Advertisement
ಏನಿದು ಪೆಗಾಸಸ್ ?
Related Articles
Advertisement
ಪೆಗಾಸಸ್ ನಿಮ್ಮ ಮೊಬೈಲ್ ನ್ನು ಹೇಗೆ ಹಾನಿಗೊಳಿಸುತ್ತದೆ?
ಈ ಸ್ಪೈವೇರ್ ಪ್ರಮುಖವಾಗಿ ಆಂಡ್ರಾಯ್ಡ್ ಮತ್ತು ಐಫೋನ್ ನಲ್ಲಿ ಡೌನ್ ಲೋಡ್ ಆಗುವ ಅಪ್ಲೀಕೇಶನಗಳನ್ನು ಹಾನಿಗೊಳಿಸುತ್ತದೆ. ಫೋಟೋ , ಮ್ಯೂಸಿಕ್, ಮೆಸ್ಸೇಜ್ ಮುಂತಾದ ಅಪ್ಲೀಕೇಶನ್ ಗಳಿಗೆ ಹಾನಿಮಾಡುವ ಮೂಲಕ ನಿಮ್ಮ ಫೋನ್ ನಿಮ್ಮ ಮೊಬೈಲ್ ನ ಕಾರ್ಯಕ್ಷಮತೆ ಕುಂಟಿತವಾಗುವಂತೆ ಮಾಡುತ್ತದೆ. ಮೊಬೈಲ್ ಹ್ಯಾಂಗ್ ಆಗುವುದು ಇದ್ದಕ್ಕಿದ್ದಂತೆ ಆಫ್ ಆಗುವ ಎಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಮೊಬೈಲ್ ಬ್ಯಾಟರಿಗಳ ಜೀವಿತಾವಧಿ ಕಡಿಮೆಯಾಗುವಂತೆ ಮಾಡುವುದು ಕೂಡ ಪೆಗಾಸಿಸ್ ಸ್ಪೈವೇರ್ ನ ಒಂದು ಲಕ್ಷಣ.
ಪೆಗಾಸಸ್ ಅಭಿವೃದ್ಧಿ ಪಡಿಸಿದವರು ಯಾರು?
ಇಸ್ರೇಲ್ ನ ಎನ್‌ಎಸ್‌ಒ ಗುಂಪು ಈ ಸ್ಪೈವೇರ್ ನನ್ನು ಅಭಿವೃದ್ಧಿ ಪಡಿಸಿದ್ದು ಈ ಕಂಪನಿಯನ್ನು ಕ್ಯೂ ಸೈಬರ್ ತಂತ್ರಜ್ಞಾನ ಎಂದು ಕೂಡ ಕರೆಯಾಲಾಗುತ್ತದೆ. ಭಯೋತ್ಪಾದನಾ ಸಂಘಟಣೆಗಳ ಚಟುವಟಿಕೆಗಳನ್ನು ಮತ್ತು ಅಪರಾಧಿಗಳನ್ನು ಪತ್ತೆ ಹಚ್ಚುವ ಸಲುವಾಗಿ ಈ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಸಂಸ್ಥೆ ಸಮರ್ಥನೆ ನೀಡಿದೆ. ಆದರೆ ಇದೀಗ ಸರ್ವಾಧಿಕಾರ ಆಡಳಿತ ದೇಶಗಳು ಈ ಸ್ಪೈವೇರ್ ನನ್ನು ಹೆಚ್ಚು ಉಪಯೋಗಿಸುತ್ತಿದ್ದು, ತಮ್ಮ ಎದುರಾಳಿ ಮತ್ತು ಪತ್ರಕರ್ತರ ಮೇಲೆ ನಿಗಾ ಇಡುವ ಸಲುವಾಗಿ ಈ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.
ಆದರೆ ಇತ್ತೀಚೆಗೆ ಮಾನವ ಹಕ್ಕುಗಳ ಗುಂಪು ಅಮ್ನೆಸ್ಟಿ ಇಂಟರ್ ನ್ಯಾಷನಲ್ ಬೇರೆ ಬೇರೆ ದೇಶಗಳ ರಾಜಕೀಯ ವಿರೋಧಿಗಳು, ಮಾನವ ಹಕ್ಕು ಹೋರಾಟಗರರು ಮತ್ತು ಪತ್ರಕರ್ತರ ಮೇಲೆ ಹಿಡಿತ ಸಾಧಿಸುವ ಸಲುವಾಗಿ ಪೆಗಾಸಸ್ ಸ್ಪೈವೇರ್ ನನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ವರದಿ ಮಾಡಿದೆ.
