Advertisement

ಶೇಂಗಾ ಬಿತ್ತನೆ ಬೀಜ ಕಳಪೆ: ರೈತರ ಆಕ್ರೋಶ

01:14 PM Jun 26, 2021 | Team Udayavani |

ನಾಯಕನಹಟ್ಟಿ: ಕೃಷಿ ಇಲಾಖೆ ವಿತರಿಸಿದ ಬಿತ್ತನೆ ಶೇಂಗಾ ಕಾಯಿ ತುಂಬ ಹುಳುಗಳ ತುಂಬಿದ್ದು ಕಳಪೆಯಾಗಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಮಾರುಕಟ್ಟೆ ಬೆಲೆಗಿಂತ ಹೆಚ್ಚು ಬೆಲೆಗೆ ಕೃಷಿ ಇಲಾಖೆ ಶೇಂಗಾ ಕಾಯಿ ಮಾರಾಟ ಮಾಡುತ್ತಿದ್ದಾರೆ.  ಹೀಗಿದ್ದರೂ ಸರಕಾರ ಒದಗಿಸುವ ಬಿತ್ತನೆ ಬೀಜಗಳು ಉತ್ತಮ ಗುಣಮಟ್ಟದಿಂದ ಕೂಡಿದ್ದು, ಪ್ರಮಾಣೀಕೃತ ಬಿತ್ತನೆ ಬೀಜಗಳಾಗಿರುತ್ತವೆ ಎಂಬ ಏಕೈಕ ಕಾರಣದಿಂದ ಹೆಚ್ಚು ಬೆಲೆ ನೀಡಿ ಬಿತ್ತನೆ ಬೀಜ ಖರೀದಿಸಿದ್ದಾರೆ. ಕೊರೊನಾ ಸಂಕಷ್ಟದಲ್ಲಿ ಸಾಲ ಮಾಡಿ ತಂದ ಬಿತ್ತನೆ ಬೀಜದಲ್ಲಿ ಭಾರೀ ಪ್ರಮಾಣದಲ್ಲಿ ಹುಳುಗಳಿಂದ ರೈತರ ಆಕ್ರೋಶ ಹೆಚ್ಚಾಗಿದೆ.

ಸಮೀಪದ ಬಲ್ಲನಾಯಕನಹಟ್ಟಿ ಗ್ರಾಮದ ಕೆ.ಎಂ.  ಜಯಣ್ಣ ನಾಯಕನಹಟ್ಟಿ ರೈತ ಸಂಪರ್ಕ ಕೇಂದ್ರದಿಂದ 5 ಪ್ಯಾಕೆಟ್‌ ಬಿತ್ತನೆ ಶೇಂಗಾ ಕಾಯಿ ಖರೀದಿಸಿದ್ದಾರೆ. 30 ಕೆ.ಜಿ ತೂಕದ ಪ್ರತಿ ಪ್ಯಾಕೆಟ್‌ಗೆ 1,800 ರೂ.ಗಳಂತೆ 9 ಸಾವಿರ ತೆತ್ತು ಬಿತ್ತನೆ ಬೀಜ ತಂದಿದ್ದಾರೆ. ಖರೀದಿಸಿದ  ಶೇಂಗಾ ಕಾಯಿಗಳನ್ನು ಸುಲಿಯುವ ಸಂದರ್ಭದಲ್ಲಿ ಭಾರೀ ಪ್ರಮಾಣದ ಹುಳುಗಳ ಕಂಡುಬಂದಿವೆ.

ಖರೀದಿಸಿದ ಐದು ಪ್ಯಾಕೆಟ್‌ಗಳಲ್ಲಿ ನಾಲ್ಕು ಪ್ಯಾಕೆಟ್‌ಗಳ ಕಾಯಿಗಳಲ್ಲಿ ಹುಳುಗಳು ತುಂಬಿವೆ. ಬೀಜಗಳ ಒಳಗಿಂದ ಕಂದು ಬಣ್ಣದ ಹುಳುಗಳು ಹೊರಬರುತ್ತಿವೆ. ಹುಳುಗಳು ಬೀಜಗಳನ್ನು ಕೊರೆದು, ತಿಂದು ಜೊಳ್ಳಾಗಿಸಿವೆ. ಬೀಜಗಳು ಪೂರ್ತಿಯಾಗಿ ಹಾಳಾಗಿದ್ದು, ಬಿತ್ತನೆಗೆ ಸಾಧ್ಯವಿಲ್ಲದ ಪ್ರಮಾಣದಲ್ಲಿ ಹಾಳಾಗಿವೆ. ಇದೀಗ ಮತ್ತೂಮ್ಮೆ ಶೇಂಗಾ ಕಾಯಿ ಖರೀದಿಸಿ ಬೇರ್ಪಡಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಹಲವಾರು ರೀತಿಯ ರೈತರು ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಸರಕಾರಿ ಸಂಸ್ಥೆಯಾದ ಕರ್ನಾಟಕ ರಾಜ್ಯ ಎಣ್ಣೆ ಕಾಳು ಬೀಜ ನಿಗಮದಿಂದ (ಕೆಓಎಪ್‌) ದಿಂದ ಬಿತ್ತನೆ ಶೇಂಗಾ ಮಾರಾಟ ಮಾಡಲಾಗುತ್ತಿತ್ತು. ಕೆ.ಓ.ಎಫ್‌ ವಿತರಿಸಿದ ಬಿತ್ತನೆ

