Advertisement

ಕಾನೂನು ಅರಿವಿನಿಂದ ಶಾಂತಿ ಸ್ಥಾಪನೆ: ನ್ಯಾ.ವಿಜಯಲಕ್ಷ್ಮೀ

05:18 PM Nov 01, 2022 | Team Udayavani |

ಹಾಸನ: ಸಾರ್ವಜನಿಕರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿವುದರಿಂದ ಶಾಂತಿ, ಸುವ್ಯವಸ್ಥೆ ಕಾಪಾಡಿ ಕೊಳ್ಳಲು ಸಹಾಯಕವಾಗಲಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾ.ವಿಜಯಲಕ್ಷ್ಮೀದೇವಿ ಅವರು ಅಭಿಪ್ರಾಯಪಟ್ಟರು.

Advertisement

ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಅಪರಿಮಿತ ಕಾನೂನು ಅರಿವು ಮೂಲಕ ನಾಕರಿಕ ಸಬಲೀಕರಣ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿಯೊಬ್ಬರಿಗೂ ದೈನಂದಿನ ಜೀವನಕ್ಕೆ ಅನ್ವಯ ವಾಗುವ ಕಾನೂನಿನ ಕುರಿತು ಅರಿವು ಇರಬೇಕು ಎಂದರು.

ಜಿಲ್ಲಾಧಿಕಾರಿ ಎಂ.ಎಸ್‌.ಅರ್ಚನಾ ಅವರು ಮಾತನಾಡಿ, ಕಾನೂನಿನ ಅರಿವು ಕಾರ್ಯ ಕ್ರಮ ಪ್ರತಿ ನಾಗರಿಕನಿಗೂ ಪ್ರಯೋಜನಕಾರಿಯಾ ಗಿದ್ದು, ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಕಾನೂನಿನ ವ್ಯಾಖ್ಯಾನ: ಜಿಪಂ ಸಿಇಒ ಕಾಂತರಾಜು ಮಾತನಾಡಿ, ಕಾನೂನು ಎಂಬುದು ಒಂದು ಅಸ್ತ್ರ ವಾಗಿದೆ. ನಾಡಿನ ಸಂಪ್ರದಾಯ, ನಂಬಿಕೆ ಅನೇಕ ನಿಯಮಗಳನ್ನೊಳಗೊಂಡ ವ್ಯವಸ್ಥೆಯೆ ಕಾನೂನು ಎಂದರು.

ಕಾನೂನು ಅರಿವಿನ ಕೊರತೆ: ಸಾಕಷ್ಟು ಜನರಲ್ಲಿ ಕಾನೂನಿನ ಅರಿವಿನ ಕೊರತೆ ಯಿದ್ದು, ಇದರಿಂದಾಗಿ ದೇಶಾದ್ಯಾಂತ ಅನೇಕ ಸಮಸ್ಯೆಗಳಿಗೆ ಕಾರಣವಾಗಿ ಅಪರಾಧ, ದೌರ್ಜನ್ಯಗಳ ಸಂಖ್ಯೆ ಹೆಚ್ಚುತ್ತಿವೆ. ಇಂತಹ ಸಮಸ್ಯೆಗಳನ್ನು ಹೋಗಲಾಡಿಸಲು ಗ್ರಾಮೀಣ ಭಾಗದ ಜನರಿಗೆ ಕಾನೂನನ್ನು ತಲುಪಿ ಸುವ ಕೆಲಸ ವಾಗಬೇಕಿದೆ ಎಂದು ಅವರು ಹೇಳಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಉತ್ಛ ನ್ಯಾಯಾಲಯ ಹಾಗೂ ಸರ್ವೋತ್ಛc ನ್ಯಾಯಾ ಲಯದ ನಿರ್ದೇಶನದಂತೆ ಪ್ರತಿ ಗ್ರಾಮಗಳಿಗೂ ಜನರ ಸಹಕಾರದಲ್ಲಿ ಕಾನೂನು ಅರಿವು ಮೂಡಿ ಸುವ ಕಾರ್ಯಕ್ರಮ ನಡೆಸುತ್ತಿದ್ದು, ಅಧಿಕಾರಿಗಳ ತಂಡ ಸಕ್ರಿಯವಾಗಿ ಇದರಲ್ಲಿ ಪಾಲ್ಗೋಳ್ಳಬೇಕು ಎಂದರು.

Advertisement

ಶೋಷಿತರಿಗೆ ಕಾನೂನು ನೆರವು: ಜಿಲ್ಲಾ ಎಸ್ಪಿ ಹರಿರಾಂ ಶಂಕರ್‌ ಮಾತನಾಡಿ, ದೌರ್ಜ ನ್ಯಕ್ಕೊಳ ಗಾದ ಅನೇಕ ಸಂತ್ರಸ್ತರಿಗೆ ಕಾನೂನಿನಲ್ಲಿ ಪರಿಹಾರಕ್ಕೆ ಅವಕಾಶಗಳಿವೆ ಎಂದು ತಿಳಿದಿರುವುದಿಲ್ಲ. ಕಾನೂ ನಿನ ಬಗ್ಗೆ ಜನತೆಗೆ ಅರಿವು ಮೂಡಿದಾಗ ಕಾನೂನು ನಮಗೆ ನೆರವಾಗುತ್ತದೆ ಎಂಬ ಧೈರ್ಯ ಅವರಲ್ಲಿ ಹುಟ್ಟುತ್ತದೆ ಎಂದರು.

ಸಬಲೀಕರಣಕ್ಕೆ ಕಾನೂನು: ಜಿಲ್ಲಾ ವಕೀಲ ಸಂಘದ ಅಧ್ಯಕ್ಷ ಮಂಜುನಾಥ್‌ ಮೂರ್ತಿ ಅವರು ಮಾತನಾಡಿ, ಕಾನೂನಿನ ಅರಿವಿನ ಮೂಲಕ ಸಾರ್ವಜನಿಕರನ್ನು ಸಬಲೀಕರಣ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಕಾನೂ ನನ್ನು ತಿಳಿದುಕೊಳ್ಳ ಬೇಕಾದದ್ದು ಪ್ರತಿ ನಾಗರಿಕನ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.

ಇದೇ ವೇಳೆ ಕಾನೂನು ಅರಿವು ಜಾಗೃತಿ ಮೂಡಿ ಸುವ ವಾಹನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮ ದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್‌ ನ್ಯಾಯಾ ಧೀಶ ಬಿ.ಕೆ.ರವಿಕಾಂತ್‌ ಹಾಗೂ ವಕೀಲರುಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next