Advertisement

ಗೇಮಿಂಗ್ ಗೆ ಮೊಬೈಲ್ ಗಿಂತ ಪಿಸಿಯೇ ಬೆಸ್ಟ್: ಸಮೀಕ್ಷೆ

09:52 AM Jun 11, 2021 | Team Udayavani |

ಬೆಂಗಳೂರು: ಎಚ್ ಪಿ ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ ಭಾರತದಲ್ಲಿನ ಗೇಮಿಂಗ್ ಸಮುದಾಯವು ಗೇಮಿಂಗ್ ಗೆ ಪಿಸಿಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂಬುದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.

Advertisement

ಎಚ್ ಪಿ ಇಂಡಿಯಾ ಗೇಮಿಂಗ್ ಲ್ಯಾಂಡ್ ಸ್ಕೇಪ್ ರಿಪೋರ್ಟ್ 2021 ಪ್ರಕಾರ, ಭಾರತದಲ್ಲಿ ಸ್ಮಾರ್ಟ್ ಫೋನ್ ಗಿಂತ ಪಿಸಿಯೇ ಅತ್ಯುತ್ತಮ ಗೇಮಿಂಗ್ ಅನುಭವ ನೀಡುತ್ತದೆ ಎಂದು ಶೇ.89 ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ, ಪ್ರತಿ 10 ಜನ ಮೊಬೈಲ್ ಗೇಮರ್ ಗಳಲ್ಲಿ 4 ಮಂದಿ ಗೇಮಿಂಗ್ ಗಾಗಿ ಸ್ಮಾರ್ಟ್ ಫೋನ್ ಬದಲಾಗಿ ಪಿಸಿಯನ್ನು ಆಯ್ಕೆ ಮಾಡಿಕೊಳ್ಳುತ್ತೇವೆಂದು ತಿಳಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಪಿಸಿಯು ಸ್ಮಾರ್ಟ್ ಫೋನ್ ಗಿಂತ ಅತ್ಯುತ್ಕೃಷ್ಠವಾದ ಅನುಭವ ನೀಡುತ್ತದೆ ಎಂಬುದಾಗಿದೆ.

ಭಾರತದಲ್ಲಿ, ಮೊಬೈಲ್ ಫೋನ್ ಗಳಿಗೆ ಹೋಲಿಸಿದರೆ ಸೀಮಿತವಾಗಿರುವ ಪಿಸಿ, ಗೇಮಿಂಗ್ ಉದ್ಯಮಕ್ಕೆ ಬೆಳವಣಿಗೆಯ ಅವಕಾಶವನ್ನು ಪ್ರತಿನಿಧಿಸುತ್ತದೆ. ಗೇಮಿಂಗ್ ಗಾಗಿ ಪಿಸಿಗಳಿಗೆ ಸ್ಥಳಾಂತರಗೊಳ್ಳಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಶೇ.70 ರಷ್ಟು ಮಿಲೇನಿಯಲ್ಸ್ ಮತ್ತು ಜನರೇಷನ್ ಝಡ್ ವರ್ಗದ ಪ್ರತಿಕ್ರಿಯೆದಾರರು ಮತ್ತು ಶೇ.75 ರಷ್ಟು ಕ್ಯಾಶುವಲ್ ಮತ್ತು ಉತ್ಸಾಹಿ ಗೇಮರ್ ಗಳು ಪಿಸಿಗೆ ಸ್ಥಳಾಂತರಗೊಳ್ಳಲು ಹೆಚ್ಚಿನ ಆಸಕ್ತಿ ತೋರಿದ್ದಾರೆ. 2 ನೇ ಶ್ರೇಣಿಯ ನಗರಗಳಲ್ಲಿ ಶೇ.94 ರಷ್ಟು ಜನರು, 1ನೇ ಶ್ರೇಣಿಯ ನಗರಗಳಲ್ಲಿನ ಶೇ.88 ರಷ್ಟು ಮತ್ತು ಮೆಟ್ರೋ ನಗರಗಳಲ್ಲಿ ಶೇ.87 ರಷ್ಟು ಜನರು ಗೇಮಿಂಗ್ ಗೆ ಮೊಬೈಲ್ ಫೋನ್ ಗಳ ಬದಲಿಗೆ ಪಿಸಿಯನ್ನು ಬಯಸುತ್ತಾರೆ.

