ಮಲ್ಪೆ: ಭಜನೆಯಿಂದ ಶಾಂತಿ,ನೆಮ್ಮದಿ, ಆರೋಗ್ಯ ವೃದ್ಧಿಯಾಗುತ್ತದೆ.ಪರಿಶುದ್ಧ ಮನಸ್ಸಿನಿಂದ ಭಜಿಸಿದರೆ ಭಗವಂತನ ಅನುಗ್ರಹವೂ ಪ್ರಾಪ್ತಿಯಾಗುತ್ತದೆ. ನಮ್ಮ ಕರಾವಳಿಯಲ್ಲಿ ಶಾಂತಿ ನೆಮ್ಮದಿ ನೆಲೆಸಲು ಅಲ್ಲಲ್ಲಿ ಇರುವ ಭಜನ ಮಂದಿರಗಳು ಪ್ರಮುಖ ಕಾರಣ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ಶನಿವಾರ ಕೊಡವೂರು ಕಾನಂಗಿ ಶ್ರೀ ದೇವಿ ಜ್ಞಾನೋದಯ ಪಾಂಡುರಂಗ ಭಜನ ಮಂದಿರದ 58ನೇ ವಾರ್ಷಿಕ ಮಂಗಲ, ರಜತ ಪ್ರಭಾವಳಿ ಮತ್ತು ದೇವರ ವಿಗ್ರಹಕ್ಕೆ ಸ್ವರ್ಣ ಲೇಪನ ಸಮರ್ಪಣೆ, ಅಖಂಡ ಏಕಾಹ ಭಜನ ಸಂಕೀರ್ತನೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಜನ ಮಂದಿರದ ಅಧ್ಯಕ್ಷ ದಾಸಪ್ಪ ಪುತ್ರನ್ ಕಾನಂಗಿ ಕಿದಿಯೂರು ವಹಿಸಿದ್ದರು. ಉಡುಪಿ ಸೋದೆ ಮಠದ ವಿದ್ವಾನ್ ಉದಯ ಕುಮಾರ್ ಸರಳತ್ತಾಯ ಅವರು ಪ್ರವಚನ ನೀಡಿದರು.
ಉಡುಪಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಬೆಂಗಳೂರು ಮಹಾನಗರ ಪಾಲಿಕೆ ಕಾರ್ಪೊರೇಟರ್ ಉಮೇಶ್ ಶೆಟ್ಟಿ ಕುತ್ಪಾಡಿ, ಮಲ್ಪೆ ಪಸೀìನ್ ಮೀನುಗಾರರ ಸಂಘ ಅಧ್ಯಕ್ಷ ಯಶೋಧರ ಅಮೀನ್, ಮಲ್ಪೆ ಮತೊÕéàದ್ಯಮಿ ನಾಗರಾಜ್ ಸುವರ್ಣ, ಕೋಡಿಬೆಂಗ್ರೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ನವೀಕರಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೃಷ್ಣ ಸುವರ್ಣ, ಕಾನಂಗಿ ಶ್ರೀ ದೇವಿ ಜ್ಞಾನೋದಯ ಪಾಂಡುರಂಗ ಭಜನ ಮಂದಿರದ ಉಪಾಧ್ಯಕ್ಷ ಸುರೇಶ್ ಸುವರ್ಣ, ಕಾರ್ಯಾಧ್ಯಕ್ಷ ಚಂದ್ರಕಾಂತ್ ಪುತ್ರನ್, ಮಹಿಳಾ ಮಂಡಳಿ ಅಧ್ಯಕ್ಷೆ ಪುಷ್ಪಾ ಜಗನ್ನಾಥ್ ಉಪಸ್ಥಿತರಿದ್ದರು.
ಸಮ್ಮಾನ: ಕರ್ನಾಟಕ ಸರಕಾರದ ಧಾರ್ಮಿಕ ಪರಿಷತ್ತಿನ ಆಗಮ ಪಂಡಿತ ಕೇಂಜ ಶ್ರೀಧರ ತಂತ್ರಿ, ಲೋಹ ಶಿಲ್ಪಿ ದಿನೇಶ್ ಮೂಡುಬೆಟ್ಟು ಅವರನ್ನು ಸಮ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಧಿಗಳಲ್ಲಿ ಸಾಧನೆಗೈದ ಸ್ಥಳೀಯ ಸಾಧಕಧಿರಾದ ಸುಪ್ರಭ, ನಿಶ್ಮಿತಾ,ಸುಪ್ರಿಯಾ ಹಾಗೂ ಸುಂದರ ಪೂಜಾರಿ ಅವರನ್ನು ಗೌರವಿಸಲಾಯಿತು. ಎಸೆಸೆಲ್ಸಿ ಮತ್ತು ಪಿಯುಸಿಯ ಪ್ರತಿಭಾವಂತರನ್ನು ಪುರಸ್ಕರಿಸಲಾಯಿತು.ಮಂದಿರದ ಮಾಜಿ ಅಧ್ಯಕ್ಷ ಮಧುಕರ ಬಂಗೇರ ಸ್ವಾಗತಿಸಿದರು. ಶ್ರೀಧರ ಅಮೀನ್ ವಂದಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.