Advertisement

ಪಿಬಿಎಲ್‌: ಇಂದಿನಿಂದ ಸೆಮಿಫೈನಲ್‌ ಆರಂಭ

12:40 AM Jan 11, 2019 | |

ಬೆಂಗಳೂರು: ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ (ಪಿಬಿಎಲ್‌) ಕೂಟದ ಕ್ವಾರ್ಟರ್‌ ಫೈನಲ್‌ ಹಂತದ ಪಂದ್ಯಗಳು ಮುಗಿದಿದ್ದು, ಶುಕ್ರವಾರದಿಂದ ಬೆಂಗಳೂರಿನಲ್ಲಿ ಸೆಮಿಫೈನಲ್‌ ಸಮರ ಆರಂಭವಾಗಲಿದೆ.

Advertisement

ಶುಕ್ರವಾರ ಮೊದಲನೇ ಸೆಮಿಫೈನಲ್‌, ಶನಿವಾರ 2ನೇ ಸೆಮಿಫೈನಲ್‌ ಪಂದ್ಯ ನಡೆಯಲಿದೆ. ಜ. 13ರಂದು ಪ್ರಶಸ್ತಿ ಸಮರ ಏರ್ಪಡಲಿದೆ. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಎಲ್ಲ ಸ್ಪರ್ಧೆಗಳು ಸಾಗಲಿವೆ. ಲೀಗ್‌ ಹಂತದಲ್ಲಿ ಅಮೋಘ ಪ್ರದರ್ಶನ ನೀಡಿದ ಅವಧ್‌ ವಾರಿಯರ್ಸ್‌, ಹೈದರಾಬಾದ್‌ ಹಂಟರ್ಸ್‌, ಮುಂಬೈ ರಾಕೆಟ್ಸ್‌ ಮತ್ತು ಬೆಂಗಳೂರು ರಾಪ್ಟರ್ಸ್‌ ಸೆಮಿಫೈನಲ್‌ ಹಣಾಹಣಿಗೆ ಅಣಿಯಾಗಿವೆ. ಈ ತಂಡಗಳು ಪ್ರಶಸ್ತಿ ಮೇಲೆ ಕಣ್ಣಿಟ್ಟಿವೆ. ನೆಚ್ಚಿನ ತಂಡ ಯಾವುದು ಎನ್ನುವ ಕುರಿತು ನಾನಾ ಲೆಕ್ಕಾಚಾರಗಳು ಮೊದಲ್ಗೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next