ಬೀಜಗಳ ಹಲವಾರು ಲೋಡ್‌ಗಳಲ್ಲಿ ಬಿತ್ತನೆ ಬೀಜಗಳು ಜೊಳ್ಳಾಗಿರುವುದು ಕಂಡುಬಂದಿತ್ತು. ಈ ಬಗ್ಗೆ ರೈತರು ಹಾಗೂ ರೈತ ಸಂಘಟನೆಗಳು ಸರಕಾರಿ ಸಂಸ್ಥೆಗೆ ಬದಲಾಗಿ ಖಾಸಗಿ ಸಂಸ್ಥೆಗಳಿಂದ ಖರೀದಿಸುವಂತೆ ಒತ್ತಾಯಿಸಿದ್ದರು. ಈ ಬಾರಿ ಖಾಸಗಿ ಸಂಸ್ಥೆಯಿಂದ ಇಲಾಖೆಬಿತ್ತನೆ ಬೀಜ ಖರೀದಿಸಿದೆ. ರಾಷ್ಟ್ರೀಯಬೀಜ ನಿಗಮ ಹಾಗೂ ವಿಜಯಪುರ ಜಿಲ್ಲೆಯ ತಾಳಿಕೋಟೆಯ ಸಾಯಿ ಅಗ್ರೋ ಸೀಡ್ಸ್‌ ಕಂಪನಿ ಬಿತ್ತನೆ ಬೀಜ ಪೂರೈಸಿದೆ.

Advertisement

ಬೀಜಗಳನ್ನು ಪರಿಶೀಲಿಸಿದರೆ ಒಂದೆರಡು ವರ್ಷ ಹಳೆಯದಾದ ಶೇಂಗಾ ಕಾಯಿಗಳನ್ನು ಕಂಪನಿಯುಹಳೆಯ ಸ್ಟಾಕ್‌ಗಳನ್ನು ವಿತರಿಸಿರುವುದು ಕಂಡುಬಂದಿದೆ.ಮಾರಾಟದ ಬಿತ್ತನೆ ಬೀಜಗಳ ಗುಣಮಟ್ಟ ಕಾಪಾಡಿಕೊಳ್ಳುವುದು ಅಗತ್ಯ. ಕಳಪೆ ಬಿತ್ತನೆ ಬೀಜ ಪೂರೈಸುವ ಕಂಪನಿಗಳ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು ಎನ್ನುವುದು ರೈತರ ಒತ್ತಾಯವಾಗಿದೆ.

ಕೆಲವೊಂದು ಸ್ಟಾಕ್‌ಗಳಲ್ಲಿ ಈ ದೂರುಗಳು ಕೇಳಿ ಬಂದಿವೆ. ಈ ಪ್ರಕರಣಗಳು ಕಂಡುಬಂದರೆ ಅಂಥ ಬೀಜಗಳನ್ನುರೈತರಿಂದ ಹಿಂಪಡೆದು, ಗುಣಮಟ್ಟದ ಬಿತ್ತನೆ ಬೀಜ ವಿತರಿಸಲಾಗುವುದು. ಗುಣಮಟ್ಟದಲ್ಲಿ ಯಾವುದೇ ಹೊಂದಾಣಿಕೆಮಾಡಿಕೊಳ್ಳುವುದಿಲ್ಲ. ರೈತರು ಯಾವುದೇ ಆತಂಕಕ್ಕೆ ಒಳಗಾಗಬೇಕಾಗಿಲ್ಲ. ಇದರ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. –ಡಾ.ಮೋಹನ್‌ ಕುಮಾರ್‌,ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ.

Advertisement

Udayavani is now on Telegram. Click here to join our channel and stay updated with the latest news.

Next