Advertisement
ಉಜಿರೆ ವಾರ್ಡ್ ನಂ. 4ಬೆಳ್ತಂಗಡಿ ತಾಲೂಕಿನ ಉಜಿರೆ ವಾರ್ಡ್ ನಂ. 4ಕ್ಕೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಕ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಮತದಾನ ಕೇಂದ್ರ ನಿಯೋಜಿಸಲಾಗಿತ್ತು. ಒಟ್ಟು 1,069 ಮತದಾರರ ಪೈಕಿ 535 ಮಂದಿ ಮತ ಚಲಾಯಿಸಿದ್ದು, ಶೇ. 50.54 ಮತದಾನವಾಗಿದೆ. 263 ಪುರುಷರು ಹಾಗೂ 272 ಮಹಿಳೆಯರು ಮತದಾನ ಪಕ್ರಿಯೆಯಲ್ಲಿ ಪಾಲ್ಗೊಂಡರು.
ಉಜಿರೆ ವಾರ್ಡ್ ನಂ. 11ಕ್ಕೆ ಶ್ರೀ ಧರ್ಮಸ್ಥಳ ಮಂಜು ನಾಥೇಶ್ವರ ಅನುದಾನಿತ ಹಿ.ಪ್ರಾ. ಶಾಲೆಯಲ್ಲಿ ಮತದಾನ ಕೇಂದ್ರ ಸಿದ್ಧಪಡಿಸಲಾಗಿತ್ತು. ಒಟ್ಟು 786 ಮತದಾರರ ಪೈಕಿ 485 ಮಂದಿ ಮತದಾನದಲ್ಲಿ ಪಾಲ್ಗೊಂಡು ಶೇ. 61.94 ಗರಿಷ್ಠ ಮತದಾನವಾಗಿದೆ. 234 ಪುರುಷರು, 251 ಮಹಿಳೆಯರು ಮತ ಚಲಾಯಿಸಿದ್ದಾರೆ. ಕೊಯ್ಯೂರು ವಾರ್ಡ್ ನಂ. 2
ಕೊಯ್ಯೂರು ವಾರ್ಡ್ ನಂ. 2ಕ್ಕೆ ದ.ಕ. ಜಿ.ಪಂ. ಹಿ.ಪ್ರಾ. ಶಾಲೆ ಕೊಯ್ಯೂರು ದೇವಸ್ಥಾನ ಮತದಾನ ಕೇಂದ್ರವಾಗಿತ್ತು. ಒಟ್ಟು 938 ಮತದಾರರ ಪೈಕಿ 566 ಮಂದಿ ಮತದಾನದಲ್ಲಿ ಪಾಲ್ಗೊಂಡು ಶೇ. 60.34 ಮತದಾನವಾಗಿದೆ. 302 ಪುರುಷರು ಹಾಗೂ 264 ಮಹಿಳೆಯರು ಮತದಾನ ಮಾಡಿದ್ದಾರೆ.
ಈ ಮೂಲಕ ಮೂರು ಕ್ಷೇತ್ರಗಳಲ್ಲಿ 799 ಪುರುಷರು 787 ಮಹಿಳೆಯರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.
Related Articles
ಪ್ರಥಮ ಮತಗಟ್ಟೆ ಅಧಿಕಾರಿ, ದ್ವಿತೀಯ ಮತಗಟ್ಟೆ ಅಧಿಕಾರಿಗಳಂತೆ ಮೂರು ಮತಗಟ್ಟೆ ಕೇಂದ್ರಕ್ಕೆ 4 ಸಿಬಂದಿ ಹಾಗೂ 1ಡಿ ಗ್ರೂಪ್ ಸಹಿತ ಒಟ್ಟು 5 ಜನ ಸಿಬಂದಿ ನಿಯೋಜಿಸಲಾಗಿತ್ತು. ಮೂರು ವಾರ್ಡ್‌ಗಳಿಗೆ 15 ಜನ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದರು. 4 ಮಂದಿ ಪೊಲೀಸ್ ಸಿಬಂದಿ ಸಹಕರಿಸಿದರು.
Advertisement
ಶಾಲಾ ಪ್ರಾರಂಭೋತ್ಸವದಂದು ರಜೆಶಾಲಾ ಪ್ರಾರಂಭೋತ್ಸವದಂದು ತಾಲೂಕಿನ ಎರಡು ಶಾಲೆಯಲ್ಲಿ ಗ್ರಾ.ಪಂ. ಚುನಾವಣೆ ಕೇಂದ್ರ ನಿಯೋಜನೆಗೊಂಡಿರವುದರಿಂದ ಮಕ್ಕಳ ಪ್ರಾರಂಭೋತ್ಸವ ಗುರುವಾರಕ್ಕೆ ಮುಂದೂಡಲಾಗಿದೆ. ಉಜಿರೆ ವಾರ್ಡ್ ನಂ. 11ರಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿ.ಪ್ರಾ. ಶಾಲೆ ಹಾಗೂ ಕೊಯ್ಯೂರು ವಾರ್ಡ್ ನಂ.2ರ ದ.ಕ. ಜಿ.ಪಂ. ಹಿ.ಪ್ರಾ. ಶಾಲೆ ಕೊಯ್ಯೂರು ದೇವಸ್ಥಾನ ಶಾಲಾ ಪ್ರಾರಂಭೋತ್ಸವ ಗುರುವಾರ ನಡೆಯಲಿದೆ.
31ರ ಸಂಜೆ ವರೆಗೆ ನೀತಿ ಸಂಹಿತೆ
ಮೂರು ವಾರ್ಡ್‌ಗಳಲ್ಲಿ ಶಾಂತಿಯುತ ಮತದಾನದ ಮೂಲಕ ಮತದಾರರು ಸಹಕರಿಸಿದ್ದಾರೆ. ಮತದಾನ ಸುಸೂತ್ರವಾಗಿ ನಡೆಯಲು ತಾ.ಪಂ. ಸಿಬಂದಿ ಹಾಗೂ ಪೊಲೀಸರ ಶ್ರಮ ಗಮನಾರ್ಹ. ಮೇ 31ರಂದು ನಗರ ಪಂ.ನಲ್ಲಿ ಮತ ಎಣಿಕೆ ನಡೆಯಲಿದ್ದು, 31 ಸಂಜೆ ವರೆಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.
– ಸುಭಾಶ್ ಜಾಧವ್,ಚುನಾವಣಾಧಿಕಾರಿ