ಪ್ರತಿಕ್ರಿಯೆ ನೀಡಿದವರಲ್ಲಿ ಗೇಮಿಂಗ್ ಗೆ ಮೊಬೈಲ್ ಗಳಿಗಿಂತ ಪಿಸಿಗಳಿಗೆ ಆದ್ಯತೆ ನೀಡಲು ನೀಡಿದ ಕಾರಣಗಳು ಇಲ್ಲಿವೆ:

ಪ್ರಮುಖ ಕಾರಣವೆಂದರೆ ಪಿಸಿಯಲ್ಲಿನ ಉತ್ತಮ ಪ್ರೊಸೆಸಿಂಗ್ ವೇಗ, ಕಾರ್ಯದಕ್ಷತೆ ಮತ್ತು ಅತ್ಯುತ್ತಮ ಧ್ವನಿ ಸೇರಿವೆ.

Advertisement

ವೃತ್ತಿಯಾಗಿ ಗೇಮಿಂಗ್ ಆಯ್ಕೆ: ಗೇಮಿಂಗ್ ಸಹ ಕಾರ್ಯಸಾಧ್ಯವಾದ ವೃತ್ತಿಜೀವನದ ಅವಕಾಶವಾಗಿ ಹೊರಹೊಮ್ಮಿದ್ದು, ಈ ಗೇಮಿಂಗ್ ಉದ್ಯಮವು ತಮ್ಮ ವೃತ್ತಿ ಜೀವನದ ಕಾರ್ಯಸಾಧ್ಯವಾದ ಆಯ್ಕೆಯಾಗಿದೆ ಎಂದು ಶೇ.90 ಕ್ಕೂ ಹೆಚ್ಚು ಜನರು ಒಪ್ಪಿಕೊಂಡಿದ್ದಾರೆ. ಆಶ್ಚರ್ಯವೆಂದರೆ, ಪ್ರತಿಕ್ರಿಯೆ ನೀಡಿರುವ ಮಹಿಳೆಯರ ಪೈಕಿ ಶೇ.84 ರಷ್ಟು ಜನರು ಗೇಮಿಂಗ್ ಅನ್ನು ತಮ್ಮ ವೃತ್ತಿ ಜೀವನದಂತೆ ಮುಂದುವರಿಸಲು ಬಯಸಿದ್ದಾರೆ. ಇದರ ಜತೆಗೆ ಶೇ.80 ರಷ್ಟು ಪುರುಷರು, ಜನರೇಷನ್ X ಶೇ.91 ಹಾಗೂ ಶೇ.88 ರಷ್ಟು ಶಾಲಾ ವಿದ್ಯಾರ್ಥಿಗಳು ಗೇಮಿಂಗ್ ಅನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳಲು ಬಯಸಿದ್ದಾರೆ. 2 ನೇ ಶ್ರೇಣಿಯ ಶೇ.84 ರಷ್ಟು ಜನರು ಜನರು ಗೇಮಿಂಗ್ ಉದ್ಯಮದಲ್ಲಿ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಬಯಸಿದ್ದರೆ, ಮೆಟ್ರೋ ನಗರಗಳ ಶೇ.78 ರಷ್ಟು ಮಂದಿ ಇದನ್ನು ವೃತ್ತಿಯನ್ನಾಗಿ ಮಾಡಿಕೊಳ್ಳಲು ಬಯಸಿದ್ದಾರೆ.

ಮಹಿಳೆಯರು, ಜನರೇಷನ್ Z, ಪಶ್ಚಿಮ ಭಾರತದ ಪ್ರತಿಕ್ರಿಯೆದಾರರು, ಮತ್ತು 2 ನೇ ಶ್ರೇಣಿಯ ಪಟ್ಟಣಗಳ ಜನತೆ ವೃತ್ತಿ ಜೀವನದಂತೆ ಗೇಮಿಂಗ್ ಗೆ ಹೆಚ್ಚಿನ ಒಲವು ತೋರಿದ್ದಾರೆ.

ಎಚ್ ಪಿ ಇಂಡಿಯಾದ ಮಾರ್ಕೆಟ್ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಕೇತನ್ ಪಟೇಲ್  ಈ ಬಗ್ಗೆ ಮಾತನಾಡಿ, “ಜನರು ಹೆಚ್ಚಿನ ಸಮಯವನ್ನು ಮನೆಯಲ್ಲೇ ಕಳೆಯುತ್ತಿರುವುದರಿಂದ ಗೇಮಿಂಗ್ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಜನರು ಮನರಂಜನೆಯ ಹೊಸ ಹೊಸ ವಿಧಾನಗಳು, ತಾಣಗಳನ್ನು ಹುಡುಕುತ್ತಿದ್ದಾರೆ, ಒತ್ತಡದಿಂದ ಹೊರ ಬರಲು ಮತ್ತು ಸಾಮಾಜಿಕ ಸಂಪರ್ಕದಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸಮಗ್ರ ಗೇಮಿಂಗ್ ಅನುಭವವನ್ನು ನೀಡುವ ಒಂದು ಅತ್ಯುತ್ತಮ ಸಾಧನವಾಗಿ ಪಿಸಿ ಹೊರ ಹೊಮ್ಮಿದೆ ಎಂದಿದ್ದಾರೆ.

ಗೇಮಿಂಗ್ ಅಲ್ಲದೇ, ಸಮೀಕ್ಷೆಯಲ್ಲಿ ಪ್ರತಿಕ್ರಿಯೆ ನೀಡಿರುವವರಲ್ಲಿ ಪ್ರಮುಖವಾಗಿ ಮನರಂಜನೆ ಬಗ್ಗೆ ಶೇ.54 ರಷ್ಟು, ಫೋಟೋ/ವಿಡಿಯೋ ಎಡಿಟಿಂಗ್ ಗೆ ಶೇ.54 ಹಾಗೂ ಗ್ರಾಫಿಕ್ ಡಿಸೈನ್ ಗೆ ಶೇ.48 ರಷ್ಟು ಮಂದಿ ಆಸಕ್ತಿ ತೋರಿದ್ದು, ಇದಕ್ಕಾಗಿ ಪಿಸಿಯನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

ಒತ್ತಡ ನಿವಾರಕವಾಗಿ ಗೇಮಿಂಗ್: ಮತ್ತೊಂದು ಪ್ರಮುಖ ಅಂಶವೆಂದರೆ, ಪಿಸಿ ಗೇಮಿಂಗ್ ಹೆಚ್ಚಳಕ್ಕೆ ಕಾರಣವೆಂದರೆ ಈ ಗೇಮಿಂಗ್ ಒತ್ತಡ ನಿವಾರಕವಾಗಿರುವುದು. ಸೀಮಿತ ಸಾಮಾಜಿಕ ಸಂವಹನ ನಡೆಸುವಂತಹ ಸವಾಲಿನ ಈ ಸಂದರ್ಭದಲ್ಲಿ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ಪರಸ್ಪರ ಸಂಪರ್ಕಿಸುವ ಒಂದು ಸಾಧನವಾಗಿ ಪಿಸಿ ಪರಿಣಮಿಸಿದೆ. ಗೇಮಿಂಗ್ ಕೆಲಸ/ವಿದ್ಯಾಭ್ಯಾಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ನೆರವಾಗುತ್ತಿದೆ ಎಂದು ಶೇ.92 ರಷ್ಟು ಜನರು ಹೇಳಿದ್ದಾರೆ. ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಮತ್ತು ಧನಾತ್ಮಕವಾದ ಭಾವನೆಗಳನ್ನು ಹೊಂದಲು ನೆರವಾಗುತ್ತದೆ ಎಂದು ಅವರು ಹೇಳಿದ್ದಾರೆ. ಇದಲ್ಲದೇ, ಈ ಗೇಮಿಂಗ್ ಉನ್ನತ ಮಟ್ಟದ ಸಾಮಾಜಿಕತೆಯನ್ನು ಉತ್ತೇಜಿಸುತ್ತದೆ ಹಾಗೂ ಹೊಸ ಸ್ನೇಹಿತರನ್ನು ಹೊಂದಲು ಸಹಾಯ ಮಾಡುತ್ತದೆ ಎಂದು ಶೇ.91 ರಷ್ಟು ಜನರು ಹೇಳಿದ್ದಾರೆ. ಅದೇರೀತಿ, ಈ ಗೇಮಿಂಗ್ ಗಮನ ಮತ್ತು ಏಕಾಗ್ರತೆಯ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಶೇ.91 ರಷ್ಟು ಜನರು ಹೇಳುತ್ತಾರೆ.

ಪಿಸಿ ಖರೀದಿಸುವಾಗ ಗ್ರಾಹಕ ಆದ್ಯತೆ: ಪಿಸಿ ಆಯ್ಕೆ ಮಾಡುವಲ್ಲಿ, ವಿಶೇಷವಾಗಿ ಗೇಮಿಂಗ್ ಗಾಗಿ ಬಳಕೆದಾರರ ಪ್ರಮುಖ ಆದ್ಯತೆಗಳ ಬಗ್ಗೆ ಸಮೀಕ್ಷೆಯನ್ನೂ ನಡೆಸಲಾಗಿದೆ. ಸಮೀಕ್ಷೆ ಮಾಡಿದ ಎಲ್ಲಾ ಪಿಸಿ ಬಳಕೆದಾರರಲ್ಲಿ ಮೂರನೇ ಒಂದು ಭಾಗದಷ್ಟು (ಶೇ.33) ಜನರು ತಮ್ಮ ಖರೀದಿ ನಿರ್ಧಾರ ತೆಗೆದುಕೊಳ್ಳುವಾಗ ಗೇಮಿಂಗ್ ವೈಶಿಷ್ಟ್ಯತೆಗಳನ್ನು ಬಯಸುತ್ತಾರೆ. ಗೇಮಿಂಗ್ ಪಿಸಿಯನ್ನು ಆಯ್ಕೆ ಮಾಡುವಾಗ ಉತ್ತಮ ಪ್ರೊಸೆಸಿಂಗ್ ವೇಗ (ಶೇ.65) ಮತ್ತು ಗ್ರಾಫಿಕ್ಸ್ ಸಾಮರ್ಥ್ಯಗಳ (ಶೇ.64) ಗ್ರಾಹಕರು ಪರಿಗಣಿಸುತ್ತಾರೆ.

