Advertisement
-ಮುತ್ತಿನ ಆಭರಣಗಳನ್ನು ಧರಿಸುವಾಗ ಒಂದು ಕ್ರಮವಿದೆ. ಅದೇನೆಂದರೆ, ಅವುಗಳನ್ನು ಕೊನೆಯಲ್ಲಿ ಧರಿಸಬೇಕು ಮತ್ತು ಎಲ್ಲಕ್ಕಿಂತ ಮುಂಚೆ ಬಿಚ್ಚಿ, ಎತ್ತಿಡಬೇಕು. ಮೇಕ್‌ಅಪ್, ಹೇರ್‌ಸ್ಟೈಲ್, ಪರ್ಫ್ಯೂಮ್, ಬಾಡಿ ಲೋಷನ್ ಲೇಪನ…ಹೀಗೆ ಎಲ್ಲವೂ ಮುಗಿದ ನಂತರ, ಮುತ್ತಿನ ಒಡವೆ ಹಾಕಿಕೊಳ್ಳಬೇಕು. ನಂತರ, ಎಲ್ಲಕ್ಕಿಂತ ಮೊದಲು ಬಿಚ್ಚಿಡಬೇಕು.
Related Articles
Advertisement
-ಸ್ಟೀಮ್/ ಅಲ್ಟ್ರಾಸೋನಿಕ್ ಜ್ಯುವೆಲರಿ ಕ್ಲೀನರ್‌ಗಳಿಂದ ಯಾವತ್ತೂ ಮುತ್ತನ್ನು ಸ್ವತ್ಛಗೊಳಿಸಬೇಡಿ. ಇದರಿಂದ ಮುತ್ತಿನ ಹೊರ ಪದರಕ್ಕೆ ಹಾನಿಯಾಗುತ್ತದೆ.
-ಜ್ಯುವೆಲರಿ ರ್ಯಾಕ್‌ಗಳಲ್ಲಿ ಮುತ್ತಿನ ಹಾರಗಳನ್ನು ನೇತು ಹಾಕುವುದಕ್ಕಿಂತ, ಪೆಟ್ಟಿಗೆಯೊಳಗೆ ಫ್ಲಾಟ್ (ಮಲಗಿಸಿದಂತೆ) ಇಡುವುದು ಉತ್ತಮ.
-ಮುತ್ತಿನ ಒಡವೆಗಳನ್ನು ಪ್ರತ್ಯೇಕವಾಗಿ, ರೇಷ್ಮೆ ಅಥವಾ ಹತ್ತಿಯಿಂದ ಮಾಡಲ್ಪಟ್ಟ ಪೌಚ್‌ಗಳಲ್ಲಿ ಹಾಕಿ ಇಡಿ. ಬೇರೆ ಒಡವೆಗಳ ಜೊತೆ ಇಟ್ಟರೆ, ಮುತ್ತುಗಳು ಬಿರುಕು ಬಿಡಬಹುದು. ಪ್ಲಾಸ್ಟಿಕ್ ಕವರ್ ಅಥವಾ ಜ್ಯುವೆಲರಿ ಬಾಕ್ಸ್‌ಗಳು ಕೂಡಾ ಮುತ್ತನ್ನು ಹಾಳುಗೆಡವಬಹುದು.
-ಆದ್ರ ವಾತಾವರಣದಲ್ಲಿ ಮುತ್ತುಗಳು ಹಾಳಾಗುವುದನ್ನು ತಡೆಯಬಹುದು (ಮುತ್ತುಗಳು ನೀರಿನಿಂದ ಬಂದವು). ಹಾಗಾಗಿ, ಮೂರು-ನಾಲ್ಕು ತಿಂಗಳಿಗೊಮ್ಮೆಯಾದರೂ ಒಡವೆಗಳನ್ನು ಧರಿಸಬೇಕು. ದೇಹದಲ್ಲಿ ಉತ್ಪತ್ತಿಯಾಗುವ ಬೆವರು, ಎಣ್ಣೆಯಿಂದ ಮುತ್ತುಗಳ ಆಯಸ್ಸು ಹೆಚ್ಚುತ್ತದೆ. ವರ್ಷಗಳ ಕಾಲ ಹಾಗೆಯೇ ಪೆಟ್ಟಿಗೆಯಲ್ಲಿ ಇಟ್ಟರೆ ಮುತ್ತುಗಳಲ್ಲಿ ಬಿರಕು ಕಾಣಿಸುತ್ತದೆ.
– ಕ್ಲೋರಿನ್, ಹೈಡ್ರೋಜನ್ ಪೆರಾಕ್ಸೆ„ಡ್, ವಿನೇಗರ್, ಅಮೋನಿಯಾ, ಹೇರ್‌ಸ್ಪ್ರೆ, ಪರ್ಫ್ಯೂಮ್, ಕಾಸ್ಮೆಟಿಕ್ಸ್ ಮುಂತಾದ ರಾಸಾಯನಿಕಗಳಿಂದ ಮುತ್ತುಗಳನ್ನು ದೂರವೇ ಇಡಬೇಕು.
-ಮುತ್ತಿನ ಆಭರಣ ಧರಿಸಿ ನೀರಿಗಿಳಿಯುವುದು, ಸ್ನಾನ ಮಾಡುವುದು, ಸಲ್ಲ. ಮುತ್ತಿನ ಉಂಗುರ, ಬಳೆಗಳನ್ನು ನೀರು ತಾಕದಂತೆ ಜೋಪಾನ ಮಾಡಿ.
-ಅತಿ ಶಾಖ, ಅತೀ ಶೀತ ಸ್ಥಳಗಳಲ್ಲಿ ಮುತ್ತನ್ನು ಇಡಬಾರದು.