ಇಸ್ಲಾಮಾಬಾದ್ : ಭಾರತದೊಂದಿಗೆ ಶಾಂತಿ ಮತ್ತು ಸಹಬಾಳ್ವೆ ಬಹು ದೂರದ ಮಾತು ಎಂದು ಪಾಕ್ ದೈನಿಕ “ದಿ ಡೇಲಿ ಟೈಮ್ಸ್’ ಹೇಳಿದೆ.
ಸ್ವಾತಂತ್ರ್ಯ ದೊರಕಿ ಏಳು ದಶಕಗಳು ಕಳೆದಿವೆಯಾದರೂ ಭಾರತ ಮತ್ತು ಪಾಕಿಸ್ಥಾನ ಇನ್ನೂ ಶಾಂತಿಯುತ ಸಹಬಾಳ್ವೆಯನ್ನು ಕಲಿತಿಲ್ಲ ಎಂದು ಡೇಲಿ ಟೈಮ್ಸ್ ಸಂಪಾದಕೀಯ ಬರಹದಲ್ಲಿ ಹೇಳಿದೆ.
“ನಿಜಕ್ಕಾದರೆ ಭಾರತ ಮತ್ತು ಪಾಕಿಸ್ಥಾನದ ದ್ವಿಪಕ್ಷೀಯ ಬಾಂಧವ್ಯ ಕಾಲ ಸಂದಂತೆ ಹದಗೆಡುತ್ತಾ ಬಂದಿದೆ; ಅಂತೆಯೇ ಪರಸ್ಪರರಿಗೆ ಹಾನಿಯುಂಟು ಮಾಡುವ ಉಭಯತರ ಸಾಮರ್ಥ್ಯ ಇಷ್ಟು ವರ್ಷಗಳಲ್ಲಿ ಹೆಚ್ಚುತ್ತಾ ಬಂದಿದೆ’ ಎಂದು ದೈನಿಕ ಹೇಳಿದೆ.
ಎರಡೂ ದೇಶಗಳು ಪರಸ್ಪರರ ವಿರುದ್ಧ ಅತ್ಯಂತ ವಿಷಕಾರಿ ಚಟುವಟಿಕೆಗಳಲ್ಲಿ ತೊಡಗಿಕೊಂಡು ತಮ್ಮನ್ನು ತಾವು ವ್ಯಾಖ್ಯಾನಿಸಿಕೊಂಡಿವೆ; ಎರಡೂ ದೇಶಗಳು ಪರಸ್ಪರರ ವಿರುದ್ಧ ಪ್ರತ್ಛನ್ನ ಸಮರದಲ್ಲಿ ನಿರತವಾಗಿವೆ ಎಂದು ಪತ್ರಿಕೆ ಹೇಳಿದೆ.
ಹೊಸದಿಲ್ಲಿಯಲ್ಲಿ ಈಗಿರುವ ಆಡಳಿತೆಯು ಪಾಕಿಸ್ಥಾನದ ಅತ್ಯಂತ ಕೆಟ್ಟ ಶಕ್ತಿಗಳ ತದ್ರೂಪಿ ಇಮೇಜ್ ಹೊಂದುವುದಕ್ಕೆ ಕಟಿಬದ್ಧವಾಗಿದೆ ಎಂದು ಪತ್ರಿಕೆ ಹೇಳಿದೆ.