ಪಿಸಿ ಗೇಮಿಂಗ್ ನಲ್ಲಿನ ಬೆಳವಣಿಗೆಗಳು, ಪ್ರದೇಶಗಳು ಮತ್ತು ಭವಿಷ್ಯದ ವರ್ಧನೆಗಳ ಉನ್ನತ ಪ್ರತಿಕ್ರಿಯೆಗಳು ಈ ರೀತಿ ಇವೆ:

ಗೇಮರ್ ಗಳು ತಮ್ಮ ಗೇಮಿಂಗ್ ಪಿಸಿಗಳಲ್ಲಿ ಅತ್ಯುತ್ಕೃಷ್ಠವಾದ ಗ್ರಾಫಿಕ್ಸ್, ಬ್ಯಾಟರಿಗಳು ಮತ್ತು ಇನ್ನೂ ಹೆಚ್ಚಿನ ಮಟ್ಟದ ಡಿಸ್ ಪ್ಲೇ ಹಾಗೂ ಆವಿಷ್ಕಾರಗಳನ್ನು ನಿರೀಕ್ಷಿಸುತ್ತಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಭಾರತದಲ್ಲಿ ವಿಶೇಷವಾಗಿ ಸಾಂಕ್ರಾಮಿಕದ ಸಂದರ್ಭದಲ್ಲಿ ಪಿಸಿಯ ಪಾತ್ರ ಬಹುಮುಖ್ಯವಾಗಿದೆ ಎಂಬುದನ್ನು ಹೇಳುತ್ತದೆ. ಹೆಚ್ಚಿನ ಜನರು ಪಿಸಿ ಗೇಮಿಂಗ್ ನತ್ತ ಒಲವು ತೋರುತ್ತಿದ್ದಾರೆ ಮಾತ್ರವಲ್ಲದೇ, ಸಾಮಾಜಿಕ ಸಂಪರ್ಕವನ್ನು ಹೆಚ್ಚಿಸಲು ಹಾಗೂ ಒತ್ತಡವನ್ನು ನಿವಾರಿಸಲು ಇದು ಒಂದು ಆದ್ಯತೆಯ ಸಾಧನವಾಗಿದೆ.

ವಿಧಾನ: ಒಟ್ಟಾರೆಯಾಗಿ, ಮಾರ್ಚ್ ಮತ್ತು ಏಪ್ರಿಲ್ 2021 ರ ನಡುವೆ ದೇಶದ 25 ಮೆಟ್ರೋಗಳು, ಶ್ರೇಣಿ 1, ಮತ್ತು ಶ್ರೇಣಿ-2 ನಗರಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, 1,500 ಪ್ರತಿಕ್ರಿಯೆದಾರರು ಪಿಸಿ ಗೇಮಿಂಗ್ ಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇವರಲ್ಲಿ 15 ವರ್ಷದಿಂದ 40 ವರ್ಷದವರೆಗಿನ ಪುರುಷರು (ಶೇ.72) ಮತ್ತು ಮಹಿಳೆಯರು (ಶೇ.28) ಪ್ರತಿಕ್ರಿಯೆ ನೀಡಿದ್ದಾರೆ. ಇವರೆಲ್ಲಾ ಎಸ್ಇಸಿ ಎ1, ಎ2 ಮತ್ತು ಬಿ1 ವಿಭಾಗಗಳನ್ನು ಪ್ರತಿನಿಧಿಸಿದ್ದರು. ಇವರೆಲ್ಲಾ ಪಿಸಿ ಮತ್ತು/ಅಥವಾ ಮೊಬೈಲ್ ಫೋನ್ ಬಳಕೆದಾರರಾಗಿದ್ದು, ಪಿಸಿಗಳು ಹಾಗೂ ಸ್ಮಾರ್ಟ್ ಫೋನ್ ಗಳಲ್ಲಿ ಆಕ್ಷನ್ ಹಾಗೂ ಸಾಹಸ ಆಟಗಳಲ್ಲಿ ತೊಡಗಿಕೊಂಡವರಾಗಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next