Advertisement
ಸವಣೂರು: ಬೆಳಂದೂರು ಗ್ರಾ.ಪಂ. ಗೊಳಪಟ್ಟ ಕುದ್ಮಾರು ಶಾಲೆಯಿಂದ ಶಿಕ್ಷಕಿಯೋರ್ವರನ್ನು ಪಳ್ಳತ್ತಾರು ಶಾಲೆಗೆ ನಿಯೋಜನೆಗೊಳಿಸಿರುವುದನ್ನು ಹಾಗೂ ಶಿಕ್ಷಣಾಧಿಕಾರಿಗಳ ವರ್ತನೆಯನ್ನು ಖಂಡಿಸಿ ಕುದ್ಮಾರು ಶಾಲೆಯಲ್ಲಿ ಶಾಲಾಭಿವೃದ್ದಿ ಸಮಿತಿ ಹಾಗೂ ಪೋಷಕರು, ಹಿರಿಯ ವಿದ್ಯಾರ್ಥಿಗಳು ಜು.10ರಂದು ಶಾಂತಿಯುತ ಪ್ರತಿಭಟನೆ ನಡೆಸಿದರು.
Related Articles
Advertisement
ಭರವಸೆಗೆ ಮಣಿಯದ ಷೋಷ ಕರು ಶಿಕ್ಷಕರ ನೇಮಕವಾದ ಬಳಿಕ ವಷ್ಟೇ ನಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗುವುದು. ಅಲ್ಲಿ ತನಕ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಕೊಡುವುದಿಲ್ಲವೆಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಶಿಕ್ಷಣಾಧಿಕಾರಿಯವರು ಕುದ್ಮಾರಿನ ಎಸ್‌ಡಿಎಂಸಿಯವರನ್ನು ಅನಾಗರಿಕರು ಎಂದು ಹೇಳಿರುವುದು ಖಂಡನೀಯ. ಕನಿಷ್ಠ ಪಕ್ಷ ಸೌಜನ್ಯತೆಯಿಂದಾದರೂ ವರ್ತಿಸಿ ಸಮಸ್ಯೆ ಬಗೆಹರಿಸಬಹುದಿತ್ತು. ಅವರ ಅಹಂ, ದರ್ಪಕ್ಕೆ ಕುದ್ಮಾರು ಶಾಲೆಯ ಮಕ್ಕಳನ್ನು ಬಲಿಪಶು ಮಾಡಲು ನಾವು ಬಿಡುವುದಿಲ್ಲ. ಶಿಕ್ಷಣಾಧಿಕಾರಿ ಅವರು ಪತ್ರಿಕಾ ಪ್ರಕಟನೆೆ ನೀಡಿ ಕುದ್ಮಾರಿನಲ್ಲಿ ತಾನು ಅನಾಗರಿಕರು ಎಂದು ಹೇಳಿರುವುದು ನಿಜ ಎಂಬುದನ್ನು ಸಮರ್ಥಿಸಿರುವುದು ಅವರ ಮೂರ್ಖತನವನ್ನು ತೋರಿಸುತ್ತದೆ. ಶಿಕ್ಷಣಾಧಿಕಾರಿಯವರು ತನ್ನ ಅಹಂನಿಂದ ಶಿಕ್ಷಣ ಇಲಾಖೆಯನ್ನೇ ಹಾಳುಗೆಡವುತ್ತಿದ್ದಾರೆ ಎಂದು ಶಾಲಾ ಹಿರಿಯ ವಿದ್ಯಾರ್ಥಿ ಪ್ರವೀಣ್ ಕುಮಾರ್ ಕಡೆಂಜಿಗುತ್ತು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಗಳ ಸಾಥ್ಪ್ರತಿಭಟನೆಯಲ್ಲಿ ಎಸ್‌ಡಿಎಂಸಿ, ಷೋಷಕರು ಮಾತ್ರವಲ್ಲದೇ ಗ್ರಾಮಸ್ಥರು ಪಾಲ್ಗೊಂಡು ಸುಮಾರು ಇನ್ನೂರಕ್ಕೂ ಅಧಿಕ ಮಂದಿ ಪಾಲ್ಗೊಂಡರು. ಸ್ಕಂದಶ್ರೀ ಯುವಕ ಮಂಡಲ, ಸ್ನೇಹಿತರ ಬಳಗ ಹಾಗೂ ರೆಡ್ ಬಾಯ್ಸ ಸೇರಿದಂತೆ ಕುದ್ಮಾರಿನ ಅನೇಕ ಸಂಘ-ಸಂಸ್ಥೆಗಳು ಪ್ರತಿಭಟನೆಗೆ ಸಾಥ್ ನೀಡಿದರು. ಶಿಕ್ಷಕರ ನೇಮಕವಾಗುವ ತನಕ ಪ್ರತಿಭಟನೆಯಿಂದ ವಿಚಲಿತರಾಗುವ ಪ್ರಶ್ನೆಯೇ ಇಲ್ಲ, ಬಿಇಒ, ಸಿಆರ್‌ಪಿ ಶಾಲೆಗೆ ಭೇಟಿ ನೀಡಬೆಕೆಂದು ಸಭೆಯಲ್ಲಿ ಒಕ್ಕೊರಲಿನ ಆಗ್ರಹ ಕೇಳಿಬಂತು. ಕುದ್ಮಾರು ಶಾಲೆಯಲ್ಲಿ ಇಷ್ಟೆಲ್ಲ ಸಮಸ್ಯೆ ತಲೆದೋರಲು ಸಿಆರ್‌ಪಿ ವೆಂಕಟೇಶ್ ಅನಂತಾಡಿ ಯವರೇ ನೇರ ಕಾರಣ. ಪಳ್ಳತ್ತಾರು ಶಾಲೆಯಲ್ಲಿ ಶಿಕ್ಷಕರ ಕೊರತೆ ಯಿದ್ದರೂ ಅವರಿಗೆ ಪಳ್ಳತ್ತಾರು ಶಾಲೆಯಲ್ಲಿ ಕಾರ್ಯನಿರ್ವಹಿಸಲು ಇಷ್ಟವಿಲ್ಲ, ಹೀಗಾಗಿ ಅವರು ಮೇಲಾಧಿಕಾರಿ ಗಳಿಗೆ ತಪ್ಪು ಮಾಹಿತಿ ನೀಡಿ, ಇಲ್ಲಿನ ಶಾಲೆಗಳು ಅವನತಿ ಹೊಂದುವಂತೆ ಮಾಡುತ್ತಾರೆ ಎಂದು ಸಿಆರ್‌ಪಿಯವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾ ಯಿತು.ಸಿಆರ್‌ಪಿ ಅವರು ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳಿಗೆ ಸೇತುಬಂಧವಾಗಿ ಕಾರ್ಯ ನಿರ್ವಹಿಸಬೇಕೆ ಹೊರತು ಕಂದಕ ಸೃಷ್ಟಿಸುವ ಕೆಲಸ ಮಾಡಬಾರದು.ಸಿಆರ್‌ಪಿ ಅವರು ತಮ್ಮ ವ್ಯಾಪ್ತಿಯ ಶಾಲೆಯಲ್ಲಿ ಇಷ್ಟು ದೊಡ್ಡ ಸಮಸ್ಯೆಯಿದ್ದರೂ ಬೇಟಿ ನೀಡಿಲ್ಲ ಯಾಕೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ನಲಿಕಲಿಯದ್ದೇ ಗಲಿಬಿಲಿ
1ರಿಂದ 3ರ ತನಕ ಸುಮಾರು 72 ಮಕ್ಕಳಿದ್ದು ಇದೀಗ ಕೇವಲ ಇಬ್ಬರೇ ಶಿಕ್ಷಕರು ನಿರಂತರವಾಗಿ ನಲಿಕಲಿ ತರಗತಿ ಯಲ್ಲಿ ತೊಡಗಿಸಿಕೊಳ್ಳುವಂತಾಗಿದೆ. ಇದು ನಲಿಕಲಿಯನ್ನು ಗಲಿಬಲಿಯಾಗಿಸಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷೆ ಪುಷ್ಪಲತಾ ಪಿ. ಗೌಡ ಹೇಳಿದರು.ಪಳ್ಳತ್ತಾರು ಶಾಲೆಗೆ ನಿಯೋಜಿಸಿದ ಶಿಕ್ಷಕಿಯ ನಿಯೋಜನೆಯನ್ನು ರದ್ದುಗೊಳಿಸುವ ತನಕ ತಾವು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ.ನಮ್ಮ ತಾಳ್ಮೆಯನ್ನೇ ದೌರ್ಭಲ್ಯ ಎಂದು ಭಾವಿಸುವುದು ಬೇಡ.ಶಿಕ್ಷಣಾಧಿಕಾರಿ ಕುದ್ಮಾರು ಶಾಲೆಯ ಕುರಿತು ಉದ್ದಟತನ ತೋರುವುದು ಸರಿಯಲ್ಲ ಎಂದರು. ಮಾತುಕತೆಯ ವೇಳೆ ಜಿಪಂ ಸದಸ್ಯೆ ಪ್ರಮೀಳಾ ಜನಾರ್ಧನ, ಬೆಳಂದೂರು ಗ್ರಾಪಂ ಅಧ್ಯಕ್ಷೆ ಉಮೇಶ್ವರಿ ಅಗಳಿ, ಎಪಿಎಂಸಿ ನಿರ್ದೇಶಕ ದಿನೇಶ್ ಮೆದು, ಬೆಳಂದೂರು ಪಂಚಾಯಿತಿ ಉಪಾಧ್ಯಕ್ಷ ಹರೀಶ್ ಕೆರೆನಾರು, ಸದಸ್ಯರಾದ ಸಂಜೀವ ಕೂರ, ಮೇದಪ್ಪ ಕೆಡೆಂಜಿ, ಕಾರ್ಯದರ್ಶಿ ಜಯಪ್ರಕಾಶ್ ಅಲೆಕ್ಕಾಡಿ, ಎಸ್‌ಡಿಎಂಸಿ ಉಪಾಧ್ಯಕ್ಷ ಮೇದಪ್ಪ ಕುವೆತ್ತೋಡಿ, ಯುವಕ ಮಂಡಲದ ಅಧ್ಯಕ್ಷ ದೇವರಾಜ್ ನೂಜಿ ,ಶಾಲಾ ಮುಖ್ಯಶಿಕ್ಷಕಿ ಜೂಲಿಯಾನ ಡಿಸೋಜ ಉಪಸ್ಥಿತರಿದ್ದರು.