತಿರುಗಿಬಿದ್ದಿದೆ. ಈಗಲಾದರೂ ರಾಹುಲ್‌ ಗಾಂಧಿ ಕ್ಷಮೆ ಕೇಳುತ್ತಾರೆಯೇ ಎಂದು ಮಾಜಿ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಪ್ರಶ್ನಿಸಿದ್ದಾರೆ. ಪೆಗಾಸಸ್‌ ಮೂಲಕ ಕೇಂದ್ರ ಸರಕಾರ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದೆ ಎಂದು ರಾಹುಲ್‌ ಈ ಹಿಂದೆ ಆರೋಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next