Advertisement

ಅಂಡಮಾನ್‌ ಇಂಟರ್ನೆಟ್‌ಗೆ ಸಿಕ್ತು ವೇಗ; ಆಪ್ಟಿಕಲ್‌ ಫೈಬರ್‌ ಕೇಬಲ್‌ ಯೋಜನೆ ಉದ್ಘಾಟಿಸಿದ PM

11:26 PM Aug 10, 2020 | mahesh |

ನವದೆಹಲಿ: ವಿಶ್ವದ ಯಾವುದೇ ಪ್ರವಾಸಿ ತಾಣಗಳಲ್ಲಿ ಇಂದು ಉತ್ತಮ ದರ್ಜೆಯ ಇಂಟರ್ನೆಟ್‌ ಸೇವೆ ಇನ್ನು ನಮ್ಮ ಅಂಡಮಾನ್‌-ನಿಕೋಬಾರ್‌ ದ್ವೀಪಗಳಲ್ಲೂ ಸಿಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಚೆನ್ನೈ ಹಾಗೂ ಅಂಡಮಾನ್‌ ನಡುವೆ ಸಮುದ್ರದ ಆಳದಲ್ಲಿ ಅಳವಡಿಸಲಾಗಿರುವ ಆಪ್ಟಿಕಲ್‌ ಫೈಬರ್‌ ಕೇಬಲ್‌ ಯೋಜನೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಪ್ರವಾಸೋದ್ಯಮ ತಾಣಗಳಲ್ಲಿನ ಅವಶ್ಯಕ ಸೌಲಭ್ಯಗಳಲ್ಲಿ ಇಂಟರ್ನೆಟ್‌ ಕೂಡ ಒಂದು ಎಂದು ತಿಳಿಸಿದರು.

Advertisement

ಹೊಸ ಯೋಜನೆಯಿಂದಾಗಿ, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳಿಗೆ ವೇಗದ ಇಂಟರ್ನೆಂಟ್‌ ಸೌಲಭ್ಯ ಸಿಗಲಿದೆ. ಈ ಸೌಲಭ್ಯಕ್ಕಾಗಿ ಅಲ್ಲಿನ ಜನರು ಮೂರು ದಶಕಗಳ ಬೇಡಿಕೆ ಈಡೇರಿದಂತಾಗಿದೆ. 2018ರ ಡಿ. 30ರಂದು ಪ್ರಧಾನಿ ಮೋದಿಯವರು ಈ ಯೋಜನೆಯ ಶಂಕುಸ್ಥಾಪನೆ ನೆರವೇರಿಸಿದ್ದನ್ನು ಸ್ಮರಿಸಬಹುದು.

ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಮೋದಿ, “”ಚೆನ್ನೈನಿಂದ ಅಂಡಮಾನ್‌ ನಿಕೋಬಾರ್‌ನ ರಾಜಧಾನಿ ಪೋರ್ಟ್‌ಬ್ಲೇರ್‌ವರೆಗೆ, ಪೋರ್ಟ್‌ ಬ್ಲೇರ್‌ನಿಂದ ಲಿಟಲ್‌ ಅಂಡಮಾನ್‌, ಪೋರ್ಟ್‌ ಬ್ಲೇರ್‌ನಿಂದ ಸ್ವರಾಜ್‌ ದ್ವೀಪ್‌ವರೆಗಿನ ಪ್ರಾಂತ್ಯಗಳಿಗೆ ವೇಗದ ಇಂಟರ್ನೆಂಟ್‌ ಸೌಲಭ್ಯ ಸಿಗಲಿದೆ. ಆನ್‌ಲೈನ್‌ ಶಿಕ್ಷಣ, ಪ್ರವಾಸೋದ್ಯಮ, ಬ್ಯಾಂಕಿಂಗ್‌, ಶಾಪಿಂಗ್‌, ಟೆಲಿಮೆಡಿಸಿನ್‌ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಅಂಡಮಾನ್‌ ಮತ್ತು ನಿಕೋಬಾರ್‌ ನಿವಾಸಿಗಳು ಪಡೆಯಬಹುದಾಗಿದೆ” ಎಂದರು.

ಯೋಜನೆಯ ಪ್ರಮುಖಾಂಶ
ಅಂಡಮಾನ್‌ ನಿಕೋಬಾರ್‌ನ ಏಳು ದ್ವೀಪಗಳು, ಪೋರ್ಟ್‌ಬ್ಲೇರ್‌ನಿಂದ ಸ್ವರಾಜ್‌ ದ್ವೀಪ್‌ (ಹ್ಯಾವ್‌ಲಾಕ್‌), ಲಾಂಗ್‌ ಐಲ್ಯಾಂಡ್‌, ರಂಗಟ್‌, ಲಿಟಲ್‌ ಅಂಡಮಾನ್‌, ಕರ್ಮೋಟಾ, ಕಾರ್‌ ನಿಕೋಬಾರ್‌, ಗ್ರೇಟರ್‌ ನಿಕೋಬಾರ್‌ ಪ್ರಾಂತ್ಯಗಳಿಗೆ ಇಂಟರ್ನೆಟ್‌ ಸೇವೆ.
ಆಪ್ಟಿಕಲ್‌ ಫೈಬರ್‌ ಕೇಬಲ್‌ನಿಂದಾಗಿ 4ಜಿ ನೆಟ್‌ವರ್ಕ್‌ ಲಭ್ಯ.
ಬಿಎಸ್‌ಎನ್‌ಎಲ್‌ನಿಂದ ದಾಖಲೆಯ ಅವಧಿಯಲ್ಲಿ ಯೋಜನೆ ಪೂರ್ಣ. ಕೇವಲ 24 ತಿಂಗಳುಗಳಲ್ಲಿ ಕೇಬಲ್‌ ಅಳವಡಿಕೆ.
ಟೆಲಿ ಮೆಡಿಸಿನ್‌, ಇ-ಗವರ್ನೆನ್ಸ್‌, ಪ್ರವಾಸೋದ್ಯಮ, ಆನ್‌ಲೈನ್‌ ಶಿಕ್ಷಣದಂಥ ಅನೇಕ ಸೇವೆಗಳಿನ್ನು ತ್ವರಿತ.

2,313 ಕಿ.ಮೀ. ಚೆನೈ ಹಾಗೂ ಪೋರ್ಟ್‌ಬ್ಲೇರ್‌ ನಡುವೆ ಹಾಕಲಾಗಿರುವ ಕೇಬಲ್‌ ದೂರ.
1,224 ರೂ. ಪ್ರತಿ ಕಿ.ಮೀ. ಕೇಬಲ್‌ ಅಳವಡಿಕೆಗೆ ತಗಲಿರುವ ವೆಚ್ಚ.
400 ಜಿಬಿ/ಪ್ರತಿ ಸೆಕೆಂಡಿಗೆ ಪೋರ್ಟ್‌ಬ್ಲೇರ್‌ನಲ್ಲಿ ಇನ್ನು ಮುಂದೆ ಸಿಗುವ ಇಂಟರ್ನೆಟ್‌ ವೇಗ
200 ಜಿಬಿ/ಪ್ರತಿ ಸೆಕೆಂಡಿಗೆ ಪೋರ್ಟ್‌ಬ್ಲೇರ್‌ ಹೊರತುಪಡಿಸಿ ಉಳಿದ ಕಡೆ ಸಿಗುವ ಇಂಟರ್ನೆಟ್‌ ವೇಗ

Advertisement
Advertisement

Udayavani is now on Telegram. Click here to join our channel and stay updated with the latest news.

Next