Advertisement

ಮಂಗಳೂರು ಪೊಲೀಸರ ಕೋವಿಡ್ ಕಾಟ: ಗ್ರಾಮಾಂತರ ಠಾಣಾ ಸಿಬ್ಬಂದಿಗೆ ಸೋಂಕು ದೃಢ

05:48 PM Jun 30, 2020 | keerthan |

ಮಂಗಳೂರು: ಕೋವಿಡ್-19 ಸೋಂಕಿನಿಂದ ಜನರನ್ನು ರಕ್ಷಿಸಲು ಹಗಲಿರುಳು ದುಡಿಯುತ್ತಿದ್ದ ಆರಕ್ಷಕ ಸಿಬ್ಬಂದಿಗೆ ಕೋವಿಡ್-19 ಸೋಂಕು ಕಾಟ ಆರಂಭವಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪೊಲೀಸ್ ಠಾಣೆಗಳಿಗೆ ಈಗಾಗಲೇ ಲಗ್ಗೆಯಿಟ್ಟಿರುವ ಕೋವಿಡ್ ಸೋಂಕು ಮತ್ತೆ ತನ್ನ ಜಾಲವನ್ನು ವಿಸ್ತರಿಸಿದೆ.

Advertisement

ಇಂದು ಮಂಗಳೂರು ಹೊರವಲಯದ ವಾಮಂಜೂರು ಗ್ರಾಮಾಂತರ ಠಾಣಾ ಸಿಬ್ಬಂದಿ ಯೋರ್ವರಿಗೆ ಕೋವಿಡ್-19 ಪಾಸಿಟಿವ್ ವರದಿಯಾಗಿದೆ. ಇವರು ಈ ಹಿಂದೆ ಉಳ್ಳಾಲ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ಉಳ್ಳಾಲ ಠಾಣೆಯಲ್ಲಿ ಕರ್ತವ್ಯ ವೇಳೆ ಆರೋಪಿಯೊಬ್ಬನಿಗೆ ಕೋವಿಡ್-19 ಸೋಂಕು ತಗುಲಿತ್ತು. ನಂತರ ಉಳ್ಳಾಲ ಠಾಣೆಯ ಎಸ್ ಐ ಸೇರಿದಂತೆ ಹತ್ತು ಮಂದಿಗೆ ಸೋಂಕು ತಾಗಿತ್ತು. ಈತನ ಸಂಪರ್ಕದಿಂದಲೇ ಈ ಸಿಬ್ಬಂದಿಗೂ ಸೋಂಕು ತಾಗಿರುವ ಶಂಕೆ ವ್ಯಕ್ತವಾಗಿದೆ. ಇವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.

ಕೈದಿಗೆ ಸೋಂಕು: ಮಂಗಳೂರು ಕೇಂದ್ರ ಕಾರಾಗೃಹದ ಖೈದಿಯೋರ್ವನಿಗೆ ಕೋವಿಡ್-19 ಸೋಂಕು ತಾಗಿರುವ ಬಗ್ಗೆ ವರದಿಯಾಗಿದೆ. ಈ ಖೈದಿ ಮನೋರೋಗದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈತ ವೆನ್ಲಾಕ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆ ಸಿಬ್ಬಂದಿಯಿಂದ ಸೋಂಕು ಹರಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಮುನ್ನಚ್ಚೆರಿಕಾ ಕ್ರಮವಾಗಿ ಖೈದಿ ಜೊತೆ ಇದ್ದ ಪೊಲೀಸ್ ಸಿಬ್ಬಂದಿ ಕ್ವಾರೆಂಟೈನ್ ನಲ್ಲಿರಲು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next