ಆದರೆ ಪಿಗಾಸಿಸ್ ಮತ್ತು ಅದೇ ರೀತಿಯಾದ ಅನೇಕ ತಂತ್ರಜ್ಞಾನದಿಂದ ಪ್ರಪಂಚದಾದ್ಯಂತ ನಡೆಯುವ ಭಯೋತ್ಪಾದನೆ ಮತ್ತು ಅಪರಾಧಗಳನ್ನು ತಡೆಯಲು ಮತ್ತು ತನಿಕೆ ಮಾಡಲು ವಿಶ್ವದಾದ್ಯಂತ ಗುಪ್ತಚರ ಸಂಸ್ಥೆ ಮತ್ತು ಕಾನೂನು ಜಾರಿ ಮಾಡುವ ಸಂಸ್ಥೆಗಳಿಗೆ ಸಹಾಯ ಮಾಡುತ್ತದೆ ಎಂದು ಎನ್ ಎಸ್ ಓ ವಕ್ತಾರ ಸಮಜಾಯಿಶಿ ನೀಡಿದ್ದಾರೆ.
ಪೆಗಾಸಸ್ ಸ್ಪೈವೇರ್ ನನ್ನು ಪತ್ತೆಹಚ್ಚಲು ಸಾಧ್ಯವೇ?
ಮೊಬೈಲ್ ವೇರಿಫಿಕೇಶನ್ ಟೂಲ್ ಕಿಟ್ (ಎಮ್‌ವಿಟಿ) ಮೂಲಕ ಪಿಗಾಸಿಸ್ ಸ್ಪೈವೇರ್ ನನ್ನು ಪತ್ತೆ ಹಚ್ಚಲು ಸಾಧ್ಯ. ಎಮ್ ವಿ ಟಿ ನಿಮಗೆ ತಿಳಿಯದೆ ನಿಮ್ಮ ಮೊಬೈಲ್ ನಲ್ಲಿ ಪೆಗಾಸಸ್ ಇನ್ ಸ್ಟಾಲ್ ಆಗಿದೆಯಾ ಎಂದು ಪತ್ತೆಹಚ್ಚುತ್ತದೆ. ಈ ಟೂಲ್ ಕಿಟ್ ನನ್ನು ಕೇವಲ ಕಂಪ್ಯೂಟರ್ ಸಾಧನಗಳಲ್ಲಿ ಮಾತ್ರವಲ್ಲದೇ ಐಓಎಸ್ ಮತ್ತು ಆಂಡ್ರಾಯ್ಡ್ ನಲ್ಲೂ ಉಪಯೋಗಿಸಲು ಸಾಧ್ಯವಾಗುವುದರಿಂದ ಪಿಗಾಸಿಸ್ ಸ್ಪೈವೇರ್ ನನ್ನು ಪತ್ತೆ ಹಚ್ಚಲು ಅನುಕೂಲವಾಗಿದೆ.
ದಿನನಿತ್ಯ ನಾವು ಉಪಯೋಗಿಸುವಂತಹ ಅದೆಷ್ಟೋ ತಂತ್ರಜ್ಞಾನಗಳು ನಮ್ಮ ಮಾಹಿತಿಗಳನ್ನು ನಮಗೆ ತಿಳಿಯದಂತೆ ಪಡೆದುಕೊಳ್ಳುತ್ತದೆ. ಆದರೆ ಪೆಗಾಸಸ್ ನ ಅನುಕೂಲ ಮತ್ತು ಅನಾನುಕೂಲದ ಕುರಿತ ಹಲವಾರು ಸಂಗತಿಗಳು ಇನ್ನೂ ಅಗೋಚರವಾಗಿದೆ. ಈ ಸ್ಪೈವೇರ್ ನ ಜತೆಗೆ ನಮ್ಮ ದೇಶದ ಹೆಸರು ಕೇಳಿಬರುತ್ತಿರುವುದು ಇನ್ನು ಯಾವ ಬದಲಾವಣೆಗೆ ಕಾರಣವಾಗುತ್ತದೆ ಎನ್ನುವುದನ್ನು ಉಹಿಸಲು ಅಸಾಧ್ಯ.