Advertisement
ಅತಿ ಹೆಚ್ಚು ನವಿಲು ಸಂತತಿ ಇರುವ ತಾಲೂಕಿನ ವಲಯ ಅರಣ್ಯ ಪ್ರದೇಶದಲ್ಲಿ ರಾಷ್ಟ್ರಪಕ್ಷಿಯ ದಂಡೇ ಇದೆ. ಇತ್ತೀಚಿಗೆ ತಾಲೂಕಿನಲ್ಲಿ ಹೆಚ್ಚು ಮಳೆ ಬೀಳುತ್ತಿರುವುದರಿಂದ ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಂದರ್ಭದಲ್ಲಿ ಕಾಡಿನಿಂದ ನಾಡಿಗೆ ಬರುವ ನವಿಲುಗಳು, ರೈತರ ಜಮೀನಿನಲ್ಲಿ, ಊರ ಹೊರವಲಯದಲ್ಲಿ ಕಾಣಸಿಗುತ್ತವೆ.
ಆಹಾರ ಕೊರತೆಯಿಂದ ಕಾಡು ಬಿಟ್ಟು ನಾಡಿಗೆ ಬರುತ್ತಿರುವ ನವಿಲುಗಳು ರೈತರ ಜಮೀನಿನಲ್ಲಿ, ಊರ ಹೊರಹೊರಗಡೆ ಇರುವ ತೋಪಿನಲ್ಲಿ ಬೀಡು ಬಿಟ್ಟು, ರೈತರು ಬೆಳೆದ ರಾಗಿ, ಇನ್ನಿತರೆ ಬೆಳೆಯನ್ನು ತಿಂದು ನಾಶ ಮಾಡುತ್ತಿವೆ. ಇದು ರೈತರ ಅಸಮಾಧಾನಕ್ಕೂ ಕಾರಣವಾಗಿದೆ. ನವಿಲಿನಿಂದ ರೈತರಿಗೆ ಸಮಸ್ಯೆ ಆದರೆ, ದಾರಿಯಲ್ಲಿ ಹೋಗುವವರಿಗೆ, ಮಕ್ಕಳು, ಮಹಿಳೆಯರಿಗೆ ಆನಂದ. ಇದನ್ನೂ ಓದಿ :ಟಿ ಸೀರಿಸ್ -ಲಹರಿ ಸಂಸ್ಥೆ ತೆಕ್ಕೆಗೆ ‘RRR’ ಆಡಿಯೋ ರೈಟ್ಸ್ :ಸೇಲಾಗಿದ್ದು ಎಷ್ಟು ಕೋಟಿಗೆ ?
Related Articles
ಬೆಳಗ್ಗೆ, ಸಂಜೆ ಸಮಯದಲ್ಲಿ ತಾಲೂಕಿನ ವಾಬಸಂದ್ರ, ಎಲ್ಲೋಡು, ಯರ್ರಹಳ್ಳಿ, ಗೌರಿಬಿದನೂರು ರಸ್ತೆಯ ಅರಣ್ಯ ಪ್ರದೇಶದಲ್ಲಿ ನವಿಲುಗಳ ಸಂಖ್ಯೆ ಹೆಚ್ಚಾಗಿದೆ. ಅವುಗಳನ್ನು ನೊಡಲೆಂದೇ ಪಟ್ಟಣದ ಜನರು, ಸಂಸಾರ ಸಮೇತವಾಗಿ ಕಾರು, ಬೈಕ್, ಮತ್ತಿತರ ವಾಹನಗಳಲ್ಲಿ ಸಂಜೆ ವಾಯುವಿಹಾರಕ್ಕೆ ತೆರಳುತ್ತಾರೆ.
Advertisement
ಪ್ರಾಣಿ-ಪಕ್ಷಿ ಸೇರಿ ಸಕಲ ಜೀವ ಸಂಕುಲಕ್ಕೆ ಗುಡಿಬಂಡೆ ಅರಣ್ಯ ಪ್ರದೇಶವು ಆಶ್ರಯ ತಾಣವಾಗಿದೆ. ಇಲಾಖೆಯ ಪ್ರಕಾರ 10 ಸಾವಿರಕ್ಕೂ ಹೆಚ್ಚು ನವಿಲುಗಳು ಈ ಮೀಸಲು ಅರಣ್ಯ ಪ್ರದೇಶದಲ್ಲಿವೆ ಎನ್ನುತ್ತಾರೆ ವಲಯ ಅರಣ್ಯ ಸಂರಕ್ಷಣಾಧಿಕಾರಿ ಹುಲುಗಪ್ಪ.
ನವಿಲುವನ ಸ್ಥಾಪಿಸಿ:ತಾಲೂಕಿನಲ್ಲಿ ದಿನೇ ದಿನೆ ನವಿಲುಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅರಣ್ಯ ಪ್ರದೇಶ ಪಟ್ಟಣಕ್ಕೆ ಸಮೀಪ ಇರುವುದರಿಂದ ನವಿಲು ವನ ಸ್ಥಾಪಿಸಿದಲ್ಲಿ, ತಾಲೂಕಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಬಹುದು. ಇದರಿಂದ ಸ್ಥಳವಾಗಿ ಕೆಲವರಿಗೆ ಉದ್ಯೋಗ, ವ್ಯಾಪಾರವೂ ವೃದ್ಧಿ ಆಗಲಿದೆ ಎಂಬುದು ಜನರ ಅಭಿಪ್ರಾಯವಾಗಿದೆ.